ಬೆಂಗಳೂರು:ತನ್ನ ಹೆಂಡತಿಯನ್ನೇ ಡಂಬೆಲ್ಸ್​​ ಬಳಸಿ ಇಲ್ಲೊಬ್ಬ ಪತಿಯಾರ ಭೀಕರವಾಗಿ ಕೊಲೆ ಮಾಡಿದ್ದಾನೆ. ಈತ ಡಂಬೆಲ್​ ಬಳಸಿ ಹೆಂಡತಿಯ ತಲೆಗೆ ತೀವ್ರವಾಗಿ ಹೊಡೆದಿದ್ದು ರಕ್ತ ಧಾರಾಕಾರವಾಗಿ ನೆಲದಲ್ಲಿ ಹರಿದಿದೆ. ಮಹಿಳೆಯ ಮುಖವೂ ಒಮ್ಮೆಗೆ ಗುರುತು ಸಿಗದಷ್ಟು ರಕ್ತಸಿಕ್ತವಾಗಿದೆ. ಈ ಘಟನೆ ನಡೆದದ್ದು ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ.
ಇದನ್ನೂ ಓದಿ:ಹೆಂಡತಿ ಸಾಯುವವರೆಗೂ ಡಂಬೆಲ್ಸ್​ನಿಂದ ಹೊಡೆಯುತ್ತಲೇ ಭೀಕರವಾಗಿ ಕೊಲೆ ಮಾಡಿದ ಪತಿರಾಯ!
ಮೊರೀಸ್ ಎಂಬಾತ, ತನ್ನ ಪತ್ನಿಯಾದ ಲೈದಿಯಾಳನ್ನು(44) ಕೊಲೆ ಮಾಡಿದ್ದಾನೆ. ಬೆಳಗ್ಗೆ 9.30ಕ್ಕೆ ಈ ಘಟನೆ ನಡೆದಿತ್ತು. ಈ ಭೀಕರ ಕೊಲೆಗೆ ಸಂಬಂಧಿಸಿದಂತೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಹೇಳಿಕೆ ನೀಡಿದ್ದಾರೆ.
‘ಬೆಳಗ್ಗೆ ಸುಮಾರು 10.30ಗಂಟೆ ಸುಮಾರಿಗೆ ಹೊಯ್ಸಳ ಕಂಟ್ರೋಲ್ ರೂಮ್​ಗೆ ಕರೆ ಮಾಡಿದ್ದ ಮೋರಿಸ್​, ತನ್ನ ಮನೆಯಲ್ಲಿ ಕೌಟುಂಬಿಕ ಗಲಾಟೆ ನಡೀತಿದೆ ಎಂದು ಹೇಳುತ್ತಾನೆ. ಇದಕ್ಕೆ ತಕ್ಷಣ ಸ್ಪಂದಿಸಿದ ಹೊಯ್ಸಳ ಪೊಲೀಸರು ಘಟನಾ ಸ್ಥಳಕ್ಕೆ ಹೋದಾಗ ನಮ್ಮ ಪೊಲೀಸರೇ ರಕ್ತದ ಮಡಿಲು ನೋಡಿ ಶಾಕ್ ಆಗಿದ್ದಾರೆ.
ಈ ವೇಳೆ ‘ನನ್ನ ಪತ್ನಿಯದ್ದೇ ಶವ ಸಾರ್. ನಾನೇ ಡಂಬಲ್ಸ್ ನಿಂದ ಹೊಡೆದಿದ್ದೇನೆ. ಕೊಲೆ‌ ಆದ್ಳು’ ಎಂದು ಮೋರಿಸ್​ ಹೇಳಿದ್ದಾನೆ. ಆತ ಲೈದಿಯಾಳನ್ನು ಸುಮಾರು 5-6ಬಾರಿ ಹೊಡೆದು ಕೊಲೆ ಮಾಡಿದ್ದಾನೆ. ಮೂರು ಮಹಡಿಯ ಕಟ್ಟಡಲ್ಲಿ ಎರಡನೇ ಮನೇಲಿ ಇವರು ವಾಸ ಇರುತ್ತಾರೆ. ಬೆಳಗ್ಗೆ ಮಕ್ಕಳು ಶಾಲೆಗೆ ಹೋದಾಗ ಗಲಾಟೆ ಆಗಿ ಕೊಲೆ ಆಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − fourteen =
Remember me
