ಚಿಕ್ಕಬಳ್ಳಾಪುರ:ವರದಕ್ಷಿಣೆ ಕಿರುಕುಳ, ಹೆಂಡತಿಯ ಅಕ್ರಮ ಸಂಬಂಧ ಹಿನ್ನಲೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಗಂಡನೇ ಹೆಂಡತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಚಿಂತಾಮಣಿ‌ ತಾಲೂಕು ಮುರಗಮಲ್ಲದ ಎಂ.ಗೊಲ್ಲಪಲ್ಲಿ ಗ್ರಾ.ಪಂ ವ್ಯಾಪ್ತಿಯ ಕೊಂಡ್ಲಿಗಾನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ವಿನೋದಮ್ಮ ಮೃತ ಮಹಿಳೆ. ಈಕೆ ಪತಿ ಕೆಎಸ್ ಸುರೇಶ್ ಕೊಲೆ ಆರೋಪಿಯಾಗಿದ್ದಾನೆ. ಚಿಂತಾಮಣಿ ತಾಲೂಕು ಕೊಂಡ್ಲಿಗಾನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಕುರುಬ ಜನಾಂಗಕ್ಕೆ ಸೇರಿದ ಕೆ.ಎಸ್ ಸುರೇಶ್, ಆದೇ ಗ್ರಾಮದ ಗೊಲ್ಲ ಸಮುದಾಯಕ್ಕೆ ಸೇರಿದ ವಿನೋದಮ್ಮ ಎಂಬ ಮಹಿಳೆಯನ್ನು ಕಳೆದ 16 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಇವರಿಗೆ 14 ವರ್ಷದ ಹೆಣ್ಣು ಮಗಳು‌ ಕೂಡ ಇದ್ದಾಳೆ.
ಇದನ್ನೂ ಓದಿ:ಪುರುಷ ಕಾರ್ಮಿಕರಿಗೂ ಸ್ತನ ಕ್ಯಾನ್ಸರ್‌ ಪರೀಕ್ಷೆ ಹೆಸರಲ್ಲಿ ಅಕ್ರಮ! ಮುಖ್ಯ ಆರೋಪಿಯೇ ತನಿಖಾಧಿಕಾರಿ
ಹತ್ತು ವರ್ಷಗಳಿಂದ ಸುಖವಾಗಿದ್ದ ಇವರು. ಇತ್ತೀಚೆಗೆ‌ ಸುರೇಶ್ ಹೆಂಡತಿಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪಿಡಿಸುತ್ತಿದ್ದನು ಎಂಬ ಆರೋಪನ್ನು ವಿನೋದಮ್ಮಳ ಪೋಷಕರಿಂದ ಕೇಳಿ ಬರುತ್ತಿದೆ. ಹೆಂಡತಿ ಬೇರೆಯವರೊಂದಿಗೆ ಆಕ್ರಮ ಸಂಬಂಧ ಹೊಂದಿದ್ದಳು ಎಂಬ ಅನುಮಾನದ ಮೇಲೆ ವಿನೋದಮ್ಮಳನ್ನು ಮಚ್ಚಿನಿಂದ ಕುತ್ತಿಗೆ ಸೀಳಿ ಕೊಚ್ಚಿ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಸುರೇಶ್ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚಿಂತಾಮಣಿ ಉಪ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ, ಕೆಂಚಾರ್ಲಹಳ್ಳಿ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕ ಪುರುಷೋತ್ತಮ್, ಬಟ್ಲಹಳ್ಳಿ ಪಿಎಸ್ಐ ಪುನೀತ್ ಹಾಗೂ ಬಟ್ಲಹಳ್ಳಿ ಪೊಲಿಸರು ಭೇಟಿ ನೀಡಿ ಸ್ಥಳ ಪರೀಶಿಲನೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಮದ್ವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯಕರನಿಗೆ ಬಿಸಿನೀರು ಎರಚಿ, ಬಾಟಲ್​ನಿಂದ ಹಲ್ಲೆ ಮಾಡಿ ಪ್ರೇಯಸಿ ಎಸ್ಕೇಪ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
