ಕುಣಿಗಲ್​:ಮನೆ ಮುಂದೆ ಆಟವಾಡುತ್ತಿದ್ದ 4 ವರ್ಷದ ಬಾಲಕನನ್ನು ಹಾಡಹಗಲೇ ಚಿರತೆ ಹೊತ್ತೊಯ್ದು ಕೊಂದು ಹಾಕಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ರಾಜೇಂದ್ರಪುರದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಈ ಅವಘಡ ಸಂಭವಿಸಿದೆ. ಹುಲಿಯೂರುದುರ್ಗ ಕಾಡಂಚಿನ ಗುಡಿಸಲು ನಿವಾಸಿ ಮುನಿರಾಜು ಮತ್ತು ದೊಡ್ಡಿರಮ್ಮ ದಂಪತಿಯ ಪುತ್ರ ಚಂದು(4) ಮೃತ.ಇದನ್ನೂ ಓದಿರಿvideo/ ರಾಜ್ಯದಲ್ಲಿ ಸಂಚಲನ ಮೂಡಿಸಿದೆ ಸಿದ್ದು ಕೇಳಿದ ಆ 6 ಪ್ರಶ್ನೆಗಳು
ಅರಣ್ಯದಿಂದ ಸುಮಾರು 500 ಮೀಟರ್ ಅಂತರದಲ್ಲಿ ಚಂದು ಕುಟುಂಬ ವಾಸವಿದೆ. ಇಂದು ಮಧ್ಯಾಹ್ನ ಗುಡಿಸಲ ಬಳಿ ಆಟವಾಡುತ್ತ ಕುಳಿತಿದ್ದ ಮಗುವನ್ನು ಚಿರತೆ ಹೊತ್ತೊಯ್ದಿದೆ. ಇದನ್ನು ಕಂಡ ಸ್ಥಳೀಯರು ಚಿರತೆಯನ್ನು ಬೆನ್ನಟ್ಟಿದರಾದರೂ ಅಷ್ಟರಲ್ಲಿ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು.
ಚಿರತೆಯು ಬಾಲಕನ ಕುತ್ತಿಗೆ ಮತ್ತು ಕಿವಿಭಾಗವನ್ನು ಕಚ್ಚಿ ತೀವ್ರಗಾಯಗೊಳಿಸಿದೆ. ಚಂದುವಿನ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಮತ್ತು ನರಭಕ್ಷಕ ಚಿರತೆಗಳನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕುಣಿಗಲ್​ ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಸಾವು-ನೋವು ಪದೇಪದೆ ಮರುಕಳಿಸುತ್ತಲೇ ಇದೆ. ಜೂನ್​ 4ರಂದು ತೆರೆದಕುಪ್ಪೆ ಗ್ರಾಮದಲ್ಲಿ ಮಧ್ಯಾಹ್ನ ವೇಳೆ ಸಹೋದರಿಯರ ಜತೆ ಮನೆ ಮುಂದೆ ಆಟವಾಡುತ್ತಿದ್ದ 7 ವರ್ಷದ ರೇಖಾಳನ್ನು ತಂದೆಯ ಕಣ್ಣೆದುರಲ್ಲೇ ಚಿರತೆಯೊಂದು ಹೊತ್ತೊಯ್ದಿತ್ತು. ಚಿರತೆಯನ್ನು ಬೆನ್ನಟ್ಟಿದ್ದ ಸ್ಥಳೀಯರು ರೇಖಾಳನ್ನು ರಕ್ಷಿಸಿದ್ದರಾದರೂ ತೀವ್ರ ಗಾಯಗೊಂಡಿದ್ದ ಆಕೆಗೀಗ ಮಾತನಾಡಲು ಆಗುತ್ತಿಲ್ಲ. ತಾಲೂಕಿನಲ್ಲಿ ಈ ಹಿಂದೆ ಚಿರತೆಗೆ ವೃದ್ಧೆ ಮತ್ತು ಬಾಲಕಿ ಬಲಿಯಾಗಿದ್ದರು.
ಮಾಗಡಿ ತಾಲೂಕಿನಲ್ಲೂ ಚಿರತೆ ಹಾವಳಿ ಹೆಚ್ಚಾಗಿದ್ದು, ಇತ್ತೀಚೆಗೆ ಮೂರು ವರ್ಷದ ಬಾಲಕ, ವೃದ್ಧೆ ಬಲಿಯಾಗಿದ್ದರು. ಈ ತಾಲೂಕಿಗೆ ಹೊಂದಿಕೊಂಡ ಕುಣಿಗಲ್​ ವ್ಯಾಪ್ತಿಯಲ್ಲೂ ಚಿರತೆ ಕಾಟ ಜಾಸ್ತಿಯಾಗುತ್ತಲೇ ಇದೆ. ಅರಣ್ಯ ಅಧಿಕಾರಿಗಳು ಇನ್ನಾದರೂ ಶೀಘ್ರವಾಗಿ ಚಿರತೆಗಳನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸಬೇಕಿದೆ.
ಕರೊನಾ ಸೋಂಕಿತ ಮೃತದೇಹವನ್ನು ಎಳೆದಾಡಿದ ನಾಯಿಗಳು… ಬೆಚ್ಚಿಬಿದ್ದ ಸ್ಥಳೀಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − four =
Remember me
