ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಲೋಕಸಭೆ ಚುನಾವಣೆಯಲ್ಲಿ ಉತ್ತಮ ಸ್ಥಾನ ಗಳಿಕೆ ಉಮೇದಿ, ಕಾಂಗ್ರೆಸ್ ಸರ್ಕಾರದ ಸಂಕಷ್ಟಗಳ ಲಾಭ ಪಡೆಯಲು ಸದನ ಕದನಕ್ಕೆ ಕಮಲಪಡೆ ರಣವ್ಯೂಹ ರೆಡಿ ಮಾಡಿಕೊಂಡಿದೆ.
ವಿಧಾನಮಂಡಲ ಅಧಿವೇಶನದಲ್ಲಿ ಕೈ ಸರ್ಕಾರವನ್ನು ಕಟ್ಟಿಹಾಕಲು ಬಿಜೆಪಿ ಉತ್ಸಾಹದಿಂದ ಸನ್ನದ್ಧವಾಗಿದೆ. ಅಲ್ಲದೆ, ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲೇಬೇಕಾದ ಒತ್ತಡದ ಸ್ಥಿತಿ ಸೃಷ್ಟಿಸಲು ಇಚ್ಛಿಸಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮಕ್ಷಮ ಪ್ರಮುಖರ ಸಭೆ ಬುಧವಾರ ನಡೆಯಿತು. ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸುವ ಜತೆಗೆ ರಾಜ್ಯದ ಜನರಿಗೆ ರಚನಾತ್ಮಕ ಪ್ರತಿಪಕ್ಷವೆಂದು ಮನವರಿಕೆ ಮಾಡಿಕೊಡಲು ಅಧಿವೇಶನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಚಿಂತನೆ ನಡೆಸಿತು. ಹಗರಣ, ಸಮಸ್ಯೆ-ಸವಾಲುಗಳ ಸರಣಿಯೇ ಮುಂದಿರುವ ಕಾರಣ ಆದ್ಯತೆ ಅನುಸಾರ ವಿಷಯ, ವಿಚಾರ ಪ್ರಸ್ತಾಪಿಸುವ ಬಗ್ಗೆ ಗಹನವಾಗಿ ಪರಾಮಶಿಸಿತು. ಪೂರಕ ದಾಖಲೆ, ಹೆಚ್ಚುವರಿ ಮಾಹಿತಿ, ಆಡಳಿತ ಪಕ್ಷದ ದಾಳಕ್ಕೆ ಪ್ರತಿದಾಳ ಉರುಳಿಸುವುದು ಬಗ್ಗೆ ಒಂದಿಷ್ಟು ‘ಹೋಮ್ ವರ್ಕ್’ ಮಾಡಿಕೊಳ್ಳುವುದು ಮುಖ್ಯವೆಂಬ ನಿಲುವು ತಳೆದಿದೆ. ಪ್ರಚೋದನೆ ಅಥವಾ ಗದ್ದಲದ ತಿರುವು ಪಡೆಯದಂತೆ ವಿಷಯವನ್ನು ಪೂರ್ತಿ ಮಂಡಿಸುವುದು ರಣವ್ಯೂಹದ ಭಾಗವಾಗಿದೆ ಎನ್ನಲಾಗಿದೆ.
ಎಚ್​ಡಿಕೆ ಅಪೇಕ್ಷೆಗೆ ಸ್ಪಂದನೆ:ಜೆಡಿಎಸ್​ನ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರೊಂದಿಗೆ ಗುರುವಾರವೇ ಸಮನ್ವಯ ಸಭೆ ನಡೆಸಲು ಯೋಚಿಸಿತ್ತು. ಆದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಾವು ಕೂಡ ಈ ಸಭೆಗೆ ಬರುವುದಾಗಿ ಅಪೇಕ್ಷೆ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಎಚ್​ಡಿಕೆ ಕಾಲಾವಕಾಶ ಪಡೆದು ಶುಕ್ರವಾರ ಸಂಜೆ ಸಭೆ ನಡೆಸಲು ಯೋಚಿಸಿದ್ದು, ಸದನದಲ್ಲಿ ಜಂಟಿ ಕಾರ್ಯಸೂಚಿಗಳ ಮುಖ್ಯವಾಗಿ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸಿ.ಟಿ.ರವಿಗೆ ವಿಜಯೇಂದ್ರ ಬುಲಾವ್:ಆರ್.ಅಶೋಕ್ ಮತ್ತು ವಿಜಯೇಂದ್ರ ಸಮಕ್ಷಮ ಗೊತ್ತುಪಡಿಸಿದ್ದ ಪ್ರಮುಖರ ಸಭೆಗೆ ತಯಾರಿಸಿದ್ದ ಶಾಸಕರ ಪಟ್ಟಿಯಲ್ಲಿ ತಲಾ ಏಳು ವಿಧಾನಸಭೆ, ವಿಧಾನ ಪರಿಷತ್ ಸದಸ್ಯರ ಹೆಸರುಗಳಿದ್ದವು. ಆದರೆ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಸಿ.ಟಿ.ರವಿ ಹೆಸರುಗಳಿರಲಿಲ್ಲ. ಈ ಕಾರಣಕ್ಕೆ ಬೆಂಗಳೂರಿನಲ್ಲಿದ್ದರೂ ಸಿ.ಟಿ.ರವಿ ದೂರ ಉಳಿದಿದ್ದರು. ವಿಜಯೇಂದ್ರ ಸಭೆಗೆ ಬಂದ ನಂತರ ಸ್ವತಃ ಮೊಬೈಲ್​ಗೆ ಕರೆ ಮಾಡಿ ಸಿ.ಟಿ.ರವಿ ಅವರನ್ನು ಸಭೆಗೆ ಕರೆಯಿಸಿಕೊಂಡರು ಎಂದು ತಿಳಿದಿದೆ.
.ಗ್ಯಾರಂಟಿಗಳಿಗೆ ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನೆ ಅನುದಾನ ಬಳಕೆ
.ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ
.ಕಾಂಗ್ರೆಸ್ ಸರ್ಕಾರ ದಲಿತರ ವಿರೋಧಿ, ವ್ಯವಸ್ಥಿತ ಶೋಷಕವೆಂದು ಬಿಂಬಿಸುವುದು
.ಕಾನೂನು ಮತ್ತು ಸುವ್ಯವಸ್ಥೆ ಕುಸಿತ, ರೈತರ ಆತ್ಮಹತ್ಯೆಗಳು ಮತ್ತು ಅಭಿವೃದ್ಧಿ ಶೂನ್ಯ
.ತೈಲ ಇನ್ನಿತರ ಬೆಲೆಗಳ ಏರಿಕೆ, ಬಾಕಿಗಳನ್ನು ಪ್ರಸ್ತಾಪಿಸಿ ಆರ್ಥಿಕ ದುಃಸ್ಥಿತಿ ಬಹಿರಂಗ
.ಬೆಂಗಳೂರು ಮಹಾನಗರ ವಿಭಜನೆ, ರಾಮನಗರ ಜಿಲ್ಲೆ ಹೆಸರು ಬದಲಿಗೆ ವಿರೋಧ
.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಹು ಸಹಸ್ರ ಕೋಟಿ ರೂ. ನಿವೇಶನ ಅಕ್ರಮ
.ಭ್ರಷ್ಟಾಚಾರದಲ್ಲಿ ಸಿಎಂ, ಡಿಸಿಎಂ ಕಚೇರಿ ನಂಟು, ಹಗರಣಗಳ ಸರ್ಕಾರವೆಂಬ ಸಂದೇಶ
.ಹಠಾತ್ ಬೆಳವಣಿಗೆಗಳ ಮಹತ್ವದ ಆಧಾರದಲ್ಲಿ ತಕ್ಷಣ ಪ್ರಸ್ತಾಪಿಸಲು ಆದ್ಯತೆ
ಬಿಜೆಪಿ ರಾಜ್ಯ ಕಚೇರಿ:ಗುರುವಾರ ಬೆಳಗ್ಗೆ 10.30ಕ್ಕೆ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆ
ಮೈಸೂರು:ಮುಡಾ ನಿವೇಶನಗಳ ಅಕ್ರಮ ಹಂಚಿಕೆ ವಿರುದ್ಧ ಶುಕ್ರವಾರ ಪ್ರತಿಭಟನಾ ಸಮಾವೇಶ
ಬೆಂಗಳೂರು:ಶುಕ್ರವಾರ ಸಂಜೆ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ
ಬೆಂಗಳೂರು:ಸೋಮವಾರ ಸಂಜೆ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ
ವಾಲ್ಮೀಕಿ ನಿಗಮದ ಹಗರಣ, ಮುಡಾ ನಿವೇಶನಗಳ ಹಂಚಿಕೆ ಅಕ್ರಮ, ಎಸ್​ಸಿಎಸ್​ಪಿ-ಟಿಎಸ್​ಪಿ ಹಣ ದುರ್ಬಳಕೆ ಇವೆಲ್ಲದರ ಬಗ್ಗೆ ಸದನದಲ್ಲಿ ರ್ಚಚಿಸುತ್ತೇವೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಪಾರದರ್ಶಕ ತನಿಖೆಗೆ ಸಹಕರಿಸಬೇಕು, ಖಳನಾಯಕ ಆಗಬಾರದು.
| ಸಿ.ಟಿ.ರವಿ ವಿಧಾನ ಪರಿಷತ್ ಸದಸ್ಯ
ಅಧಿವೇಶನದಲ್ಲಿ ಯಾವ್ಯಾವ ವಿಚಾರ ಪ್ರಸ್ತಾಪಿಸಬೇಕು ಎಂಬ ಬಗ್ಗೆ ರ್ಚಚಿಸಿದ್ದೇವೆ. ಅಭಿವೃದ್ಧಿ ಕೆಲಸ ನಿಲ್ಲಿಸಿರುವ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದೇವೆ. ಭ್ರಷ್ಟಾಚಾರ ಪ್ರಕರಣದಲ್ಲಿ ಸದನದ ಹೊರಗೆ ಹಾಗೂ ಒಳಗೆ ಪ್ರತಿಪಕ್ಷದ ಹೋರಾಟವಿರಲಿದೆ.
| ಬಿ.ವೈ.ವಿಜಯೇಂದ್ರ ಅಧ್ಯಕ್ಷ, ರಾಜ್ಯ ಬಿಜೆಪಿ
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣಗಳು ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಇದನ್ನೇ ಮುಂದಿಟ್ಟು ಪ್ರತಿಪಕ್ಷಗಳು ಬಿಗಿಪಟ್ಟು ಹಿಡಿದು, ನಿರ್ಣಾಯಕ ಹೋರಾಟ ನಡೆಸುವುದು ಅಧಿವೇಶನದ ಪ್ರಮುಖ ತಂತ್ರಗಾರಿಕೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು. ಖಾಸಗಿ ಹೋಟೆಲ್​ನಲ್ಲಿ ಬುಧವಾರ ನಡೆದ ಪಕ್ಷದ ಪ್ರಮುಖರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಭ್ರಷ್ಟಾಚಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾದ ಮುಡಾ ಹಗರಣದ ಬಗ್ಗೆ ಮಾತನಾಡಲು ಸದನದಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ ಮಂಡಿಸಲಾಗುವುದು.
ರಾಜ್ಯದ ಅನೇಕ ಸಮಸ್ಯೆಗಳು, ಮಹತ್ವದ ವಿಷಯಗಳ ಬಗ್ಗೆ ವಿಸõತ ಚರ್ಚೆಯಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 15 ರಿಂದ ನಡೆಯಲಿರುವ ವಿಧಾನ ಮಂಡಲ ಅಧಿವೇಶನವನ್ನು ಇನ್ನೂ ಒಂದು ವಾರ ವಿಸ್ತರಣೆ ಮಾಡಬೇಕೆಂದು ಆಗ್ರಹಿಸಲಾಗುವುದು ಎಂದರು.
ಹೆಸರು ಬದಲಿಸುವ ಹಕ್ಕಿಲ್ಲ:ರಾಮನಗರ ಜಿಲ್ಲೆಗೆ ಸ್ಥಳ ಮಹಿಮೆ ಇದೆ. ಈ ಹೆಸರನ್ನು ಕಾಂಗ್ರೆಸ್ ನಾಯಕರು ಇಟ್ಟಿಲ್ಲ ಅಂದ ಮೇಲೆ ಅದನ್ನು ತೆಗೆಯಲು ಅವರಿಗೆ ಯಾವುದೇ ಹಕ್ಕು ಇಲ್ಲ. ಕರ್ನಾಟಕದಲ್ಲಿ ರಾಮ-ಕೃಷ್ಣ ಎಂದಿರುವ ಊರುಗಳ ಹೆಸರುಗಳನ್ನು ಬದಲಾಯಿಸುತ್ತಾರೆಯೆ ?. ರಾಮನ ಮೇಲೆ ದ್ವೇಷ ಇದ್ದರೆ ಬೇರೆ ದಾರಿ ನೋಡಿಕೊಳ್ಳಲಿ. ತುಘಲಕ್​ರಂತೆ ಎಲ್ಲವನ್ನೂ ಬೆಂಗಳೂರಿಗೆ ಸೇರಿಸಬಾರದು ಎಂದು ಅಶೋಕ್ ಎಚ್ಚರಿಸಿದರು.
https://www.vijayavani.net/maharashtra-18-year-old-ends-life-after-father-denies-iphone-in-navi-mumbai
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 5 =
Remember me
