ವ್ಯಕ್ತಿಯಲ್ಲಿ ಮೌಲ್ಯಗಳು ಒಮ್ಮಿಂದೊಮ್ಮೆ ಉಗಮಿಸುವುದಿಲ್ಲ. ಬಾಲ್ಯಾವಸ್ಥೆಯಿಂದ ಹಂತಹಂತವಾಗಿ ಕ್ರಮೇಣ ಉನ್ನತ ಸ್ಥಿತಿಗಳಿಗೆ ಆರೋಹಿಸುವ ಆಧ್ಯಾತ್ಮಿಕ ಮೌಲ್ಯಗಳನ್ನು ಸ್ಪಷ್ಟವಾಗಿ ನಿರೂಪಿಸಿ ಕ್ರಮಬದ್ಧವಾಗಿ ಅಳವಡಿಸಬೇಕು. ಇದು ನಮ್ಮ ಕೌಟುಂಬಿಕ ಶಿಕ್ಷಣ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಬೇಕು. ಋಷಿಯಾಗಲು ಬಾಲ್ಯದಿಂದಲೇ ತರಬೇತಿ ಆರಂಭವಾಗಬೇಕು. ಧಾರ್ವಿುಕ ಮತ್ತು ಆಧ್ಯಾತ್ಮಿಕವಾಗಿ ಪ್ರಾಥಮಿಕ ಹಂತ ತಲುಪಿದ ಗೃಹಸ್ಥರೂ ಅಭ್ಯಾಸ ಮತ್ತು ಅನುಷ್ಠಾನಗಳಿಂದ ಮುಂದಿನ ಉನ್ನತ ಅವಸ್ಥೆಗಳಿಗೆ ವಿಕಾಸ ಹೊಂದಲು ಪ್ರಯತ್ನಿಸಬೇಕು. ಈ ಆಧ್ಯಾತ್ಮಿಕ ಯಾತ್ರೆಯಲ್ಲಿ ಪ್ರತಿಯೊಂದು ಹೆಜ್ಜೆಯೂ ತನ್ನದೇ ಆದ ಸೌಲಭ್ಯಗಳನ್ನು ಹೊಂದಿದೆ.
ಯತಃ ಪ್ರವೃತ್ತಿ ರ್ಭತಾನಾಂ ಯೇನ ಸರ್ವಮಿದಂ ತತಮ್ |
ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವ ||
ಯಾರ ದೆಸೆಯಿಂದ ಪ್ರಾಣಿಗಳ ಉತ್ಪತ್ತಿ ಉಂಟಾಗುವುದೋ, ಯಾರಿಂದ ಈ ಜಗತ್ತೆಲ್ಲವೂ ವ್ಯಾಪ್ತವಾಗಿರುವುದೋ ಅವನನ್ನು ಸ್ವಕರ್ಮದಿಂದ ಆರಾಧಿಸಿ ಮುನುಷ್ಯ ಸಿದ್ಧಿಯನ್ನು ಹೊಂದುತ್ತಾನೆ.
ಭಾರತೀಯ ಸನಾತನ ಸಂಸ್ಕೃತಿಯ ಪರಂಪರೆಯಲ್ಲಿ ಧರ್ಮ ಸಮ್ಮತವಾದ ಭೋಗಜೀವನ ಮತ್ತು ಆಧ್ಯಾತ್ಮಿಕವಾದ ತ್ಯಾಗ ಜೀವನಗಳು ಪರಸ್ಪರ ಹೆಣೆದುಕೊಂಡೇ ಸಾಗಿ ಬಂದಿವೆ. ಪ್ರಕೃತಿ ನೀಡಿದ ಸಮರಸ ಭೋಗವನ್ನು ಕ್ರಮಶಃ ಅಂತ್ಯಗೊಳಿಸಿ-ಯೋಗ ಜೀವನವನ್ನು ಪ್ರತಿಯೊಬ್ಬರು ಪ್ರಾರಂಭಿಸುವುದಕ್ಕೆ ಹಕ್ಕುದಾರರು; ಏಕೆಂದರೆ ಆಂತರ್ಯದ ದೈವತ್ವ ನಮ್ಮ ಪ್ರತಿಯೊಬ್ಬರ ನಿಜ ಸ್ವರೂಪ. ಅದನ್ನು ಎಲ್ಲರೂ ಅನುಭವಿಸಲು ಪ್ರಯತ್ನಿಸಿದಾಗ ಜೀವನ ಅತ್ಯವಶ್ಯಕ ಸತ್ಯದರ್ಶನ ಮತ್ತು ಆನಂದದ ಘಟ್ಟವನ್ನು ಏರುವುದು. ಈ ಲಕ್ಷಣವು, ಭಾರತೀಯ ಸಂಸ್ಕೃತಿಯನ್ನು, ಕೇವಲ ಲೌಕಿಕ ಜೀವನವನ್ನು ಗುರಿಯಾಗುಳ್ಳ ಅನ್ಯಸಂಸ್ಕೃತಿಗಳಿಂದ ಪ್ರತ್ಯೇಕಿಸಿ ವಿಶಿಷ್ಟವಾಗಿಸಿದೆ. ಉಳಿದ ಎಲ್ಲ ಪ್ರಾಚೀನ ಸಂಸ್ಕೃತಿಗಳು ಕಾಲಪ್ರವಾಹದಲ್ಲಿ ಏಳು-ಬೀಳುಗಳನ್ನು ಅನುಭವಿಸಿ ನಾಶವಾಗಿವೆ. ಇನ್ನು ಕೆಲವು ಸಂಸ್ಕೃತಿಗಳ ಅವಶೇಷ ಮಾತ್ರ ಉಳಿದಿದೆ. ಆದರೆ ಅಧ್ಯಾತ್ಮ ಕೇಂದ್ರಿತ ಗೃಹಸ್ಥಧರ್ಮವನ್ನೊಳಗೊಂಡ ನಮ್ಮ ಸನಾತನ ಸಂಸ್ಕೃತಿ ತನ್ನ ಆಂತರಿಕ ಸತ್ವ ಮತ್ತು ಶಕ್ತಿಯನ್ನು ಅಳಿಸಿಕೊಳ್ಳದೇ ಉಳಿಸಿಕೊಂಡಿದೆ. ಪ್ರಸ್ತುತ ಆಧುನಿಕ ವೈಜ್ಞಾನಿಕ ಯುಗದಲ್ಲೂ ನಮ್ಮ ಸಂಸ್ಕೃತಿ ಜೀವಂತವೂ, ಅಭಿವೃದ್ಧಿಶೀಲವೂ, ವೈವಿಧ್ಯಮಯವೂ ಆದ ಮಹಾಶಕ್ತಿಯೆನಿಸಿದೆ. ಜಗತ್ತಿನ ವಿವಿಧ ಸಂಸ್ಕೃತಿಗಳು ನಮ್ಮ ಸನಾತನ ಧರ್ಮದಿಂದ ಇಂದಿಗೂ ಉತ್ತಮ ವಿಚಾರಗಳನ್ನೂ ಮತ್ತು ಉನ್ನತ ಆದರ್ಶಗಳನ್ನೂ ಸ್ವೀಕರಿಸುತ್ತ ಬಂದಿವೆ ಎನ್ನುವುದನ್ನು ಇಂದಿನ ಯುವಕರು ತಿಳಿದುಕೊಳ್ಳುವುದು ಅವಶ್ಯಕ.
ಬದಲಾಗುತ್ತಿರುವ ಜೀವನಶೈಲಿ, ಹೊರಬರುತ್ತಿರುವ ಆಧುನಿಕ ಸಾಹಿತ್ಯ ಕೃತಿಗಳನ್ನು ಸಮೀಕ್ಷಿಸಿದರೆ, ಯೋಗ ಮತ್ತು ಧ್ಯಾನಕ್ಕೆ ವಿಶ್ವಾದ್ಯಂತ ಹೆಚ್ಚುತ್ತಿರುವ ಬೇಡಿಕೆ, ಆಯುರ್ವೆದ ಪಡೆಯುತ್ತಿರುವ ಜನಪ್ರಿಯತೆಯನ್ನು ತಿಳಿದರೆ, ಭಾರತೀಯ ಸಂಸ್ಕೃತಿ ಮತ್ತು ಕೌಟುಂಬಿಕ ಬಾಂಧವ್ಯಗಳ ಬಗ್ಗೆ ಹೆಚ್ಚುತ್ತಿರುವ ಮೆಚ್ಚುಗೆಯನ್ನು ಪರಿಗಣಿಸಿದರೆ ಭಾರತೀಯ ಚಿಂತನೆ ಮತ್ತು ಅಧ್ಯಾತ್ಮ ಅದೆಷ್ಟು ನೀರವವಾಗಿ ಜಗತ್ತನ್ನು ಸರ್ವರ ಒಳಿತಿಗಾಗಿ ಪ್ರಭಾವಿಸುತ್ತಿದೆ ಎಂಬ ಅಂಶ ನಮ್ಮೆಲ್ಲರ ಗಮನಕ್ಕೆ ಬಾರದೇ ಹೋಗುವುದಿಲ್ಲ. ಇದೇ ನಮ್ಮ ಸನಾತನ ಧರ್ಮ ಸಂಸ್ಕೃತಿಯ ಶಕ್ತಿ. ಇದನ್ನು ಯುವಕರಿಗೆ ಮತ್ತು ಮಕ್ಕಳಿಗೆ ಅರ್ಥಪೂರ್ಣವಾಗಿ ತಿಳಿಸುವ ಪರಿಪೂರ್ಣ ನವಶಿಕ್ಷಣ ಪದ್ಧತಿಯ ನಿರ್ಮಾಣ ಇಂದು ಅಗತ್ಯವಿದೆ.
ಸಾರ್ಥಕ ಗೃಹಸ್ಥ ಜೀವನದ ಮೂರು ಸೂತ್ರಗಳು
(1) ಕರ್ಮಯೋಗ ಮತ್ತು ಕೌಟುಂಬಿಕ ಜೀವನ: ಕೌಟುಂಬಿಕ ಜೀವನ ಜಟಿಲವಾದ ಕರ್ಮ ಮತ್ತು ಚಟುವಟಿಕೆಗಳನ್ನು ಆಧರಿಸಿದೆ. ಆದ್ದರಿಂದ ದೈನಂದಿನ ಕರ್ಮಗಳನ್ನು ಆಧ್ಯಾತ್ಮೀಕರಣಗೊಳಿಸುವ ಕಲೆಯನ್ನು ಕಲಿಯುವುದು ತುಂಬ ಮುಖ್ಯ. ಈ ವಿಚಾರದಲ್ಲಿ ಭಗವದ್ಗೀತೆ ನಮಗೆ ಸ್ಪೂರ್ತಿಯನ್ನೂ, ಸೂಕ್ತ ಮಾರ್ಗದರ್ಶನವನ್ನೂ ನೀಡುತ್ತದೆ.
ಯೋಗಸ್ಥಃ ಕುರು ಕರ್ವಣಿ ಸಂಗಂ ತ್ಯಕ್ತಾ್ವ ಧನಂಜಯ |
ಸಿದ್ಧ್ಯದ್ಧೊ್ಯೕಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ ||
(ಭಗವದ್ಗೀತೆ: ಅಧ್ಯಾಯ 2, ಶ್ಲೋಕ 48)
‘ಆಸಕ್ತಿಯನ್ನು ತ್ಯಜಿಸಿ, ಸಿದ್ಧಿ-ಅಸಿದ್ಧಿಗಳಲ್ಲಿ ಸಮಾನ ಬುದ್ಧಿಯುಳ್ಳವನಾಗಿ, ಯೋಗದಲ್ಲಿ ಸ್ಥಿರವಾಗಿದ್ದು ಕರ್ಮಗಳನ್ನು ಮಾಡು, ಓ ಧನಂಜಯ. ಈ ಸಮತ್ವ ಭಾವವೇ ಯೋಗವೆಂದು ಹೇಳಲ್ಪಡುತ್ತದೆ’.
ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ |
ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಮ್ ||
(ಭಗವದ್ಗೀತೆ ಅಧ್ಯಾಯ 9, ಶ್ಲೋಕ 27)
‘ಎಲೈ ಅರ್ಜುನ! ನೀನು ಯಾವ ಕೆಲಸ ಮಾಡುತ್ತೀಯೋ, ಏನನ್ನು ತಿನ್ನುತ್ತಿಯೋ ಯಾವುದನ್ನು ಹೋಮ ಮಾಡುತ್ತಿಯೋ, ಯಾವುದನ್ನು ದಾನ ಕೊಡುತ್ತಿಯೋ, ಯಾವ ಸ್ವಧರ್ವಚರಣರೂಪೀ ತಪಸ್ಸು ಮಾಡುವಿಯೋ ಅದೆಲ್ಲವನ್ನೂ ನನಗೆ ಅರ್ಪಿಸು’.
(2) ಮಾನವ ಸಂಬಂಧಗಳನ್ನು ದೈವೀಕರಣ ಗೊಳಿಸುವ ಬಗೆ: ಮಾನವ ಸಂಬಂಧಗಳ ಮನಃಶಾಸ್ತ್ರವನ್ನು ಅರಿತುಕೊಳ್ಳುವುದು ಬಹುಮುಖ್ಯ. ಪ್ರಾಪ್ತವಯಸ್ಕರಾಗಿ, ಜಗತ್ತಿನ ನಾನಾ ರೀತಿಯ ಅನುಭವಗಳನ್ನು ಪಡೆದ ಮೇಲೆ, ಜೀವನದ ಕ್ಷಣಭಂಗುರತೆ ತಿಳಿದ ಮೇಲೆ ಕುಟುಂಬದವರ, ಸ್ನೇಹಿತರ ಮತ್ತು ನೆಂಟರಿಷ್ಟರ ಜೊತೆಗಿನ ನಮ್ಮ ಸಂಬಂಧಗಳನ್ನು ವಿವೇಕಬುದ್ಧಿಯಿಂದ ವಿಚಾರ ಮಾಡಿ ಮರುರೂಪಿಸಬೇಕು. ಅವುಗಳನ್ನು ದಿವ್ಯಸಂಬಂಧಗಳಾಗಿ ಉನ್ನತೀಕರಿಸಬೇಕು. ಬಾಳಿನಲ್ಲಿ ಭಗವಂತನ ಸಂಕಲ್ಪವನ್ನು ಅರ್ಥಮಾಡಿಕೊಳ್ಳುವುದು ಮತ್ತು ಸ್ವೀಕರಿಸುವುದೇ ಈ ದೈವೀಕರಣದ ಕೀಲಿಕೈ.
(3) ಆಧ್ಯಾತ್ಮಿಕ ಜ್ಞಾನದಿಂದ ಪಾಪಪ್ರಜ್ಞೆ ಗೆಲ್ಲುವುದು: ಶ್ರೀರಾಮಕೃಷ್ಣ ಪರಮಹಂಸರು ದುಷ್ಟ ವ್ಯಸನಗಳ ದಾಸನಾಗಿದ್ದ ಬಂಗಾಳದ ನಾಟಕಕಾರ ಗಿರೀಶಚಂದ್ರ ಘೊಷನಿಗೆ ಹೇಳುತ್ತಾರೆ. ‘ಸಹಸ್ರಾರು ವರ್ಷಗಳಿಂದ ಒಂದು ಗುಹೆಯ ಒಳಗೆ ಕವಿದಿದ್ದ ಕತ್ತಲೆಯನ್ನು ಒಂದು ಬೆಳಕಿನ ಸಹಾಯದಿಂದ ಒಂದೇ ಕ್ಷಣದಲ್ಲಿ ತೊಲಗಿಸಬಹುದಲ್ಲವೇ?’ ಈ ಮಾತಿನ ತಾತ್ಪರ್ಯವೇನೆಂದರೆ, ಅವಿದ್ಯೆಯಿಂದ ಕೂಡಿದ ಒಬ್ಬ ಮನುಷ್ಯನ ಪಾಪಕರ್ಮಗಳ ಪ್ರಭಾವ ಎಷ್ಟೇ ಬಲವಾಗಿದ್ದರೂ, ಅವನು ಅದರಿಂದ ಬಿಡಿಸಿಕೊಂಡು ಹೊರಬರಬಲ್ಲ; ಅಜ್ಞಾನದಿಂದ ಉಂಟಾದ ದೋಷಗಳನ್ನು ಆಧ್ಯಾತ್ಮಿಕ ಜ್ಞಾನದ ಬೆಳಕಿನ ಮೂಲಕ ಕಳೆದು ಸನ್ಮಾರ್ಗದಲ್ಲಿ ನಡೆದು ಸಂತನೋ, ಯೋಗಿಯೋ ಆಗ ಬಲ್ಲ. ವಾಲ್ಮೀಕಿ, ಪುರಂದರದಾಸರು ಮತ್ತು ತುಳಸೀದಾಸರ ಜೀವನವೇ ಇದಕ್ಕೆ ಜ್ವಲಂತ ಉದಾಹರಣೆ.
ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್ |
ಸಾಧುರೇವ ಸ ಮಂತವ್ಯಃ ಸಮ್ಯಗ್ವ್ಯಸಿತೋ ಹಿ ಸ ||
‘ಒಂದು ವೇಳೆ ಯಾರಾದರೂ ದುರಾಚಾರಿಯಾಗಿದ್ದರೂ ಅನನ್ಯಭಾವದಿಂದ ನನ್ನನ್ನು ಭಜಿಸುತ್ತಾನೆಯೋ ಅವನು ಸಾಧುವೆಂದೇ ಪರಿಗಣಿಸಲು ಯೋಗ್ಯ. ಏಕೆಂದರೆ ಅವನು ಯಥಾರ್ಥವಾದ ನಿಶ್ಚಿತ ಬುದ್ಧಿಯುಳ್ಳವನಾಗಿರುತ್ತಾನೆ. ಅರ್ಥಾತ್ ಪರಮೇಶ್ವರನ ಸ್ಮರಣೆಗೆ ಸಮಾನವಾದುದು ಬೇರೆ ಏನೂ ಇಲ್ಲ ಎಂದು ಅವನು ದೃಢನಿಶ್ಚಯ ಮಾಡಿಕೊಂಡಿರುತ್ತಾನೆ’.
ವರ್ತಮಾನದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವಾಮಿ ವಿವೇಕಾನಂದರ ಮಾತುಗಳ ಔಚಿತ್ಯವನ್ನು ನಾವೆಲ್ಲರೂ ಮನಗಾಣಬೇಕು. ಕೇವಲ ಲೌಕಿಕ ಜೀವನದ ಆಯಾಮವನ್ನು ಪರಿಗಣಿಸಿ ನಡೆಸುತ್ತಿರುವ ಸಾಂಸಾರಿಕ ಜೀವನವನ್ನು ಆಧ್ಯಾತ್ಮಿಕ ಆಯಾಮದ ಆಳ, ವಿಸ್ತಾರಗಳಿರುವ ಕೌಟುಂಬಿಕ ಜೀವನವಾಗಿ ರೂಪಾಂತರಗೊಳಿಸುವ ನಿಟ್ಟಿನಲ್ಲಿ, ಸ್ಪಷ್ಟವಾದ ನವಜೀವನ ದೃಷ್ಟಿಯನ್ನು ಪಡೆಯುವಲ್ಲಿ ಸ್ವಾಮಿ ವಿವೇಕಾನಂದರ ಮಾತುಗಳು ಮೌಲಿಕವಾದ ಮಾರ್ಗದರ್ಶಿಕೆಯಾಗಿದೆ. ಇದು ಮೊಗ್ಗು ಅರಳಿ ಸುಂದರವಾದ ಹೂವಾಗುವ ಪ್ರಕ್ರಿಯೆಗೆ ಸಂವಾದಿಯಾಗಿದೆ; ಬೆಣ್ಣೆ ಘಮಘಮಿಸುವ ತುಪ್ಪವಾಗಿ ಪರಿವರ್ತನೆ ಹೊಂದುವಂತೆ ಇದೆ. ಕೇವಲ ಭೌತಿಕರೂಪ ಮತ್ತು ಆಂತರ್ಯದ ರಾಸಾಯನಿಕ ರಚನೆ, ಆಂತರಿಕವಾಗಿ ಸುಪ್ತವಾದ ಪ್ರಚ್ಛನ್ನ ಶಕ್ತಿ ಬದಲಾಗುವುದನ್ನು ಕಾಣುತ್ತೇವೆ. ಅದೇ ರೀತಿ, ನಮ್ಮೆಲ್ಲರ ಆಂತರ್ಯದಲ್ಲಿ ಅಡಗಿರುವ ದಿವ್ಯತೆಯ ಶಕ್ತಿಯಲ್ಲಿ ಶ್ರದ್ಧೆ ಬೆಳೆಸಿಕೊಂಡರೆ, ಗೃಹಸ್ಥ ಧರ್ಮ ಮತ್ತು ಋಷಿ ಆದರ್ಶಗಳ ಮಾರ್ಗದಲ್ಲಿ ಕೂಡ ನಮ್ಮ ಆಧ್ಯಾತ್ಮಿಕ ಪರಿಪೂರ್ಣತೆಯ ಸಾಕ್ಷಾತ್ಕಾರ ಪಡೆಯುವುದು ಸಾಧ್ಯ. ಇದೇ ಸ್ವಾಮಿ ವಿವೇಕಾನಂದರ ಮತ್ತು ಉಪನಿಷತ್ ವಾಣಿಯ ಬೋಧನೆಯ ಸಾರವಾಗಿದೆ.
ಭಗವಂತನ ಸಂಕಲ್ಪ ಮತ್ತು ಸಮಗ್ರ ದೈವೀಯೋಜನೆಯ ಮಂಗಲಮಯ ವಿಧಾನದ ಹಿನ್ನೆಲೆಯಲ್ಲಿ ಬದುಕಿನಲ್ಲಾಗುವ ಸರ್ವಘಟನೆಗಳನ್ನೂ ಸಮಚಿತ್ತದಿಂದ ಸ್ವೀಕರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಇದಕ್ಕೆ ಶ್ರೀರಾಮಕೃಷ್ಣ ಪರಮಹಂಸರು ಹೇಳಿದ ಪರಿಚಾರಕಿ ಹೆಂಗಸು ತನ್ನ ಯಜಮಾನನ ಮಕ್ಕಳನ್ನು ‘ನನ್ನ ರಾಮ, ನನ್ನ ಕೃಷ್ಣ’ ಎಂದು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರೂ, ಸ್ವಂತ ಊರಿನಲ್ಲಿರುವ ತನ್ನ ಮಕ್ಕಳ ಮೇಲೆಯೇ ಗಮನ ಇರುತ್ತದೆ ಎಂಬುದನ್ನು ಇಲ್ಲಿ ನೆನಪಿಸಬಹುದು. ಶರಣಾಗತಿ, ವಿನಮ್ರತೆ, ಸ್ವೀಕಾರ, ಸಹಿಷ್ಣುತೆ, ತಿತಿಕ್ಷೆ, ವಿವೇಕ, ಆಧ್ಯಾತ್ಮಿಕ ಅಭೀಪ್ಸೆಯ ತೀವ್ರತೆ, ಮನೆಯಲ್ಲಿ ನಿತ್ಯ ಭಗವಂತನ ಉಪಾಸನೆ ಮುಂತಾದವನ್ನು ಸಾಮರಸ್ಯ ಪೂರ್ಣವಾದ ಸಾಂಸಾರಿಕ ಜೀವನಕ್ಕಾಗಿ ಅವಿರತ ಅಭ್ಯಾಸ ಮಾಡಬೇಕು. ಕ್ರಮೇಣವಾಗಿ ನಮ್ಮ ಅನುಷ್ಠಾನಗಳೆಲ್ಲವೂ ದೈವಕೇಂದ್ರಿತವಾಗಬೇಕು. ಉಳಿದ ಕರ್ತವ್ಯಕರ್ಮಗಳ ಜೊತೆಜೊತೆಗೆ ಈ ಅಭ್ಯಾಸಗಳೆಲ್ಲವೂ ಸಮರಸವಾಗಿ ಮಿಳಿತಗೊಂಡು ಸಾಗಬೇಕು. ಆಗ ಸಾಂಸಾರಿಕ ಜೀವನ ಸಂತಸಮಯ ವಿದ್ಯಾಲಯವಾಗುವುದು; ಸಂಸಾರ ಸಹಜ ಸುಂದರ ಕಲಿಕಾಕೇಂದ್ರವಾಗುವುದು. ‘ಭಗವಂತನ ನಾಮಸ್ಮರಣೆಯಲ್ಲಿ ಮನಸ್ಸನ್ನು ಭದ್ರವಾಗಿ ನಿಲ್ಲಿಸಿ, ನೀವು ಪ್ರಾಪಂಚಿಕ ಕೆಲಸಗಳನ್ನು ಮಾಡಿದರೆ ಎಲ್ಲ ಅಪಾಯಗಳಿಂದಲೂ ಪಾರಾಗುವಿರಿ. ಮನಸ್ಸೇ ಎಲ್ಲಕ್ಕೂ ಮೂಲ ಎಂಬುದನ್ನು ತಿಳಿದುಕೊಳ್ಳಿ. ಯಾರ ಮನಸ್ಸು ಸದಾ ಭಗವಂತನಲ್ಲೇ ನೆಲೆಸಿರುವುದೋ ಅವನಿಗೆ ಮತ್ತೆ ಯಾವ ಸಾಧನೆಯೂ ಬೇಕಿಲ್ಲ’ ಎಂದಿದ್ದಾರೆ ರಾಮಕೃಷ್ಣ ಪರಮಹಂಸರು.
ಭಾರತದ ಸನಾತನ ಸಂಸ್ಕೃತಿಯ ಹಾಗೂ ರಾಷ್ಟ್ರಜೀವನವದ ಪುನರುತ್ಥಾನದಲ್ಲಿ ಋಷಿ ಆದರ್ಶಗಳು ಬಹುಮುಖ್ಯ. ಈ ಆದರ್ಶಗಳೇ ಹಿಂದೂ ಧರ್ಮದ ಔನ್ನತ್ಯವನ್ನು ಸಾಧಿಸಿವೆ. ಈಗಿನ ಆಧುನಿಕ ಸಮಾಜದಲ್ಲಿನ ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಮಾನಸಿಕ ಸ್ವಾಸ್ಥ್ಯ್ಕೆ ಬೇಕಾಗಿರುವ ಧರ್ಮಮಾರ್ಗವನ್ನು ತೋರಿಸುವಲ್ಲಿ ಋಷಿ ಆದರ್ಶಗಳು ಅಗತ್ಯ, ಗೃಹಸ್ಥರ ಮುಂದಿನ ಪೀಳಿಗೆಗೆ ಬಾಲ್ಯದಿಂದಲೇ ಆದರ್ಶ ಶಿಕ್ಷಣ ನೀಡಲು ದಾರಿದೀಪವಾಗಿದೆೆ. ಸನಾತನ ಧರ್ಮ ಮತ್ತು ಋಷಿ ಆದರ್ಶಕ್ಕೆ ನಿದರ್ಶನರಾಗಿರುವ ಶ್ರೀ ರಾಮಕೃಷ್ಣ, ಶ್ರೀ ಶಾರದಾದೇವಿ ಮುಂತಾದವರ ಆದರ್ಶ ಅವಶ್ಯಕ ಹಾಗೂ ಅನುಕರಣೀಯ.ವ್ಯಕ್ತಿಯಲ್ಲಿ ಮೌಲ್ಯಗಳು ಒಮ್ಮಿಂದೊಮ್ಮೆ ಉಗಮಿಸುವುದಿಲ್ಲ. ಬಾಲ್ಯಾವಸ್ಥೆಯಿಂದ ಹಂತಹಂತವಾಗಿ ಕ್ರಮೇಣ ಉನ್ನತ ಸ್ಥಿತಿಗಳಿಗೆ ಆರೋಹಿಸುವ ಆಧ್ಯಾತ್ಮಿಕ ಮೌಲ್ಯಗಳನ್ನು ಸ್ಪಷ್ಟವಾಗಿ ನಿರೂಪಿಸಿ ಕ್ರಮಬದ್ಧವಾಗಿ ಅಳವಡಿಸಬೇಕು. ಇದು ನಮ್ಮ ಕೌಟುಂಬಿಕ ಶಿಕ್ಷಣ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಬೇಕು. ಋಷಿಯಾಗಲು ಬಾಲ್ಯದಿಂದಲೇ ತರಬೇತಿ ಆರಂಭವಾಗಬೇಕು. ಧಾರ್ವಿುಕ ಮತ್ತು ಆಧ್ಯಾತ್ಮಿಕವಾಗಿ ಪ್ರಾಥಮಿಕ ಹಂತ ತಲುಪಿದ ಗೃಹಸ್ಥರೂ ಅಭ್ಯಾಸ ಮತ್ತು ಅನುಷ್ಠಾನಗಳಿಂದ ಮುಂದಿನ ಉನ್ನತ ಅವಸ್ಥೆಗಳಿಗೆ ವಿಕಾಸ ಹೊಂದಲು ಪ್ರಯತ್ನಿಸಬೇಕು. ಈ ಆಧ್ಯಾತ್ಮಿಕ ಯಾತ್ರೆಯಲ್ಲಿ ಪ್ರತಿಯೊಂದು ಹೆಜ್ಜೆಯೂ ತನ್ನದೇ ಆದ ಸೌಲಭ್ಯಗಳನ್ನು ಹೊಂದಿದೆ.

ಭಾರತದ ಸನಾತನ ಸಂಸ್ಕೃತಿಯ ಹಾಗೂ ರಾಷ್ಟ್ರಜೀವನವದ ಪುನರುತ್ಥಾನದಲ್ಲಿ ಋಷಿ ಆದರ್ಶಗಳು ಬಹುಮುಖ್ಯ. ಈ ಆದರ್ಶಗಳೇ ಹಿಂದೂ ಧರ್ಮದ ಔನ್ನತ್ಯವನ್ನು ಸಾಧಿಸಿವೆ. ಈಗಿನ ಆಧುನಿಕ ಸಮಾಜದಲ್ಲಿನ ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಮಾನಸಿಕ ಸ್ವಾಸ್ಥ್ಯ್ಕೆ ಬೇಕಾಗಿರುವ ಧರ್ಮಮಾರ್ಗವನ್ನು ತೋರಿಸುವಲ್ಲಿ ಋಷಿ ಆದರ್ಶಗಳು ಅಗತ್ಯ, ಗೃಹಸ್ಥರ ಮುಂದಿನ ಪೀಳಿಗೆಗೆ ಬಾಲ್ಯದಿಂದಲೇ ಆದರ್ಶ ಶಿಕ್ಷಣ ನೀಡಲು ದಾರಿದೀಪವಾಗಿದೆೆ. ಸನಾತನ ಧರ್ಮ ಮತ್ತು ಋಷಿ ಆದರ್ಶಕ್ಕೆ ನಿದರ್ಶನರಾಗಿರುವ ಶ್ರೀ ರಾಮಕೃಷ್ಣ, ಶ್ರೀ ಶಾರದಾದೇವಿ ಮುಂತಾದವರ ಆದರ್ಶ ಅವಶ್ಯಕ ಹಾಗೂ ಅನುಕರಣೀಯ.
(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me