ಮಂಗಳೂರು:ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕರೊನಾ ಸೋಂಕಿಗೆ ಔಷಧ ಅಭಿವೃದ್ಧಿಪಡಿಸುವಲ್ಲಿ ಮಂಗಳೂರು ಮೂಲದ ವೈದ್ಯ ಡಾ.ವಿಶಾಲ್ ರಾವ್ ನೇತೃತ್ವದ ತಂಡ ಬಹುತೇಕ ಯಶಸ್ವಿಯಾಗಿದೆ. ಈ ಔಷಧ ಕ್ಲಿನಿಕಲ್ ಟ್ರಯಲ್​ನ ಅಂತಿಮ ಹಂತ ತಲುಪಿರುವುದಾಗಿ ಬೆಂಗಳೂರಿನ ಎಚ್​ಸಿಜಿ ಆಸ್ಪತ್ರೆಯ ಕ್ಯಾನ್ಸರ್ ತಜ್ಞ, ಪ್ರಾದೇಶಿಕ ನಿರ್ದೇಶಕ ಡಾ.ವಿಶಾಲ್ ರಾವ್ ತಿಳಿಸಿದ್ದಾರೆ. ಮನುಷ್ಯನ ದೇಹದೊಳಗಿನ ವೈರಸ್ ಕೊಲ್ಲುವ ಇಂಟರ್ ಫೆರೋನ್ (ಪೊ›ಟೀನ್) ಪದಾರ್ಥದ ಕಣಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಕೊವಿಡ್ -19 ಪ್ರಕರಣದಲ್ಲಿ ಈ ಕಣ ಬಿಡುಗಡೆಯಾಗುವುದಿಲ್ಲ. ಸೋಂಕಿತರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿರುವುದೇ ಇದಕ್ಕೆ ಕಾರಣ.
ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಡಾ.ವಿಶಾಲ್ ರಾವ್ ಕಾಲೇಜು ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಡೆದು ಬೆಳಗಾವಿಯಲ್ಲಿ ಎಂಬಿಬಿಎಸ್ ಮುಗಿಸಿದರು. ಮುಂಬೈ ಟಾಟಾ ಆಸ್ಪತ್ರೆಯಲ್ಲಿ ಎಂಎಸ್ ಹಾಗೂ ಲಂಡನ್​ನಲ್ಲಿ ಎಫ್​ಆರ್​ಸಿಎಸ್ ಪದವಿ ಗಳಿಸಿದ್ದಾರೆ. ಅವರೊಂದಿಗೆ ಡಾ.ಗುರುರಾಜ ರಾವ್ ಹಾಗೂ ಡಾ.ಜ್ಯೋತ್ಸಾ್ನ ರಾವ್ ಕೂಡಾ ಈ ಹೊಸ ಔಷಧದ ಅಭಿವೃದ್ಧಿಯಲ್ಲಿ ಕೈ ಜೋಡಿಸಿದ್ದಾರೆ. ಇದೊಂದು ಸರಳ ಚಿಕಿತ್ಸೆ. ಇಂಜೆಕ್ಷನ್ ಅಥವಾ ಐವಿ ಮೂಲಕ ದೇಹಕ್ಕೆ ಸೈಟೊಕೈನ್​ಗಳನ್ನು ಸೇರಿಸುವ ಮೂಲಕ ವೈರಸ್ ವಿರುದ್ಧ ಕಾದಾಡುವ ಶಕ್ತಿಯನ್ನು ದೇಹದ ಜೀವಕಣಗಳಿಗೆ ನೀಡುವುದು. ಇದನ್ನು ಆದಷ್ಟು ಬೇಗ ಪರಿಶೀಲನೆ ಮಾಡುವಂತೆ ಸರ್ಕಾರಗಳಿಗೆ ಕೋರಲಾಗಿದೆ ಎಂದು ಡಾ.ವಿಶಾಲ್ ರಾವ್ ತಿಳಿಸಿದ್ದಾರೆ.
ಕಾರ್ಯನಿರ್ವಹಣೆ ಹೇಗೆ
ಡಾ.ರಾವ್ ಪ್ರಕಾರ, ದೇಹದಲ್ಲಿ ಕರೊನಾ ವೈರಸ್​ನಿಂದ ಕಳೆದುಹೋದ ರೋಗನಿರೋಧಕ ಶಕ್ತಿಯನ್ನು ಹೊಸ ಔಷಧದ ಮೂಲಕ ಮರಳಿ ಪಡೆಯಬಹುದು. ಸೈಟೊಕೈನ್​ಗಳ ಮಿಶ್ರಣವನ್ನು ಸಿದ್ಧಪಡಿಸಿದ್ದು, ಇದನ್ನು ಕರೊನಾ ಪಾಸಿಟಿವ್ ಇರುವ ರೋಗಿಗಳ ದೇಹಕ್ಕೆ ನೀಡಿದಾಗ ಅವರ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಸೈಟೊಕೈನ್​ಗಳು ದೇಹಕ್ಕೆ ಸೇರಿದ ನಂತರ ಜೀವಕಣಗಳು ಇಂಟರ್​ಫೆರೊನ್ ಎನ್ನುವ ರಾಸಾಯನಿಕವನ್ನು ಬಿಡುಗಡೆಗೊಳಿಸುತ್ತವೆ, ಇದರಿಂದ ವೈರಸ್​ಗಳು ನಾಶವಾಗುತ್ತವೆ.
ಕರೊನಾಗೆ ಸಂಭಾವ್ಯ ಲಸಿಕೆ ಅಭಿವೃದ್ಧಿಪಡಿಸಿದ ಹೈದರಾಬಾದ್​ ವಿವಿ ಬಯೋಕೆಮಿಸ್ಟ್ರಿ ವಿಭಾಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
