ಬೆಂಗಳೂರು:ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವದ್ಯಾಲಯದಲ್ಲಿ ಇತ್ತೀಚೆಗೆ ಆರ್‌ಎಸ್‌ಎಸ್ ಸಭೆ ನಡೆಸಿದೆ ಎನ್ನಲಾದ ಆರೋಪವನ್ನು ಆಡಳಿತ ಮಂಡಳಿ ಸಮರ್ಥಿಸಿಕೊಂಡಿರುವುದಕ್ಕೆ ‘ಜಾಗೃತ ನಾಗರಿಕರು ಕರ್ನಾಟಕ’ ವೇದಿಕೆಯ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವೇದಿಕೆಯ ಸದಸ್ಯ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾರಂಭದಿಂದಲೂ ಆರ್‌ಎಸ್‌ಎಸ್ ಇಂತಹ ಅಕ್ರಮ ಚಟುವಟಿಕಗಳನ್ನು ನಡೆಸುತ್ತಿರುವುದು ಮಾದ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಇದರ ವಿರುದ್ಧ ಸ್ಥಳೀಯರು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ವಿವಿ ಆಡಳಿತ ಮಂಡಳಿಯವರು ಸಂಘದ ಕಾರ್ಯಕರ್ತರಂತೆ ವರ್ತಿಸುತ್ತಿದ್ದು, ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ ಎಂಬ ಧೈರ್ಯದಲ್ಲಿ ವರ್ತಿಸುತ್ತಿರುವಂತಿದೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸಿದ್ಧಾಂತ ಭೇದವಿಲ್ಲದೆ ಶಿಕ್ಷಣ ನೀಡಬೇಕಾದ ವಿವಿ ಆವರಣದಲ್ಲಿ ಇಂತಹ ಚಟುವಟಿಕೆ ಮರುಕಳಿಸುತ್ತಿರುವುದು ಶೈಕ್ಷಣಿಕ ವಲಯದ ಮಹಾ ದುರಂತ ಎಂದು ವಿಶ್ಲೇಷಿಸಿದ್ದಾರೆ. ವಿ.ವಿ.ಯಲ್ಲಿ ಸಂಘಿಗಳ ಸಭೆ, ಚಟುವಟಿಕೆ, ಸಂಘದ ಗೀತೆಯಾಗಿರುವ ನಮಸ್ತೇ ಸದಾ ವತ್ಸಲೇ ಹಾಡಿಸುವುದು ದೇಶದ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರವಾಗಿದೆ. ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನಃಸ್ಥಿತಿಯನ್ನು ಮೂಡಿಸುವ, ಧರ್ಮದ್ವೇಷ, ಹಗೆತನ ಬೆಳೆಸುವುದು ಖಂಡನೀಯ ಎಂದು ವೇದಿಕೆಯ ಮುಖಂಡರಾದ ಪ್ರೊ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಮತ್ತಿತರರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
