ಕೊಪ್ಪಳ:ಮುನಿರಾಬಾದ್ ಟಿಬಿ ಡ್ಯಾಂ ಕೊಚ್ಚಿಹೋದ ಗೇಟ್ ಗೆ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಶುಕ್ರವಾರ ಬಹುತೇಕ ಯಶಸ್ವಿಯಾಗಿದೆ.
ಇದನ್ನೂ ಓದಿ:ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೆನ್‌ ಬಿಜೆಪಿ ಸೇರ್ಪಡೆ ಸಾಧ್ಯತೆ!
ನೀರುಳಿಸಿಕೊಂಡು ಗೇಟ್ ಅಳವಡಿಕೆ ಸಾಹಸಕ್ಕೆ ಮುಂದಾಗಿದ್ದ ಟಿಬಿ ಬೋರ್ಡ್, ಸರ್ಕಾರ ಸವಾಲು ಗೆದ್ದಿದೆ. ಗುರುವಾರವೇ ಜಿಂದಾಲ್ ನಿಂದ ಬಂದ ಮೊದಲ ಎಲಿಮೆಂಟ್ ಇಳಕೆಗೆ ತಾಂತ್ರಿಕ ಅಡ್ಡಿಯಾಯಿತು. ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ಗೇಟ್ ಇಳಿಕೆಗೆ ಇದ್ದ ಅಡ್ಡಿಗಳನ್ನು ನಿವಾರಣೆ ಮಾಡಲು ತಜ್ಞರ ತಂಡ ಶ್ರಮಿಸಿತು. ಹೈಡ್ರಾಲಿಕ್ ಭೀಮ್ ಹಾಗೂ ಸ್ಕೈ ವಾಕ್ ಚೇಂಬರ್ ಕಟ್ ಮಾಡಿ ಹೊರ ತೆಗೆಯಲಾಯಿತು.
ಸಂಜೆ ವೇಳೆಗೆ ಜಿಂದಾಲ್ ನಿಂದ ಆಗಮಿಸಿದ್ದ 64 ಉದ್ದ, 4 ಅಡಿ ಎತ್ತರದ ಗೇಟ್ ಅಳವಡಿಕೆಗೆ ಸಿದ್ಧತೆ ಮಾಡಲಾಯಿತು. ಕತ್ತಲಾಗಿದ್ದರಿಂದ ಲೈಟಿಂಗ್ ವ್ಯವಸ್ಥೆ ಮಾಡಿಕೊಂಡ ತಂಡ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯಿಂದ ಪೂಜೆ ಸಲ್ಲಿಸಿ ಕಾರ್ಯಾಚರಣೆ ಆರಂಭಿಸಿತು. ಸತತ ಎರಡು ಗಂಟೆ ಸಮಯ ತೆಗೆದುಕೊಂಡ ನೂರಕ್ಕೂ ಹೆಚ್ಚು ತಂತ್ರಜ್ಞರು, ಪರಿಣಿತರು ತಾಳ್ಮೆಯಿಂದ ನಿಧಾನವಾಗಿ ಗೇಟ್ ಇಳಿಸಿದರು. ನೀರಿನ ಮಟ್ಟಕ್ಕೆ ಬರುವವರೆಗೆ ಇದ್ದ ವೇಗ ಸ್ವಲ್ಪ ತಗ್ಗಿಸಲಾಯಿತು.

ನೀರಿಗೆ ತಾಗಿಕೊಂಡಾಗ ಬಹಳ ಎಚ್ಚರಿಕೆಯಿಂದ ಒಂದೊಂದೆ ಇಂಚು ನೀರಿಗೆ ಇಳಿಸಲಾಯಿತು. ನೀರಿನ ಒತ್ತಡ ನಿಯಂತ್ರಿಸುತ್ತ ರಾತ್ರಿ 9 ಗಂಟೆ ವೇಳೆಗೆ ಮೊದಲ ಎಲಿಮೆಂಟ್ ನ್ನು ಅಂತಿಮವಾಗಿ ಯಶಸ್ವಿಯಾಗಿ ತೂಬಿಗೆ ಸೇರಿಸಲಾಯಿತು. ಯಶಸ್ವಿಯಾಗಿ ಗೇಟ್ ಮೂಲ ಸ್ಥಳ ಸೇರುತ್ತಲೇ ಸ್ಥಳದಲ್ಲಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳು, ತಂತ್ರಜ್ಞರ ತಂಡ ಕೇಕೆ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು. ಕೊನೆಗೂ ಲಕ್ಷಾಂತರ ರೈತರ ಪ್ರಾರ್ಥನೆ ಫಲಿಸಿದ್ದು, ನೀರು ಉಳಿದು ಮೊದಲ ಬೆಳೆ ಪಡೆವ ನಿರೀಕ್ಷೆ ಮತ್ತೆ ಚಿಗುರುವಂತೆ ಮಾಡಿದೆ.
ಹೊಸ ಇತಿಹಾಸ:ಈವರೆಗೂ ಜಲಾಶಯಗಳಲ್ಲಿ ಹರಿವ ನೀರಿಗೆ ಸವಾಲೊಡ್ಡಿ ಸ್ಟಾಪ್ ಲಾಗ್ ಗೇಟ್ ಇಳಿಸಿದ ಉದಾಹರಣೆ ಇಲ್ಲ. ಪ್ರಯತ್ನಗಳು ನಡೆದರೂ ಕೈಗೂಡಿಲ್ಲ. ಟಿಬಿ ಡ್ಯಾಂ 70 ವರ್ಷದಷ್ಟು ಹಳೇಯದಾಗಿದ್ದು, ಈ ಕಾರ್ಯಸುಲಭವಾಗಿರಲಿಲ್ಲ. ಸಾಕಷ್ಟು ತಂತ್ರ ಬಳಿಸಿದ ತಜ್ಞ ಕನ್ನಯ್ಯ ನಾಯ್ಡು ತಂಡ ಕೊನೆಗೂ ಯಶಸ್ವಿಯಾಗಿ ಗೇಟ್ ಇಳಿಸಿ ಹೊಸ ದಾಖಲೆ ಬರೆದಿದೆ.
ಬಾಕಿ ಕಾರ್ಯ ಸುಲಭ:ಮೊದಲ ಎಲಿಮೆಂಟ್ ಇಳಿಕೆಯೇ ಸವಾಲಾಗಿ ಪರಿಣಮಿಸಿತ್ತು. ಆ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಬಾಕಿ ಮೂರು ಎಲಿಮೆಂಟ್ ಬಂದಿದ್ದು, ಅವುಗಳ ಇಳಿಕೆ ಸುಲಭವಾಗಲಿದೆ. ಶನಿವಾರ ಎಲ್ಲ ಗೇಟ್ ಅಳವಡಿ ಪೂರ್ಣಗೊಳ್ಳಲಿದೆ.
ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೆನ್‌ ಬಿಜೆಪಿ ಸೇರ್ಪಡೆ ಸಾಧ್ಯತೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 − four =
Remember me
