ತಿ.ನರಸೀಪುರ:ತಾಲೂಕಿನ ಹೊರಳಹಳ್ಳಿ ಗ್ರಾಮದ ತೋಟವೊಂದರಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಚಿರತೆಯೊಂದು ಗುರುವಾರ ಸೆರೆಯಾಗಿದೆ. ಇತ್ತೀಚೆಗಷ್ಟೇ ಹೊರಳಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಯೊಬ್ಬನನ್ನು ಕೊಂದು ಹಾಕಿದ್ದ ಚಿರತೆಯೇ ಈಗ ಸೆರೆ ಸಿಕ್ಕಿರುವುದು ಎನ್ನಲಾಗಿದ್ದು, ಇದನ್ನು ಬನ್ನೇರುಟ್ಟ ಅರಣ್ಯ ಪ್ರದೇಶದಲ್ಲಿ ಬಿಡಲು ಕೊಂಡೊಯ್ಯಲಾಯಿತು. ತಾಲೂಕಿನ ನೆರೆಗ್ಯಾತನಹಳ್ಳಿ -ಹೊರಳಹಳ್ಳಿ ಗ್ರಾಮಗಳಿಗೆ ಹೊಂದಿಕೊಂಡಂತಿರುವ ಸತ್ಯಪ್ಪ ಎಂಬುವರ ತೋಟದಲ್ಲಿ ಅರಣ್ಯ ಇಲಾಖೆಯವರು ಚಿರತೆ ಸೆರೆಗಾಗಿ ದೊಡ್ಡ ಬೋನನ್ನು ಇಟ್ಟಿದ್ದರು. ಬೋನಿನಲ್ಲಿ ಇರಿಸಿದ್ದ ಮೇಕೆಯನ್ನು ತಿನ್ನಲು ಬಂದ ಚಿರತೆ ಸೆರೆಯಾಗಿದ್ದು, ಇದರಿಂದ ಗ್ರಾಮಸ್ಥರಲ್ಲಿ ಮನೆ ಮಾಡಿದ್ದ ಆತಂಕ ಕೊಂಚ ದೂರವಾಗಿದೆ.
ಶೂಟ್​ ಮಾಡಿ ಕೊಲ್ಲಲು ಪಟ್ಟು:ಸೆರೆಸಿಕ್ಕ ಚಿರತೆಯನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿದ್ದರಿಂದ ಸ್ಥಳದಲ್ಲಿ ಜನಸಂದಣಿ ಹೆಚ್ಚಾಯಿತು. ಚಿರತೆಯನ್ನು ಅರಣ್ಯಾಧಿಕಾರಿಗಳು ಬೇರೆಡೆ ಸಾಗಿಸಲು ಪ್ರಯತ್ನಪಟ್ಟಾಗ ಗ್ರಾಮಸ್ಥರು ತಡೆದು ಚಿರತೆಯನ್ನು ಸ್ಥಳದಲ್ಲೇ ಶೂಟ್​ ಮಾಡಿ ಕೊಲ್ಲುವಂತೆ ಪಟ್ಟು ಹಿಡಿದರು. ಅಲ್ಲದೆ ಚಿರತೆ ಇದ್ದ ವಾಹನವನ್ನು ಜನರು ಸುತ್ತುವರಿದು ಅಡ್ಡ ಮಲಗಿ ಪ್ರತಿಭಟಿಸಿದರು. ಈ ನಡುವೆ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಗೊಂದಲ ಉಂಟಾಯಿತು. ಗ್ರಾಮಸ್ಥರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಉಪ ವಿಭಾಗಾಧಿಕಾರಿ ಕಮಲಾಬಾಯಿ ವನ್ಯಜಿವಿ ಕಾಯ್ದೆ ಪ್ರಕಾರ ಸೆರೆ ಸಿಕ್ಕ ಯಾವುದೇ ಪ್ರಾಣಿಯನ್ನೂ ಕೊಲ್ಲುವಂತಿಲ್ಲ. ಹಾಗಾಗಿ ಚಿರತೆಯನ್ನು ಬೇರೆಡೆ ಸಾಗಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿ, ಜನರ ಮನವೊಲಿಸಲಾಯಿತು.ಬಳಿಕ ಚಿರತೆಯನ್ನು ಬನ್ನೇರುಟ್ಟ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಚಿರತೆ ಕಾರ್ಯಪಡೆ ರಚನೆಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಚಿರತೆ ದಾಳಿ ಪ್ರಕರಣಗಳು ಮರುಕಳಿಸದಂತೆ “ಚಿರತೆ ಕಾರ್ಯಪಡೆ’ ರಚಿಸಿ, ತಣವೇ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜ್ಯದ ವಿವಿಧೆಡೆ ಚಿರತೆ ದಾಳಿ ಪ್ರಕರಣಗಳು ಭೀತಿ ಸೃಷ್ಟಿಸುತ್ತಿವೆ. ಈ ಹಿನ್ನೆಲೆಯಲ್ಲಿ ಚಿರತೆ ಸೆರೆ ಕಾರ್ಯಾಚರಣೆಗಾಗಿ ಪ್ರತ್ಯೇಕ ತಂಡ ರಚಿಸುವುದಾಗಿ ಸಿಎಂ ಪ್ರಕಟಿಸಿದ್ದಾರೆ. ಮೈಸೂರು ಭಾಗದ ಸಾರ್ವಜನಿಕರಿಗೆ ಆತಂಕ ಉಂಟು ಮಾಡಿದ್ದ, ನರಭಕ ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ. ಚಿರತೆ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿ, ಸಾರ್ವಜನಿಕರ ನೆಮ್ಮದಿಗೆ ಕಾರಣರಾದ ಅರಣ್ಯ ಅಧಿಕಾರಿಗಳ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 6 =
Remember me
