ಶಿವಮೊಗ್ಗ:ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಪ್ರಕರಣದ ಪ್ರಮುಖ ಆರೋಪಿ ಸೊಪ್ಪುಗುಡ್ಡೆಯ ಶಾರೀಕ್ ಮೇಲೆ ಲುಕ್​ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಬಂಧಿತರಿಬ್ಬರು ಐಸಿಸ್​ನ ನೇರ ಸಂಪರ್ಕಕ್ಕೆ ಸಿಕ್ಕಿಲ್ಲ. ಆದರೆ ಸಂಘಟನೆಯಿಂದ ಪ್ರಭಾವಿತರಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಬಂಧಿತ ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ ಮತ್ತು ಶಿವಮೊಗ್ಗ ಸಿದ್ದೇಶ್ವರ ನಗರದ ಸೈಯದ್ ಯಾಸೀನ್ ಅಲಿಯಾಸ್ ಬೈಲು ಅವರಿಂದ ಮೊಬೈಲ್, ಲ್ಯಾಪ್​ಟಾಪ್, ಡಾಂಗಲ್, ಪೆನ್​ಡ್ರೖೆವ್, ಎಲೆಕ್ಟ್ರಾನಿಕ್ ವಸ್ತುಗಳು, ಕೆಲ ದಾಖಲಾತಿಗಳನ್ನು ವಶಪಡಿಸಕೊಳ್ಳಲಾಗಿದೆ. ಆರೋಪಿಗಳು ತನಿಖೆಗೆ ಪೂರ್ಣಪ್ರಮಾಣದಲ್ಲಿ ಸಹಕರಿಸುತ್ತಿಲ್ಲ. ಹೀಗಾಗಿ ಶಾರೀಕ್ ಸಿಕ್ಕ ಬಳಿ ಪ್ರಕರಣದ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.
ಈಗಾಗಲೆ ಯುಎಪಿಎ (ಅನ್​ಲಾಫುಲ್ ಅಕ್ಟಿವಿಟೀಸ್ ಪ್ರಿವೆಂಶನ್ ಆಕ್ಟ್) ಅಡಿ ಕೇಸ್ ದಾಖಲಿಸಿಕೊಂಡಿದ್ದು ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಯಾಸೀನ್ ಮತ್ತು ಮಾಜ್ ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ನಂತರ ಗುರುಪುರದ ತುಂಗಾನದಿ ದಡದ ಕೆಮ್ಮನಗುಂಡಿಯಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಪೋಟಿಸಿದ್ದರು. ಸ್ಫೋಟ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ಜಿಹಾದ್ ನಡೆಸಲು ಗುರುಪುರದ ಮನೆ ಮತ್ತು ಮಂಗಳೂರಿನಲ್ಲಿ ಮತ್ತಷ್ಟು ಸ್ಪೋಟಕಗಳನ್ನು ಸಂಗ್ರಹಿಸಿದ್ದರು. ಆರೋಪಿಗಳು ಬಾಂಬ್ ಸ್ಪೋಟಿಸಿದ ಜಾಗದಲ್ಲಿ ರಾಷ್ಟ್ರಧ್ವಜವನ್ನು ಅರೆಬರೆ ಸುಟ್ಟು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿಕೊಂಡು ವಿಕೃತಿ ಮೆರೆದಿದ್ದಾರೆ. ಆ ವೀಡಿಯೋ ಕೂಡ ಆರೋಪಿಗಳ ಮೊಬೈಲ್​ನಲ್ಲಿ ಪತ್ತೆಯಾಗಿವೆ ಎಂದು ಎಸ್ಪಿ ಸ್ಪಷ್ಟಪಡಿಸಿದರು.
ಕ್ರಿಪ್ಟೋ ಡಿಜಿಟಲ್ ಕರೆನ್ಸಿ ಫಂಡಿಂಗ್:ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಒಳಸಂಚು ರೂಪಿಸಿ ದೇಶದ ಐಕ್ಯತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಪಾಸ್ತಿ ಮತ್ತು ಪ್ರಾಣಕ್ಕೆ ಅಪಾಯವಾಗುವ ಸ್ಪೋಟಕಗಳನ್ನು ಸಂಗ್ರಹಿಸಲು ಶಾರೀಕ್ ಆನ್​ಲೈನ್ ಮೂಲಕ ಕ್ರಿಪ್ಟೋ ಡಿಜಿಟಲ್ ಕರೆನ್ಸಿಯನ್ನು ಯಾಸಿನ್​ಗೆ ಕಳುಹಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಹಣ ಹೂಡಿಕೆ ಬಗ್ಗೆ ತನಿಖೆ ಮುಂದುವರಿದಿದೆ. ಹಲವಾರು ಬಾರಿ ಯಾಸಿನ್​ಗೆ ಕ್ರಿಪ್ಟೋ ಕರೆನ್ಸಿ ಕಳುಹಿಸಲಾಗಿದೆ. ಆದರೆ ಶಾರೀಕ್​ಗೆ ಯಾರು ಫಂಡಿಂಗ್ ಮಾಡುತ್ತಿದ್ದರು ಎಂಬುದು ಇನ್ನೂ ಖಚಿತವಾಗಿಲ್ಲ.
11 ಕಡೆ ದಾಳಿ, ಪ್ರಮುಖ ಸಾಕ್ಷ್ಯ ಜಪ್ತಿ:ಮೂವರು ಆರೋಪಿತರು ಮತ್ತು ಅವರ ಸಂಬಂಧಿಕರ ಮನೆಗಳು ಸೇರಿ ಶಿವಮೊಗ್ಗ ನಗರ, ಮಂಗಳೂರು ನಗರ ಮತ್ತು ತೀರ್ಥಹಳ್ಳಿಯ 11 ಕಡೆ ಏಕಕಾಲಕ್ಕೆ ದಾಳಿ ನಡೆಸಿ ಶೋಧಿಸಿ ಹಲವಾರು ಮಹತ್ವದ ಸಾಕ್ಷ್ಯಳನ್ನು ಸಂಗ್ರಹಿಸಲಾಗಿದೆ. 14 ಮೊಬೈಲ್, ತಲಾ ಒಂದು ಡಾಂಗಲ್, ಪೆನ್​ಡ್ರೖೆವ್, ಎರಡು ಲ್ಯಾಪ್​ಟಾಪ್, ಇತರ ಎಲೆಕ್ಟ್ರಾನಿಕ್ ಗ್ಯಾಡ್ಜ್​ಟ್​ಗಳು, ಬಾಂಬ್ ಸ್ಫೋಟ ಮಾಡಿದ ಸ್ಥಳದಲ್ಲಿ ಛಿದ್ರಗೊಂಡ ಬಾಂಬ್​ನ ಅವಶೇಷಗಳು ಸಿಕ್ಕಿವೆ. ರಿಲೆ ರ್ಸಟ್, ಬಲ್ಬ್​ಗಳು, ಮ್ಯಾಚ್ ಬಾಕ್ಸ್​ಗಳು, ವಯರ್​ಗಳು, ಬ್ಯಾಟರಿಗಳು ಸೇರಿ ಬಾಂಬ್ ತಯಾರಿಕೆಗೆ ಬೇಕಾದ ಸ್ಪೋಟಕ ಸಾಮಗ್ರಿಗಳು, ಅರೆಬರೆ ಸುಟ್ಟಿರುವ ರಾಷ್ಟ್ರಧ್ವಜ, ಪ್ರಮುಖ ದಾಸ್ತಾವೇಜು ಮತ್ತು ದಾಖಲಾತಿಗಳು, ಆರೋಪಿ ಶಾರೀಕ್ ಬಳಸುತ್ತಿದ್ದ ಮಾರುತಿ ರಿಡ್ಜ್ ಕಾರನ್ನು ಜಪ್ತಿ ಮಾಡಲಾಗಿದೆ.
ಮೆಸೆಂಜರ್ ಆ್ಯಪ್ ಮೂಲಕ ಸಂಪರ್ಕ:ಯಾಸಿನ್ ಮತ್ತು ಮಾಜ್ ಪಿಯುಸಿ ಓದುವಾಗ ಪರಿಚಿತರಾಗಿದ್ದರು. ಮಾಜ್ ಮೂಲಕ ಯಾಸಿನ್​ಗೆ ಶಾರೀಖ್ ಪರಿಚಯವಾಗಿತ್ತು. ಯಾಸಿನ್ ಇಬ್ಬರನ್ನು ಭೇಟಿಯಾದಾಗ ಮುಸ್ಲಿಂ ಮೂಲಭೂತವಾದದ ಬಗ್ಗೆ ಮಾತನಾಡುತ್ತಿದ್ದರು. ಯಾಸಿನ್ ಮೊಬೈಲ್​ಗೆ ಮುಸ್ಲಿಂ ಉಗ್ರವಾದಿಗಳಿಗೆ ಸಂಬಂಧಿಸಿದ ಮತ್ತು ಇಸ್ಲಾಂಗೆ ಸಂಬಂಧಿಸಿದ ಪಿಡಿಎಫ್ ಫೈಲ್, ವಿಡಿಯೋ, ಆಡಿಯೋಗಳು, ಅವುಗಳ ಲಿಂಕ್​ಗಳನ್ನು ಟೆಲಿಗ್ರಾಂ, ಇನ್​ಸ್ಟಾಗ್ರಾಂ, ವೈರ್, ಎಲಿಮೆಂಟ್, ವಿಕ್ಕರ್ ಮತ್ತಿತರರ ಮೆಸೆಂಜರ್​ಗಳ ಆಪ್ ಮೂಲಕ ಕಳುಹಿಸಿದ್ದರು. ಆರೋಪಿಗಳು ಸಂಪರ್ಕಕ್ಕೆ ಮೊಬೈಲ್ ಮತ್ತು ವಾಟ್ಸ್​ಆಪ್ ಬದಲಿಗೆ ಮೆಸೆಂಜರ್ ಆಪ್​ಗಳಲ್ಲಿ ಸಂರ್ಪಸುತ್ತಿದ್ದರು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಯಾಸಿನ್ ಎಲೆಕ್ಟ್ರಿಕಲ್ ಇಂಜಿನಿಯರ್, ಮಾಜ್ ಮೆಕಾನಿಕಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದರೆ ಶಾರೀಕ್ ಬಿಕಾಂ ಅರ್ಧಕ್ಕೆ ಬಿಟ್ಟಿದ್ದಾನೆ. ಮಾಜ್ ಜೊಮೋಟೋದಲ್ಲಿ ಕೆಲಸ ಮಾಡಿಕೊಂಡಿದ್ದ. ಶಾರೀಕ್ ಸ್ವಂತದೊಂದು ಬಟ್ಟೆ ಅಂಗಡಿ ಹೊಂದಿದ್ದಾನೆ. ಯಾಸಿನ್ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ಎಸ್ಪಿ ಹೇಳಿದರು.
ಕಾಫಿರರ ಮೇಲೆ ಜಿಹಾದ್​ಗೆ ಸಿದ್ಧತೆ:ಐಸಿಸ್​ನ ಭಯೋತ್ಪಾದನೆ ಕೃತ್ಯಗಳನ್ನು ಮುಂದುವರಿಸಲು ಆರೋಪಿಗಳು ಯೋಜಿಸಿದ್ದರು. ಹಾಲಿ ವ್ಯವಸ್ಥೆ ವಿರುದ್ಧ ಯುದ್ಧ ಸಾರಿ ಖಿಲಾಫತ್ ಸ್ಥಾಪಿಸುವುದು ಮತ್ತು ಷರಿಯಾ ಕಾನೂನು ಜಾರಿಗೊಳಿಸುವ ವಿಚಾರಧಾರೆ ಹೊಂದಿದ್ದರು. ಅದಕ್ಕನುಗುಣವಾಗಿ ಇಸ್ಲಾಂ ಧರ್ಮವನ್ನು ಉನ್ನತಿಗೇರಿಸಲು ಕಾಫಿರ್ ವಿರುದ್ಧ ಜಿಹಾದ್ ನಡೆಸಲು ನಿರ್ಧರಿಸಿದ್ದರು. ಅದಕ್ಕಾಗಿ ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದರು. ಐಸಿಸ್​ನ ಅಧಿಕೃತ ಮಾಧ್ಯಮ ಅಲ್-ಹಯತ್​ನ ಟೆಲಿಗ್ರಾಂ ಚಾನಲ್​ನ ಸದಸ್ಯರಾಗಿದ್ದರು. ಅಲ್-ಹಯತ್​ನಿಂದ ಐಸಿಸ್​ನ ಬಹಳಷ್ಟು ಪ್ರಚಾರಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಆರೋಪಿಗಳು ಸ್ವೀಕರಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಶಿವಮೊಗ್ಗ ಹಾಗೂ ಕರಾವಳಿ ಭಾಗದಲ್ಲಿ ಉಗ್ರರ ಸಂಚು ಪತ್ತೆಯಾಗಿದೆ. ಇದನ್ನು ಈ ಮೊದಲೇ ಮಟ್ಟಹಾಕಬೇಕಿತ್ತು. ಕೇಂದ್ರ, ರಾಜ್ಯ ಸರ್ಕಾರಗಳು ಬಂಧಿಸಿದವರನ್ನು ತೀವ್ರ ವಿಚಾರಣೆ ನಡೆಸಿ, ಇದರ ಮೂಲವನ್ನು ಬೇರು ಸಹಿತ ಕಿತ್ತೊ ಗೆಯಬೇಕು.
|ವಿಶ್ವಪ್ರಸನ್ನ ತೀರ್ಥರುಪೇಜಾವರ ಮಠ
ಶಿವಮೊಗ್ಗ ಸ್ಲೀಪರ್ ಸೆಲ್ ಅಲ್ಲ, ಆದರೆ ಆ ಲಕ್ಷಣಗಳು ಮಾತ್ರ ಕಂಡುಬರುತ್ತಿವೆ. ಆರೋಪಿಗಳಿಗೆ ಪಾಕಿಸ್ತಾನದ ಸಂಪರ್ಕ ಇಲ್ಲ. ಬೆಂಗಳೂರು, ಬಾಂಬೆ, ಗೋವಾಕ್ಕೂ ತೆರಳಿದ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರಾಯೋಗಿಕ ಬಾಂಬ್ ಸ್ಫೋಟ ಮೂರು ಅಡಿ ವ್ಯಾಪ್ತಿಯೊಳಗಿದೆ. ಆರೋಪಿಗಳು ಪಿಎಫ್​ಐ, ಎಸ್​ಡಿಪಿಐ ಮತ್ತು ಐಸಿಸ್ ಜತೆ ನೇರ ಸಂಪರ್ಕ ಹೊಂದಿಲ್ಲ. ಎರಡು ವರ್ಷದಿಂದ ಭಯೋತ್ಪಾದನೆ ಕೃತ್ಯದಲ್ಲಿ ಸಕ್ರೀಯವಾಗಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
|ಬಿ.ಎಂ.ಲಕ್ಷ್ಮಿಪ್ರಸಾದ್ಶಿವಮೊಗ್ಗ ಎಸ್ಪಿ
ಅಮೇಜಾನ್​ನಲ್ಲಿ ಟೈಮರ್, ರಿಲೇ ಸರ್ಕಿಟ್ ಖರೀದಿ:ಶಾರೀಕ್ ಹಂಚಿಕೊಂಡ ಪಿಡಿಎಫ್ ಫೈಲ್ ಮತ್ತು ವಿಡಿಯೋ ಮೂಲಕ ಬಾಂಬ್ ತಯಾರಿಸುವ ವಿಧಾನವನ್ನು ಆರೋಪಿಗಳು ತಿಳಿದುಕೊಂಡಿದ್ದರು. ಬಾಂಬ್ ತಯಾರಿಕೆಗೆ ಅಗತ್ಯವಾದ ಟೈಮರ್ ಮತ್ತು ರಿಲೇ ರ್ಸಟ್ ಅನ್ನು ಆರೋಪಿ ಯಾಸಿನ್ ಅಮೇಜಾನ್​ನಿಂದ ಖರೀದಿಸಿದ್ದ. ಶಿವಮೊಗ್ಗದಲ್ಲಿ 9 ವೋಲ್ಟ್​ನ ಎರಡು ಬ್ಯಾಟರಿಗಳು, ಸ್ವಿಚ್, ವಯರ್​ಗಳು, ಮ್ಯಾಚ್ ಬಾಕ್ಸ್ ಹಾಗೂ ಇನ್ನಿತರ ಸ್ಪೋಟಕ ವಸ್ತುಗಳನ್ನು ಖರೀದಿಸಿ ಬಾಂಬ್ ತಯಾರಿಸಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಶಂಕಿತ ಉಗ್ರ ಮಾಜ್ ತಂದೆಗೆ ಹೃದಯಾಘಾತ:ಶಂಕಿತ ಉಗ್ರ ಮಾಜ್ ಮುನೀರ್ ಅಹಮದ್ ತಂದೆ ಮುನೀರ್ ಅಹಮದ್(57) ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮಗ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ವಿಷಯ ತಿಳಿದಾಗಿನಿಂದ ಮಾನಸಿಕವಾಗಿ ನೊಂದಿದ್ದ ಅವರು, ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತರಾದರು ಎಂದು ಸಮೀಪವರ್ತಿಗಳು ತಿಳಿಸಿದ್ದಾರೆ.
ಕೊಯಮತ್ತೂರು:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ (ಪಿಎಫ್​ಐ) ಸೇರಿದ ಸ್ಥಳಗಳ ಮೇಲೆ ಗುರುವಾರ ನಡೆದ ದಾಳಿ ಮತ್ತು ಹಲವು ಮುಖಂಡರ ಬಂಧನಕ್ಕೆ ಪ್ರತೀಕಾರ ವಾಗಿ ತಮಿಳುನಾಡು, ಕೇರಳದಲ್ಲಿ ಶುಕ್ರವಾರ ನಡೆದಿವೆ.
ಕೊಯಮತ್ತೂರಿನ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಇದು ಭಯೋತ್ಪಾದನಾ ದಾಳಿ ಎಂದಿದ್ದಾರೆ. ಪಿಎಫ್​ಐನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಎ.ಎಸ್.ಇಸ್ಮಾಯಿಲ್​ರನ್ನು ಕೊಯಮತ್ತೂರಿನಲ್ಲಿ ವಶಕ್ಕೆ ಪಡೆಯಲಾಗಿದೆ.
ಪಿಎಫ್​ಐ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್:ಢೀರ್ ಪ್ರತಿಭಟನೆ ನಡೆಸಿದ ಪಿಎಫ್​ಐ ವಿರುದ್ಧ ಕೇರಳ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿಕೊಂಡಿದೆ. ಪ್ರತಿಭಟನೆ ನಡೆಸದಂತೆ ಸೂಚಿಸಿದ್ದರೂ ಪಿಎಫ್​ಐ ಹರತಾಳ ಮಾಡಿದೆ. ಕೋರ್ಟ್ ಆದೇಶಗಳನ್ನು ಪಾಲಿಸದೆ ಅಗೌರವ ತೋರಲಾಗಿದೆ ಎಂದು ದ್ವಿಸದಸ್ಯ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ರಿಜಿಸ್ಟ್ರಾರ್​ಗೆ ಸೂಚಿಸಿದೆ.
ರದ್ದಾಗಿದ್ದ ಕೇಸ್ ಮರು ಪರಿಶೀಲನೆ:ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಎಸ್​ಡಿಪಿಐ ಹಾಗೂ ಪಿಎಫ್​ಐ ಸಂಘಟನೆಗಳ ಸದಸ್ಯರ ವಿರುದ್ಧದ ಕ್ರಿಮಿನಲ್ ಕೇಸ್​ಗಳನ್ನು ಕೈಬಿಟ್ಟಿದ್ದು, ಅವುಗಳನ್ನು ಮರು ಪರಿಶೀಲಿಸಿ, ಕಾನೂನು ರೀತ್ಯ ಕ್ರಮಕೈಗೊಳ್ಳಬೇಕೆಂದು ಪರಿಷತ್​ನಲ್ಲಿ ಬಿಜೆಪಿಯ ಎಂ.ಪಿ.ಮುನಿರಾಜುಗೌಡ ಕೋರಿದರು. ಶೂನ್ಯವೇಳೆ ವಿಷಯ ಪ್ರಸ್ತಾಪಿಸಿ, ಶಂಕಿತ ಉಗ್ರರ ಬಂಧನದ ಜಾಡು ಹಿಡಿದು ಎನ್​ಐಎ ದಾಳಿ ನಡೆಸಿದೆ. ಹಿಂದಿನ ಸರ್ಕಾರ ಕೈಬಿಟ್ಟ ಕೇಸ್​ಗಳು ಮರು ತಪಾಸಣೆ ಅಗತ್ಯವಿದೆ ಎಂದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಹಿತಿ ಪಡೆದು ಸವಿವರ ವರದಿ ನೀಡುವುದಾಗಿ ಭರವಸೆಯಿತ್ತರು.
ನಾಲ್ವರಿಗೆ ಮುಂದುವರಿದ ಶೋಧ:ದಾಳಿ ವೇಳೆ ಪೊಲೀಸರ ಕೈಗೆ ಸಿಗದ ಎಸ್​ಡಿಪಿಐ ವಲಯ ಕಾರ್ಯದರ್ಶಿ ಬಜಪೆಯ ಮಹಮ್ಮದ್ ಶರೀಫ್, ಪಿಎಫ್​ಐ ರಾಜ್ಯ ಕಾರ್ಯದರ್ಶಿ, ಉಪ್ಪಿನಂಗಡಿಯ ಅಯೂಬ್ ಅಗ್ನಾಡಿ, ಪಿಎಫ್​ಐ ಮುಖಂಡ, ಮಂಗಳೂರು ಕಂಕನಾಡಿಯ ಮಹಮ್ಮದ್ ಅಶ್ರಫ್ ಹಾಗೂ ಬಂದರು ನಿವಾಸಿ ಅಬ್ದುಲ್ ರಜಾಕ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕಾಂಗ್ರೆಸಿಗರಿಗೆ ಕಾನೂನು ಸಂಕಷ್ಟ?; ಪೇಸಿಎಂ ಪೋಸ್ಟರ್​ನಲ್ಲಿ ಫೋಟೋ, ಕೋರ್ಟ್​ ಮೆಟ್ಟಿಲೇರಲಿರುವ ನಟ..

ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ; ಪ್ರತಿ ಯುನಿಟ್​ಗೆ ಎಷ್ಟು ಹೆಚ್ಚಳ?; ಇಲ್ಲಿದೆ ಮಾಹಿತಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 1 =
Remember me
