ಬೆಂಗಳೂರು: ಸರ್ಕಾರಿ ಕಂಪನಿಗಳ ಶಾಸನಬದ್ಧ ನಿಗಮಗಳು ಸರ್ಕಾರದ ಪಾಲಿಗೆ ಬಿಳಿಯಾನೆಯಾಗುತ್ತಿವೆ ಎಂಬ ಟೀಕೆಯನ್ನು ಮಹಾ ಲೆಕ್ಕಪರಿಶೋಧಕರ ವರದಿ ಪುಷ್ಟೀಕರಿಸಿದೆ.
2018ರ ಮಾರ್ಚ್​ಗೆ ಕೊನೆಗೊಂಡ ಸಿಎಜಿ ವರದಿಯನ್ನು ಮಂಗಳವಾರ ಸರ್ಕಾರ ಮಂಡಿಸಿದೆ. ಅದರ ಪ್ರಕಾರ, ಕರ್ನಾಟಕದಲ್ಲಿ 94 ಕಾರ್ಯನಿರತ ಸಾರ್ವಜನಿಕ ವಲಯ ಉದ್ದಿಮೆಗಳು (88 ಕಂಪನಿ ಹಾಗೂ 6 ಶಾಸನಬದ್ಧ ನಿಗಮ) ಹಾಗೂ 13 ಕಾರ್ಯಸ್ಥಗಿತ ಉದ್ದಿಮೆಗಳು ಇದ್ದವು. 1.95 ಲಕ್ಷ ಉದ್ಯೋಗಿಗಳಿದ್ದಾರೆ.
2017-18ನೇ ಸಾಲಿನಲ್ಲಿ ಅಂತಿಮ ರೂಪಕ್ಕೆ ತರಲಾದ ಲೆಕ್ಕಪತ್ರಗಳ ಪ್ರಕಾರ, 63,834.61 ಕೋಟಿ ಮೊತ್ತದಷ್ಟು ವಹಿವಾಟು ನಡೆಸಿದ್ದವು. ಈ ವಹಿವಾಟು ರಾಜ್ಯದ ಒಟ್ಟು ದೇಶಿಯ ಉತ್ಪನ್ನದ ಶೇ.4.87ಕ್ಕೆ ಸಮನಾಗಿತ್ತು. ಆದರೆ, ಒಟ್ಟು 1,879.13 ಕೋಟಿ ಮೊತ್ತದಷ್ಟು ಸಂಚಿತ ನಷ್ಟ ಹೊಂದಿದ್ದವು ಎಂದು ಉಲ್ಲೇಖಿಸಲಾಗಿದೆ.
ವಿದ್ಯುತ್ ವಲಯಕ್ಕೆ ಸಂಬಂಧಿಸಿದಂತೆ 11 ಸಾರ್ವಜನಿಕ ವಲಯದ ಉದ್ದಿಮೆಗಳ ಪೈಕಿ ಆರು 431.51 ಕೋಟಿ ಲಾಭ ಗಳಿಸಿದ್ದವು. ಐದು 2019.09 ಕೋಟಿ ನಷ್ಟ ಭರಿಸಿದ್ದವು. ಕೆಪಿಟಿಸಿಎಲ್, ಬೆಸ್ಕಾಂ ಲಾಭದಲ್ಲಿದ್ದವು.
11.90 ಕೋಟಿ ರೂ. ಬಾಕಿ
ಪ್ರವಾಸೋದ್ಯಮ ಇಲಾಖೆ ಯಾವುದೇ ಪೂರ್ವತಯಾರಿ ನಡೆಸದೆ ಇಕೊ ಟೂರಿಸಂ ಯೋಜನೆಗಳನ್ನು ಘೊಷಿಸಿದ್ದರಿಂದ 11.90 ಕೋಟಿ ರೂ. ಮೊತ್ತದ ಏಳು ಯೋಜನೆಗಳು ಬಾಕಿ ಉಳಿದಿವೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಬನ್ನೇರುಘಟ್ಟ ರಾತ್ರಿ ಸಫಾರಿ ಯೋಜನೆ 9.50 ಕೋಟಿ ರೂ. ಬಿಡುಗಡೆ ಮಾಡಲಾಯಿತು. ಸಾರ್ವಜನಿಕ ವಿರೋಧದ ಹಿನ್ನೆಲೆಯಲ್ಲಿ ಈ ಯೋಜನೆ ಕೈಬಿಡಲಾಯಿತು. ಬಂಡೀಪುರದಲ್ಲಿ ಮೂಲಸೌಕರ್ಯ ಅಭಿವೃಧಿ್ಧೆ ಬಿಡುಗಡೆಯಾಗಿದ್ದ 2.35 ಕೋಟಿ ರೂ.ಗಳಲ್ಲಿ 46.31 ಲಕ್ಷ ರೂ. ಮಾತ್ರ ವೆಚ್ಚ ಮಾಡಲಾಗಿದೆ. ಭದ್ರಾ ಎರಡನೇ ಹಂತದಲ್ಲಿ ಇಕೊ ಟೂರಿಸಂ ಅಭಿವೃದ್ಧಿ ಯೋಜನೆಯಲ್ಲಿ ನೀರು ಸಂಸ್ಕರಣಾ ಘಟಕಗಳ ನಿರ್ವಣಕ್ಕೆ ಬಿಡುಗಡೆಗೊಳಿಸಿದ್ದ 1 ಕೋಟಿ ರೂ. ಅನುದಾನದಲ್ಲಿ ಎರಡು ಸೌರ ಸ್ಥಾವರಗಳ ಸ್ಥಾಪನೆಗೆ 15 ಲಕ್ಷ ರೂ. ಮಾತ್ರ ವೆಚ್ಚ ಮಾಡಲಾಗಿದೆ. ಬೆಂಗಳೂರಿನ ತುರಹಳ್ಳಿ ಅರಣ್ಯದಲ್ಲಿ ಇಕೊ ಟೂರಿಸಂ ಅಭಿವೃದ್ಧಿಗಾಗಿ 3 ಕಿ.ಮೀ. ಉದ್ದದ ಕಾಂಪೌಂಡ್ ನಿರ್ವಣಕ್ಕಾಗಿ 1 ಕೋಟಿ ರೂ. ಬಿಡುಗಡೆಗೊಳಿಸಲಾಗಿತ್ತು. ಭೂವಿವಾದದ ಕಾರಣ ಈ ಯೋಜನೆ ಅನುಷ್ಠಾನವಾಗಲಿಲ್ಲ.
ಮುಟ್ಟುಗೋಲು
ರಾಜ್ಯ ಖನಿಜ ನಿಗಮವು ಗಣಿಗಾರಿಕೆ ಕಾರ್ಯಾಚರಣೆ ವೇಳೆ ಪತ್ತೆ ಹಚ್ಚಿದ ಪರಮಾಣು ಖನಿಜಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪರಿಶೋಧನೆ ಮತ್ತು ಸಂಶೋಧನೆಗಾಗಿ ಪರಮಾಣು ಖನಿಜಗಳ ನಿರ್ದೇಶನಾಲಯಕ್ಕೆ ನೀಡಲು ವಿಫಲವಾಗಿತ್ತು. ಭಾರತ ಸರ್ಕಾರದ ಪೂರ್ವಾನುಮತಿ ಪಡೆಯದೆ ಕಂಪನಿಯು ಖನಿಜಗಳನ್ನು ಹೊರ ತೆಗೆದಿದ್ದರಿಂದ 15.21 ಕೋಟಿ ರೂ. ಮೊತ್ತದ ಖನಿಜಗಳನ್ನು ಮುಟ್ಟುಗೋಲು ಹಾಕಲಾಯಿತು.
ರಾಯಚೂರು ವಿದ್ಯುತ್ ನಿಗಮದ ಯರಮರಸ್ ಶಾಖೋತ್ಪನ್ನ ವಿದ್ಯುತ್ ಘಟಕದ ಕಾರ್ಯಗತ ವೇಳೆ ಮತ್ತು ನಿರ್ವಹಣೆಯಲ್ಲಿ ಮಾಡಿದ ತಪ್ಪುಗಳಿಂದ ದೊಡ್ಡ ಮಟ್ಟದಲ್ಲಿ ನಷ್ಟವಾಗಿರುವುದನ್ನು ಸಿಎಜಿ ಖಚಿತಪಡಿಸಿದೆ. ಪದೇಪದೆ ಭೂಮಿ ಬದಲಿಸಿದ್ದು, ಭೂಸ್ವಾಧೀನ ವಿಳಂಬ, ಶೀತಲ ಗೋಪುರ ಮಾದರಿ ಅಂತಿಮ ರೂಪಕ್ಕೆ ತರುವಲ್ಲಿನ ವಿಫಲತೆ, ವಾಣಿಜ್ಯ ಕಾರ್ಯಾಚರಣೆಗೆ ಸಿದ್ಧಗೊಂಡಿದೆ ಎಂದು ಘೋಷಿಸಿದ ಬಳಿಕವೂ ವ್ಯಾಗನ್ ನಿಲುಗಡೆ ವ್ಯವಸ್ಥೆ ಪೂರ್ಣಗೊಳಿದೆ ಇದ್ದದ್ದು ಸೇರಿ ಹತ್ತಾರು ಲೋಪದಿಂದ 2500 ಕೋಟಿಯಷ್ಟು ನಷ್ಟವನ್ನು ಲೆಕ್ಕಹಾಕಲಾಗಿದೆ.
ವಿದ್ಯುತ್ ವಲಯ ಹೊರತುಪಡಿಸಿ ಸಾರ್ವಜನಿಕ ವಲಯದ 96 ಉದ್ದಿಮೆಗಳಿದ್ದು, 83 ಕಾರ್ಯನಿರತ ವಾಗಿವೆ. 13 ಸ್ಥಗಿತಗೊಂಡಿವೆ. ಕಾರ್ಯನಿರತ ಉದ್ದಿಮೆಗಳ ಪೈಕಿ 45 ಉದ್ದಿಮೆಗಳು 976.44 ಕೋಟಿ ರೂ. ಲಾಭ ಗಳಿಸಿದ್ದರೆ, 25 ಉದ್ದಿಮೆಗಳು 1470.55 ಕೋಟಿ ರೂ. ನಷ್ಟ ಭರಿಸಿವೆ.
ಬಹಳಷ್ಟು ಸಂಖ್ಯೆಯ ಬೃಹತ್ ಮತ್ತು ಮಧ್ಯಮ ಪ್ರಮಾಣದ ನೀರಾವರಿ ಯೋಜನೆಗಳು ವಿವಿಧ ಕಾರಣಗಳಿಂದ ಸೊರಗಿವೆ. ಪ್ರಮುಖವಾಗಿ ತಮ್ಮ ವಿಲೆವಾರಿಗೆ ಸಂಬಂಧಿಸಿದಂತೆ ಸೀಮಿತ ಸಂಪನ್ಮೂಲಗಳ ಕಾರಣ, ರಾಜ್ಯ ಸರ್ಕಾರದ ಅಸಮರ್ಪಕ ಹಣಕಾಸು ವಿತರಣೆ ಬಗ್ಗೆ ಸಿಎಜಿ ಪ್ರಸ್ತಾಪಿಸಿದೆ.
ಕಂಪನಿ ನಿರ್ದೇಶಕರ ಮಂಡಳಿ ನಿರ್ಧಾರದ ಮೇಲೆ ಭೋಗ್ಯದ ಕರಾರು ರದ್ದುಗೊಳಿಸಿ ಮೈಸೂರು ಪೇಪರ್ ಮಿಲ್ಸ್ ಇಂಟರ್​ನ್ಯಾಷನಲ್​ಗೆ 5.73 ಕೋಟಿ ರೂ. ನಷ್ಟ ಸಂಭವಿಸಿದರೆ, ಬಿಎಂಟಿಸಿ 6.92 ಕೋಟಿ ವೆಚ್ಚದಲ್ಲಿ ಪರಿಸರಿಯ ಕಾನೂನು ಉಲ್ಲಂಘಿಸಿ ಪರಿಸರ ಅತಿ ಸೂಕ್ಷ್ಮತೆ ಕೂಡಿದ್ದ ಪ್ರದೇಶದಲ್ಲಿ ಬಸ್ ಡಿಪೋ ಆರಂಭಿಸಿತು.
ಅರಣ್ಯ ವಸತಿ ಮತ್ತು ವಿಹಾರಧಾಮ ನಿಯಮತಿ 11.90 ಕೋಟಿ ರೂ. ಅನುದಾನವನ್ನು ಉದ್ದೇಶಕ್ಕೆ ಬಳಸಿಕೊಳ್ಳಲಿಲ್ಲ, ಎಂಪಿಎಂ ಹೆಚ್ಚುವರಿ ಕಚ್ಚಾ ಸಾಮಗ್ರಿಗಳನ್ನು (ಪಲ್ಪ್ ಮರ) ವಿಲೇವಾರಿ ಮಾಡುವಲ್ಲಿ ಸಮಯೋಚಿತ ಕ್ರಮ ತೆಗೆದುಕೊಳ್ಳುವಲ್ಲಿನ ವಿಫಲತೆಯಿಂದ 4.74 ಕೋಟಿ ರೂ. ನಷ್ಟವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + nine =
Remember me
