| ಕೆ.ಎನ್.ರಾಘವೇಂದ್ರ ಮಂಡ್ಯ
ನಿರ್ದಿಷ್ಟ ಗುರಿ, ಸಾಧಿಸುವ ಛಲವಿದ್ದರೆ ಬರಡು ಭೂಮಿಯಲ್ಲೂ ಲಕ್ಷಾಂತರ ರೂ. ಸಂಪಾದನೆ ಮಾಡಿ ಆರೋಗ್ಯಯುತ, ನೆಮ್ಮದಿಯ ಜೀವನ ಸಾಗಿಸಬಹುದು ಎಂಬುದನ್ನು ನಾಗಮಂಗಲ ತಾಲೂಕು ಹದಮಗೆರೆ ಗ್ರಾಮದ ನಿವೃತ್ತ ಉಪನ್ಯಾಸಕ ರಾಮನಂಜಯ್ಯ ಸಾಬೀತು ಮಾಡಿದ್ದಾರೆ.
ಕೊಡಗು ಜಿಲ್ಲೆ ಶನಿವಾರಸಂತೆಯ ಅನುದಾನಿತ ಕಾಲೇಜೊಂದರಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದ ಇವರು, ನಿವೃತ್ತಿಯಾಗುವ 8 ವರ್ಷ ಮುನ್ನವೇ ಜಮೀನಿನಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಯೋಜನೆ ರೂಪಿಸಿಕೊಂಡರು. ತಂದೆ ಆಸ್ತಿಯಲ್ಲಿ ಎರಡೂವರೆ ಎಕರೆ ಒಣ ಭೂಮಿಯನ್ನು ಪಡೆದುಕೊಂಡರು. ನಂತರ ಹಂತ ಹಂತವಾಗಿ ತಮ್ಮ ಯೋಜನೆಯನ್ನು ಅಳವಡಿಸಲು ಪ್ರಾರಂಭಿಸಿದರು. ಜಮೀನಿನ ಸುತ್ತ ತೇಗ, ಸಿಲ್ವರ್ ಮರಗಳನ್ನು ನೆಟ್ಟರು. ಕೊರಕಲಾಗಿದ್ದ ಭೂಮಿಯನ್ನು ಹದ ಮಾಡಿ, ಬೋರವೆಲ್ ಹಾಕಿಸಿದರು. ಸ್ನೇಹಿತರೊಬ್ಬರ ಸಲಹೆ ಮೇರೆಗೆ ಬೆಟ್ಟದ ನೆಲ್ಲಿಕಾಯಿ ಗಿಡಗಳನ್ನು ನೆಟ್ಟರು. ಇದರೊಟ್ಟಿಗೆ ಸಪೋಟ ಕೂಡ ಇತ್ತು.
ಗಿಡಗಳು ದೊಡ್ಡದಾಗುತ್ತಿದ್ದಂತೆ ಭೂಮಿಯನ್ನು ಸಾವಯವ ಕೃಷಿಗೆ ಒಗ್ಗಿಕೊಳ್ಳುವಂತೆ ಮಾಡಿದರು. 2014ರಲ್ಲಿ ನಿವೃತ್ತಿಯಾಗಿ ಬೆಂಗಳೂರಿಗೆ ತೆರಳಿದರು. ಅಲ್ಲಿ ಒಂದು ವರ್ಷವಿದ್ದು, ಬಳಿಕ ಗ್ರಾಮಕ್ಕೆ ಬಂದರು. ಅಷ್ಟರಲ್ಲಾಗಲೇ ಬೆಟ್ಟದ ನೆಲ್ಲಿಕಾಯಿ ಮತ್ತು ಸಪೋಟ ಫಲ ಬಿಡಲು ಪ್ರಾರಂಭಿಸಿದ್ದವು. ಒಂದು ಹಂತದಲ್ಲಿ ಸಪೋಟ ಕೀಟಗಳಿಂದ ಹಾಳಾಗಿ ಕೈ ಕೊಟ್ಟರೂ ಬೆಟ್ಟದ ನೆಲ್ಲಿಕಾಯಿ ಕೈಹಿಡಿಯಿತು. ಇದಾದ ಬಳಿಕ ಕೃಷಿಯಲ್ಲಿ ಬದಲಾವಣೆ ಮಾಡಿಕೊಂಡು 50ಕ್ಕೂ ಹೆಚ್ಚು ಸಪೋಟ ಗಿಡಗಳನ್ನು ಕಿತ್ತು ಬೆಟ್ಟದ ನೆಲ್ಲಿಕಾಯಿ, ತೆಂಗಿನ ಸಸಿಗಳನ್ನು ನೆಟ್ಟರು.
ಜಮೀನಿನಲ್ಲಿ ಪ್ರಸ್ತುತ 100 ಬೆಟ್ಟದ ನೆಲ್ಲಿಕಾಯಿ ಗಿಡಗಳಿವೆ. ಇಲ್ಲಿ ವರ್ಷಪೂರ್ತಿ 5ರಿಂದ 6 ಟನ್ ಕಾಯಿ ಸಿಗುತ್ತವೆ. ಕೆಜಿ ಲೆಕ್ಕದಲ್ಲಿ 50 ರಿಂದ 80 ರೂ.ವರೆಗೆ ಮಾರಾಟ ಮಾಡಲಾಗುತ್ತದೆ. ಮತ್ತೊಂದೆಡೆ ಇವರೇ ‘ಸೃಷ್ಟಿ’ ಹೆಸರಿನ ಬ್ರ್ಯಾಂಡ್​ನಲ್ಲಿ ನೆಲ್ಲಿಕಾಯಿ ಜ್ಯೂಸ್ ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ. ಈ ಜ್ಯೂಸ್ ನಂತರ ಬರುವ ಹೊಟ್ಟನ್ನು ಕೂಡ ಸಂಸ್ಕೃರಿಸಿ ಔಷಧಕ್ಕೆಂದು ನೀಡುತ್ತಾರೆ. ಬೆಂಗಳೂರು, ಹಾಪ್​ಕಾಮ್್ಸ ಸೇರಿ ವಿವಿಧೆಡೆ ಸ್ವತಃ ಮಾರುಕಟ್ಟೆ ಮಾಡುತ್ತಾರೆ. ಈ ರೀತಿ ಪ್ರತಿ ವರ್ಷ ಅಂದಾಜು 2 ಲಕ್ಷ ರೂ. ಸಂಪಾದಿಸುತ್ತಾರೆ. ಈ ವರ್ಷ 4 ಲಕ್ಷ ರೂ.ಆದಾಯ ಮಾಡಿರುವುದು ವಿಶೇಷ.
ಆರು ಜಂಬು ನೇರಳೆಹಣ್ಣಿನ ಮರವಿದ್ದು, ಇದರಿಂದಲೂ 50 ಸಾವಿರ ರೂ.ಗೂ ಹೆಚ್ಚು ಆದಾಯ ಮಾಡುತ್ತಾರೆ. ಎರಡು ವರ್ಷಕ್ಕೊಮ್ಮೆ ಬರುವ ಫಸಲಿನಲ್ಲಿ ವೈನ್ ಮಾಡಿ ಮಾರಾಟ ಮಾಡುತ್ತಾರೆ. ನಂತರ ಬೀಜಗಳನ್ನು ಪುಡಿ ಮಾಡಿ ಮಾರುತ್ತಾರೆ. (ಮೊ.ಸಂ-94486-48034)
ಹಣ್ಣುಗಳಿಂದ ಆದಾಯ
ಸಪೋಟ, ಮಾವು, ಚಕ್ಕೊತಾ, ಪನ್ನೇರಳೆ, ಸೀಬೆ, ನಿಂಬೆ, ಇರಳೇಕಾಯಿ 10 ಸಾವಿರ ರೂ.ವರೆಗೂ ಆದಾಯ ನೀಡುತ್ತಿವೆ. ಇವರ ಪ್ರಾಯೋಗಿಕ ಕೃಷಿಗೆ ಮತ್ತೊಂದು ಉದಾಹರಣೆಗೆ ಬೆಣ್ಣೆಹಣ್ಣು ಮತ್ತು ಕಿತ್ತಳೆ, ಬರಡು ಭೂಮಿಯಲ್ಲಿಯೂ ಉತ್ತಮ ಫಸಲು ಪಡೆದಿದ್ದಾರೆ. ಮೊದಲ ಬಾರಿಗೆ 10 ಕೆಜಿ ಬೆಣ್ಣೆಹಣ್ಣು, 20 ಕೆಜಿಯಷ್ಟು ಕಿತ್ತಳೆ ಹಣ್ಣು ಬಂದಿದೆ. ಇದರೊಟ್ಟಿಗೆ ಬಾರ್​ಬುಡಾಸ್ ಚೆರ್ರಿ, ದಾಲ್ಚಿನ್ನಿಯೂ ಇದೆ. ರಾಗಿಯನ್ನೂ ಬೆಳೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
