ಬೆಂಗಳೂರು:ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವವರ ಪೈಕಿ 1ರಿಂದ 10ನೇ ತರಗತಿ ವರೆಗೆ ಶಿಕ್ಷಣ ಪಡೆದವರೇ ಹೆಚ್ಚಾಗಿದ್ದು, ಇದು ಅನಕ್ಷರಸ್ಥರಿಗಿಂತ ಅಧಿಕವಾಗಿದೆ.
ರಾಜ್ಯದಲ್ಲಿ 2019ರ ಸಾಲಿನಲ್ಲಿ 11,288 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪೈಕಿ 7,542 ಮಂದಿ 1 ರಿಂದ 10ನೇ ತರಗತಿವರೆಗೆ ಕಲಿತವರಾಗಿದ್ದಾರೆ. 1,383 ಮಂದಿ ಅನಕ್ಷರಸ್ಥರು, ಪಿಯುಸಿ-1466, ಡಿಪ್ಲೊಮಾ/ಐಟಿಐ-177, ಪದವಿ-525 ಮತ್ತು 40 ಸ್ನಾತಕೋತ್ತರ ಪದವೀಧರರು ಆತ್ಮಹತ್ಯೆಗೆ ಶರಣಾಗಿರುವುದು ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗ (ಎನ್​ಸಿಆರ್​ಬಿ) ಬಿಡುಗಡೆ ಮಾಡಿದ ವರದಿಯಲ್ಲಿ ಬಹಿರಂಗವಾಗಿದೆ. ದೇಶದಲ್ಲಿ ಸಹ ಎಸ್​ಎಸ್​ಎಲ್​ಸಿ ವರೆಗೆ ಶಿಕ್ಷಣ ಪಡೆದವರೇ (ಶೇ.59.2) ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಕ್ಷರಸ್ಥರ ಪಾಲು ಶೇ.12.6 ಪಾಲಿದೆ. ದೇಶದಲ್ಲಿ ಆತ್ಮಹತ್ಯೆಗೊಳಗಾದವರಲ್ಲಿ 18 ರಿಂದ 30 ವರ್ಷಗಳ ಯುವಕರು ಹೆಚ್ಚು.
ಮತ್ತೊಂದೆಡೆ ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣ ತಗ್ಗಿದೆೆ. 2018ರಲ್ಲಿ 11,561 ಮತ್ತು 2019ರಲ್ಲಿ 11,288 ಆತ್ಮಹತ್ಯೆ ದಾಖಲಾಗಿದ್ದು, ಶೇ.2.4 ಇಳಿದಿದೆ. ಬಿಹಾರದಲ್ಲಿ ಶೇ.44.7, ಪಂಜಾಬ್ ಶೇ.37.5 ಮತ್ತು ಉತ್ತರಾಖಂಡ್​ನಲ್ಲಿ ಶೇ. 22.6 ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು, ಆತಂಕ ಮೂಡಿಸಿದೆ. ಕರ್ನಾಟಕದಲ್ಲಿನ ಆತ್ಮಹತ್ಯೆ ಪ್ರಕರಣಗಳ ಪೈಕಿ ನಿರುದ್ಯೋಗಿಗಳು-1293 ಮಂದಿ, ಸ್ವ-ಉದ್ಯೋಗಿಗಳು 2161, 2458 ರೈತರು ಮತ್ತು 1631 ದಿನಗೂಲಿ ನೌಕರರಿದ್ದಾರೆ.
ದೇಶದಲ್ಲಿ ಶೇ.23.4 ದಿನಗೂಲಿ ಕಾರ್ವಿುಕರು, ಶೇ 15.4 ಗೃಹಿಣಿಯರು, ಶೇ.11.6 ಸ್ವ-ಉದ್ಯೋಗಿಗಳು ಮತ್ತು ಶೇ. 10.1 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆಗಳಿಂದಾಗಿ ಶೇ 32.4, ಅನಾರೋಗ್ಯದಿಂದ ಶೇ. 17.1 ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂಕಿ-ಅಂಶ ತಿಳಿಸಿದೆ. ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 18,916 ಆತ್ಮಹತ್ಯೆ ದಾಖಲಾಗಿವೆ. 2ನೇ ಸ್ಥಾನದಲ್ಲಿ ತಮಿಳುನಾಡು(13,493), ಪಶ್ಚಿಮ ಬಂಗಾಳದಲ್ಲಿ 12 ಸಾವಿರಕ್ಕೂ ಹೆಚ್ಚು ಪ್ರಕರಣಗಳಿದ್ದು 3ನೇ ಸ್ಥಾನದಲ್ಲಿದೆ. ಮಧ್ಯಪ್ರದೇಶ (12,457), ಕರ್ನಾಟಕ (11,288) ನಂತರದ ಸ್ಥಾನದಲ್ಲಿವೆ. ತೆಲಂಗಾಣ 7,675, ಆಂಧ್ರದಲ್ಲಿ 6,465 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + six =
Remember me
