ಬಾಗಲಕೋಟೆ:ಜಮಖಂಡಿ ನಗರದ ಒಂದು ಕ್ವಾರಂಟೈನ್​ ಕೇಂದ್ರದಲ್ಲಿರುವ ಕೂಲಿ ಕಾರ್ಮಿಕರು ಗೇಟ್​ ಬಳಿ ನಿಂತು ತಟ್ಟೆ ಬಾರಿಸಿ, ಗೋಳಾಡುತ್ತಿದ್ದಾರೆ.
ದೇವರಾಜ ಅರಸು ವಸತಿ ನಿಲಯದ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆಗಳ ಆಗರವಾಗಿದೆ. ಒಬ್ಬೇ ಒಬ್ಬ ಅಧಿಕಾರಿ ಬಂದು ನಮ್ಮನ್ನು ನೋಡುತ್ತಿಲ್ಲ. ಬಂದು 17ದಿನಗಳಾದರೂ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಅಧಿಕಾರಿಗಳು ಇಲ್ಲಿಗೆ ಬರೋಕೆ ತಯಾರಿಲ್ಲ. ವರದಿ ಬಂದಿಲ್ಲ ಎನ್ನುತ್ತಾರೆ. ಇನ್ನೊಮ್ಮೆ ಪರೀಕ್ಷೆ ಮಾಡಬೇಕು ಎಂದರೆ ಸ್ಯಾಂಪಲ್​ ತಗೊಂಡು ಹೋಗಬೇಕು. ಆದರೆ ಗಂಟಲು ದ್ರವದ ಮಾದರಿ ತಗೊಂಡು ಹೋಗ್ತಿಲ್ಲ. ರಿಪೋರ್ಟು ಬರುತ್ತಿಲ್ಲ ಎನ್ನುತ್ತಾರೆ. ನಮ್ಮನ್ನೂ ಬಿಡುತ್ತಿಲ್ಲ. ಇಲ್ಲಿ ಸ್ವಚ್ಛತೆ ಇಲ್ಲ ಎಂದು ಸಿಕ್ಕಾಪಟೆ ಗಲಾಟೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ 24ಗಂಟೆಯಲ್ಲಿ 101 ಹೊಸ ಕೊವಿಡ್​-19 ಕೇಸ್​ಗಳು; ಯಾವ ಜಿಲ್ಲೆಗಳಲ್ಲಿ ಎಷ್ಟು?
ಸರಿಯಾಗಿ ಹೊಟ್ಟೆ ತುಂಬುತ್ತಿಲ್ಲ. ಉಪ್ಪಿಲ್ಲ, ಖಾರವಿಲ್ಲದ ಊಟವನ್ನು ಕೊಡುತ್ತಾರೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಗೇಟ್ ಹೊರಗೆ ಊಟ, ಉಪಾಹಾರ ಇಟ್ಟು ಹೋಗುತ್ತಾರೆ. ಅದೂ ಕಳಪೆ ಆಗಿರುತ್ತದೆ. ತಿನ್ನೋಕೂ ಆಗೋದಿಲ್ಲ, ಬಿಡೋಕು ಆಗೋದಿಲ್ಲ ಎಂದು ಆರೋಪಿಸುತ್ತಿರುವ ಕೂಲಿ ಕಾರ್ಮಿಕರು, ಗೇಟ್​ಬಳಿ ಸಾಲಾಗಿ ನಿಂತು ತಟ್ಟೆ ಬಾರಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)ಇದನ್ನೂ ಓದಿ:ಸಲೂನ್​​ಗಳು ತೆರೆದಿದ್ದರೂ ನೀವು ಹೋಗೋ ಮುನ್ನ ಇನ್ನೊಮ್ಮೆ ಯೋಚಿಸಿ…ಈ ಘಟನೆ ನಡೆದದ್ದು ಉಡುಪಿಯಲ್ಲಿ !
https://www.facebook.com/VVani4U/videos/1044108532650260/?t=4
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × five =
Remember me
