ಊಖಿಮಠ (ಉತ್ತರಖಂಡ) : ಹಿಮಾಲಯದಲ್ಲಿ ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳು ಈಗಾಗಲೇ ಬಾಗಿಲು ತೆರೆದಿದ್ದು, ಚಾರಧಾಮ್ ಯಾತ್ರೆಗೆ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ನಡುವೆ ಪಂಚ ಕೇದಾರಗಳಲ್ಲಿ ಎರಡನೇಯದಾದ ಮಧ್ಯಮಹೇಶ್ವರ ದೇವಾಲಯವು ಇದೇ ಮೇ 20ಕ್ಕೆ ಬಾಗಿಲು ತೆರೆಯಲಿದೆ.
ಪದ್ಧತಿಯಂತೆ ಕೇದಾರ ವೈರಾಗ್ಯ ಸಿಂಹಾಸನ ಪೀಠದ ಗದ್ದಿಸ್ಥಾನದಿಂದ ಮಧ್ಯಮಹೇಶ್ವರ ದೇವರ ಉತ್ಸವ ಮೂರ್ತಿಯನ್ನು ಹೊತ್ತು ಪಲ್ಲಕ್ಕಿಯು ಶನಿವಾರ ಪ್ರಸ್ಥಾನಗೊಂಡಿದೆ. ಉತ್ಸವಕ್ಕೆ ಕೇದಾರ ಜಗದ್ಗುರು ಡಾ.ಭೀಮಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಚಾಲನೆ ನೀಡಿದರು.
ಊಖಿಮಠದ ಓಂಕಾರೇಶ್ವರ ಮಂದಿರದ ಪ್ರಧಾನ ಅರ್ಚಕ ವಾಗೀಶಲಿಂಗ ಅವರು ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು. ಶನಿವಾರ ಆರಂಭವಾಗಿರುವ ಪಲ್ಲಕ್ಕಿ ಉತ್ಸವವು ಮೊದಲನೇ ದಿನ ಹಿಮಾಲಯದ ರಾಶಿ ಎಂಬ ಸ್ಥಳದಲ್ಲಿ ಮೊಕ್ಕಾಂ ಮಾಡಲಿದೆ. ಎರಡನೇ ದಿನ ಗೋಂಡಾರ್ ಎಂಬ ಸ್ಥಳದಲ್ಲಿ ತಂಗಲಿದ್ದು, ಮೇ 20ಕ್ಕೆ ಬೆಳಗ್ಗೆ ಮಧ್ಯಮಹೇಶ್ವರ ದೇವಾಲಯವನ್ನು ತಲುಪಲಿದೆ. ಅಂದು ಮಧ್ಯಾಹ್ನ 12.30ಕ್ಕೆ ಬಾಗಿಲು ತೆರೆಯಲಾಗುವುದು.
ಅತ್ಯಂತ ದುರ್ಗಮ ಹಾದಿಯನ್ನು ಕ್ರಮಿಸಿ ಹೋಗಬೇಕಾಗಿರುವ ದ್ವಿತೀಯ ಕೇದಾರ ಎಂದೇ ಪ್ರಸಿದ್ಧವಾಗಿರುವ ಮಧ್ಯಮಹೇಶ್ವರ ದೇವಾಲಯದ ಪ್ರಧಾನ ಅರ್ಚಕರಾಗಿ ಕರ್ನಾಟಕ ಮೂಲದ ಶ್ರೀಗಂಗಾಧರಲಿಂಗ ಅವರನ್ನು ನೇಮಕ ಮಾಡಲಾಗಿದೆ. ಆರು ತಿಂಗಳ ಕಾಲ ಮಧ್ಯಮಹೇಶ್ವರ ಸಾರ್ವಜನಿಕರ ದರ್ಶನಕ್ಕೆ ದೊರೆಯಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + twelve =
Remember me
