ರಾಮನಗರ:ನಿಲ್ಲಿಸಿದ್ದ ಕಾರಿನಿಂದ ಕೆಳಗೆ ಇಳಿದ ಪತಿ, ತಮ್ಮ ಮಗುವನ್ನು ಹಿಡಿದು ಹೊರಗೆ ನಿಂತಿದ್ದ ವೇಳೆ ಒಳಗಿದ್ದ ಪತ್ನಿ ಕಾರಿನ ಹ್ಯಾಂಡ್​ ಬ್ರೇಕ್​ ಒತ್ತಿದ ಪರಿಣಾಮ ಕಾರು ದಿಢೀರ್​ ಮುಂದೆ ಚಲಿಸಿದೆ. ಈ ವೇಳೆ ಕೈಯಲ್ಲಿದ್ದ ಮಗುವನ್ನು ಬಿಳಿಸುತ್ತಿದ್ದ ಪತಿಯಿಂದ ಯುವಕನೊಬ್ಬ ಸಮಯ ಪ್ರಜ್ಞೆಯಿಂದ ಕಂದಮನನ್ನು ರಕ್ಷಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ:ಜಾಮೀನು ಸಿಕ್ಕರೂ 3 ವರ್ಷ ಜೈಲಿನಲ್ಲಿದ್ದ!; ಇಮೇಲ್ ನೋಡದ ಅಧಿಕಾರಿಗಳಿಗೆ ದಂಡ ವಿಧಿಸಿದ ಕೋರ್ಟ್..
ಈ ಘಟನೆ ರಾಮನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದ್ದು, ದೃಶ್ಯ ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ವಿಫ್ಟ್​ ಕಾರನ್ನು ಪಾರ್ಕಿಂಗ್ ಮಾಡಿದ ಪತಿ ತಮ್ಮ 6 ತಿಂಗಳ ಮಗುವನ್ನು ಕೈಯಲ್ಲಿಡಿದು ಹೆಂಡತಿಗೆ ಕೆಳಗಿಳಿಯಲು ಹೇಳಿದ್ದಾರೆ. ಕಾರಿನಿಂದ ಇಳಿಯುವಾಗ ತಿಳಿಯದೆ ಹ್ಯಾಂಡ್​ ಬ್ರೇಕ್​ ಮೇಲೆ ಮಹಿಳೆ ಕೈಯಿಟ್ಟ ಪರಿಣಾಮ ಕಾರು ದಿಢೀರ್​ ಮುಂದೆ ಚಲಿಸಿದೆ.
ಇದನ್ನೂ ಓದಿ:ಬುದ್ಧಿಮಾಂದ್ಯರಿಗೆ ಹಾಗೂ ಆರೈಕೆದಾರರಿಗೆ ಉಚಿತ ಕಣ್ಣಿನ ಔಷಧಿ ವಿತರಣೆ ಶಿಬಿರ
ಕೂಡಲೇ ಕಾರನ್ನು ನಿಲ್ಲಿಸಲು ಮುಂದಾದ ಪತಿ ಕಾರೊಳಗೆ ಕುಳಿತುಕೊಳ್ಳಲು ಯತ್ನಿಸುವಾಗ ಆತನ ಕೈಯಲ್ಲಿದ್ದ ಮಗು ಕೆಳಗೆ ಬೀಳುತ್ತಿದ್ದುದನ್ನು ಗಮನಿಸಿದ  ಯುವಕನೊಬ್ಬ ಮಗುವನ್ನು ತನ್ನ ಸಮಯ ಪ್ರಜ್ಞೆಯಿಂದ ಬಚಾವ್ ಮಾಡಿದ್ದಾನೆ. ಈ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಮಂತಾ ನಟಿಸಬೇಕಿದ್ದ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
