ಬೆಂಗಳೂರು:ಕನ್ನಡ ಚಿತ್ರಗಳಿಗೆ ಗೀತೆ ರಚನೆಗೆ ಹೊಸಬರಿಗೆ ಅವಕಾಶ ಸಿಗಬೇಕು. ಅದರಿಂದ ಹೊಸ ಪ್ರತಿಭೆಗಳು ಹುಟ್ಟಿಕೊಳ್ಳುತ್ತವೆ ಎಂದು ಚಿತ್ರಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಹೇಳಿದ್ದಾರೆ. ಪರಂಪರಾ ಸಂಸ್ಥೆಯ ನಾಲ್ಕನೇ ವರ್ಷದ ರಾಜ್ಯ ಮಟ್ಟದ ಕಲಾ ಚಿತ್ತಾರ, ಕವನ ರಾಶಿ ಮತ್ತು ಸ್ವರಸುಗ್ಗಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಿ ಅವರು ಮಾತನಾಡಿದರು.
ಚಿತ್ರಗಳಿಗೆ ಹಾಡುಗಳನ್ನು ಬರೆಯುವ ಅವಕಾಶ ಉದಯೋನ್ಮುಖ ಯುವ ಬರಹಗಾರರಿಗೆ ದೊರೆಯಬೇಕು. ಪರಂಪರಾ ತಂಡದಿಂದ ಶಿಕಾರಿ ಚಿತ್ರವೊಂದು ಸಿದ್ದಗೊಳ್ಳುತ್ತಿದ್ದು, ನನಗೆ ಹಾಡು ಬರೆಯಲು ಕೋರಿಕೊಂಡಿದ್ದಾರೆ. ನಾನು ಬರೆಯುವುದಕ್ಕಿಂತ ಇಲ್ಲಿ ಆಯ್ಕೆಯಾದ ಯುವ ಸಾಹಿತಿ, ಅವಕಾಶ ನೀಡಿದರೆ ಎರಡು ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಹುಟ್ಟಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಅಂತಹ ಕೆಲಸ ಆಗಲಿ ಎಂದು ಆಯೋಜಕರಿಗೆ ಅವರು ಸಲಹೆ ನೀಡಿದರು.
ಕೇವಲ ಸಾಹಿತ್ಯ, ಸಂಸ್ಕ್ರತಿ ಇದ್ದರೆ ಸಾಲದು. ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಪರಂಪರಾ ಸ್ಟುಡಿಯೋಸ್ ಸಂಸ್ಥೆ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ನಾಗೇಂದ್ರ ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪರಂಪರಾ ಸಂಸ್ಥೆಯ ಸಂಸ್ಥಾಪಕರಾದ ಸಂಗೀತ ನಿರ್ದೇಶಕ ಬಿ.ಆರ್.ಸುರೇಂದ್ರನಾಥ್ ಮತ್ತು ಸಂಕಲನಕಾರ ಬಿ.ಆರ್.ರವೀಂದ್ರನಾಥ್ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
