ಬೆಂಗಳೂರು: ಕರೊನಾ ಲಾಕ್​ಡೌನ್​ನಿಂದ ದೇಶಾದ್ಯಂತ ಕೋಟ್ಯಂತರ ಕಾರ್ವಿುಕರು ತೀವ್ರ ಸಂಕಷ್ಟ ಎದುರಿಸುತ್ತಿರುವ ಬೆನ್ನಲ್ಲೇ, ಕ್ಷೌರಿಕರು ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ. ಸುಮಾರು 2.5 ಲಕ್ಷ ಕ್ಷೌರಿಕರಿಗೆ ಭವಿಷ್ಯದ ಚಿಂತೆ ಎದುರಾಗಿದೆ.
ಲಾಕ್​ಡೌನ್ ಹಿನ್ನೆಲೆಯಲ್ಲಿ ಸಲೂನ್​ಗಳನ್ನು ತೆರೆಯುವಂತಿಲ್ಲ. ಹೀಗಾಗಿ ಹಲವು ದಿನಗಳಿಂದ ಆದಾಯ ಸ್ಥಗಿತಗೊಂಡಿದೆ. ಮನೆ, ಅಂಗಡಿ ಬಾಡಿಗೆ ಪಾವತಿ, ಮಕ್ಕಳ ಶಾಲಾ ಶುಲ್ಕ, ಆಹಾರ ಸಾಮಗ್ರಿ ಖರೀದಿಗೂ ದಾನಿಗಳ ಮೊರೆ ಹೋಗುವಂತಾಗಿದ್ದು, ದಿಕ್ಕು ತೋಚದಂತಾಗಿದ್ದಾರೆ.
ನಿತ್ಯ 15 ಲಕ್ಷ ರೂ. ವಹಿವಾಟು: ರಾಜ್ಯದ 2.5 ಲಕ್ಷ ಕ್ಷೌರಿಕರ ಪೈಕಿ ಶೇ.60 ಮಂದಿ ಸಣ್ಣ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿರುವವರು. ಅವರು ನಿತ್ಯ 300 ರೂ.ನಿಂದ 600 ರೂ. ಗಳಿಸುತ್ತಿದ್ದರು. ದೊಡ್ಡ ನಗರಗಳ ಕ್ಷೌರಿಕರು ಗರಿಷ್ಠ 1,500 ರೂ.ವರೆಗೆ ದುಡಿಯುತ್ತಿದ್ದರು. ನಿತ್ಯ 15 ಲಕ್ಷ ರೂ.ಗೂ ಅಧಿಕ ವಹಿವಾಟು ನಡೆಯುತ್ತಿತ್ತು. ರಾಜ್ಯದಲ್ಲಿ ತೆರಿಗೆ ಪಾವತಿಸುವ ವಲಯಗಳಲ್ಲಿ ಸೌಂದರ್ಯ ವರ್ಧಕ ಉತ್ಪನ್ನಗಳು 4ನೇ ಸ್ಥಾನದಲ್ಲಿದೆ. ಸೌಂದರ್ಯ ವರ್ಧಕಗಳ ಮಾರಾಟದಿಂದ ಮಾಸಿಕ 100 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ಆದರೆ, ಲಾಕ್​ಡೌನ್​ನಿಂದಾಗಿ ಆ ತೆರಿಗೆಯೂ ಸರ್ಕಾರಕ್ಕೆ ಬರದಂತಾಗಿದೆ.
ಆದಾಯ ಗಳಿಕೆ ಕಷ್ಟ: ಲಾಕ್​ಡೌನ್ ನಂತರ ಸಲೂನ್ ತೆರೆದರೂ, ಮೊದಲಿನಂತೆ ವಹಿವಾಟು ನಡೆಯಲು ತಿಂಗಳುಗಳೇ ಬೇಕು. ಕ್ಷೌರಿಕರು ಜನರ ನಿಕಟ ಸಂಪರ್ಕದಲ್ಲಿ ಕೆಲಸ ಮಾಡಬೇಕಾಗುತ್ತದೆ. ಕರೊನಾ ಹರಡುವ ಭಯ ಇರುವ ಕಾರಣ ಜನರು ಸಲೂನ್​ಗೆ ಬರಲು ಹಿಂಜರಿಯುತ್ತಾರೆ. ಹೀಗಾಗಿ ಲಾಕ್​ಡೌನ್ ಮುಗಿದರೂ, ಮೊದಲಿನಷ್ಟು ಆದಾಯ ಬರುವುದು ಕಷ್ಟ ಎನ್ನುವಂತಾಗಿದೆ.
ಜನರಿಗೂ ಸಮಸ್ಯೆ: ಅನೇಕರು ನಿತ್ಯ ಶೇವಿಂಗ್ ಮಾಡಿಸಿ ಕೊಳ್ಳುವುದು, ಕೆಲವರು ನಿಗದಿತ ದಿನಕ್ಕೊಮ್ಮೆ ಕ್ಷೌರ ಮಾಡಿಸಿಕೊಳ್ಳುವ ಪರಿಪಾಠ ಹೊಂದಿದ್ದಾರೆ. ಆದರೆ ಈಗ ಅದು ಸಾಧ್ಯವಾಗದೇ ಮಾನಸಿಕವಾಗಿ ವ್ಯಥೆ ಪಡುವಂತಾಗಿದೆ. ಗ್ರಾಮೀಣ ಭಾಗದಲ್ಲಿಯೂ ಮನೆಮನೆಗೆ ಭೇಟಿನೀಡುತ್ತಿದ್ದ ಹಳೆ ಪದ್ಧತಿ ಈಗ ಮತ್ತೆ ಜೀವ ಪಡೆದಿದೆ. ಕೆಲವರು ತಮ್ಮ ಪರಿಚಯದ ಕ್ಷೌರಿಕರನ್ನು ಮನೆಗೆ ಕರೆಸಿಕೊಂಡು ಕ್ಷೌರ ಮಾಡಿಸಿಕೊಳ್ಳುತ್ತಿದ್ದಾರೆ.
ಪಿಪಿಇಗೆ ಆಗ್ರಹ: ಜನರೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಕೆಲಸ ಮಾಡಬೇಕಿರುವ ಕಾರಣ ಪಿಪಿಇ ಕಿಟ್ ನೀಡುವಂತೆ ಕ್ಷೌರಿಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜತೆಗೆ ಆರ್ಥಿಕ ಸಮಸ್ಯೆ ನೀಗಿಸಲು ಪ್ಯಾಕೆಜ್ ಘೋಷಿಸುವಂತೆಯೂ ಆಗ್ರಹಿಸಲಾಗುತ್ತಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 9 =
Remember me
