ಬೆಂಗಳೂರು:ಐಎಂಎ ಕಂಪನಿ ಮಾಲೀಕ ಮಹಮದ್ ಮನ್ಸೂರ್ ಖಾನ್ ವಂಚನೆ ವ್ಯವಹಾರಕ್ಕೆ ಮೌಲ್ವಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಬೆನ್ನೆಲುಬಾಗಿದ್ದರು ಎಂಬ ವಿಚಾರ ಸಿಬಿಐ ತನಿಖೆಯಲ್ಲಿ ಬಯಲಾಗಿದೆ. ಪ್ರಾಥಮಿಕ ಹಂತದ ದೋಷಾರೋಪ ಪಟ್ಟಿದಲ್ಲಿ ಧಾರ್ವಿುಕ ಗುರುಗಳ ಹೆಸರು ಉಲ್ಲೇಖಿಸಿರುವ ಸಿಬಿಐ, ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳ ವಿರುದ್ಧವೂ ಆರೋಪಪಟ್ಟಿ ಸಿದ್ಧಪಡಿಸುತ್ತಿದೆ.
2006ರಲ್ಲಿ ಕಂಪನಿ ಸ್ಥಾಪಿಸಿದ ಮನ್ಸೂರ್, ಶೇ.8-10 ಲಾಭಾಂಶದ ಆಮಿಷವೊಡ್ಡಿ ಬಲೆಬೀಸಿದ್ದ. ಮತ್ತೊಂದೆಡೆ ಮೌಲ್ವಿಗಳಿಗೆ ಉಡುಗೊರೆ ಕೊಟ್ಟು ಬುಟ್ಟಿಗೆ ಬೀಳಿಸಿಕೊಂಡಿದ್ದ. ಪ್ರಾರ್ಥನೆಗಾಗಿ ಮಸೀದಿಗೆ ಬರುತ್ತಿದ್ದವರಿಗೆ ಮೌಲ್ವಿಗಳು ‘ಇಸ್ಲಾಂ ಧರ್ವಿುಯರು ಹಣವನ್ನು ಬೇರೆ ಬ್ಯಾಂಕಿನಲ್ಲಿ ಠೇವಣಿ ಇಡುವುದು, ಬಡ್ಡಿ ಪಡೆಯುವುದು ಧರ್ಮಕ್ಕೆ ವಿರುದ್ಧ. ನಮ್ಮದೇ ಧರ್ಮದ ಐಎಂಎ ಕಂಪನಿಯಲ್ಲಿ ಹೂಡಿಕೆ ಮಾಡಿ. ನಮ್ಮ ಧರ್ವಿುಯರಿಗೆ ಅನುಕೂಲವಾಗಲಿದೆ’ ಎಂದು ಪ್ರಚಾರ ಮಾಡಿದರು. ಈ ಮಾತು ನಂಬಿದ ಸಾವಿರಾರು ಮಂದಿ ಹಣ ಹೂಡಿಕೆ ಮಾಡಿದ್ದಾರೆ.
ಸರಾಗವಾಗಿ ಹೂಡಿಕೆ ಆಗುತ್ತಿದ್ದ ಹಣದಲ್ಲೇ ಬೇರೆಯವರಿಗೆ ಮನ್ಸೂರ್ ಲಾಭಾಂಶ ಕೊಡುತ್ತಿದ್ದ. 2019ರ ಮಾರ್ಚ್​ವರೆಗೂ ಹೂಡಿಕೆದಾರರಿಗೆ ಲಾಭಾಂಶ ನೀಡಿದ್ದ. ಅಷ್ಟೊತ್ತಿಗೆ ವಿಧಾನಸಭಾ ಚುನಾವಣೆ ಎದುರಾಗಿತ್ತು. ಆರ್​ಬಿಐ ಮತ್ತು ಇಡಿ ತನಿಖೆ
ಬಿಗಿ ಆಗುತ್ತಿತ್ತು. ಹೂಡಿಕೆದಾರರು ಅಸಲು ಕೇಳಿದಾಗ ಸಬೂಬು ಹೇಳಿ ಭೂಗತನಾಗಿದ್ದ. ಸಿಬಿಐ ಅಧಿಕಾರಿಗಳು ಮಸೀದಿಗಳಲ್ಲಿ ಐಎಂಎ ಕಂಪನಿಯಲ್ಲಿ ಹಣ ಹೂಡá-ವಂತೆ ಪ್ರಚಾರ ಮಾಡಿ ಜನರನ್ನು ದಾರಿತಪ್ಪಿಸಿದ ಆರೋಪದಡಿ ಶಿವಾಜಿನಗರ ಒಪಿಎಚ್ ರಸ್ತೆ ಬೇಸಾರಿಯನ್ ಮಸೀದಿ ಮೌಲ್ವಿ ಅಫ್ಸರ್ ಹನೀಫ್​ರನ್ನು ಬಂಧಿಸಿದ್ದಾರೆ. ಇವರು ಎಚ್​ಬಿಆರ್ ಲೇಔಟ್​ನಲ್ಲಿ 3 ಕೋಟಿ ರೂ. ಮೌಲ್ಯದ ಮನೆಯನ್ನು ಮನ್ಸೂರ್​ನಿಂದ ಉಡುಗೊರೆ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮನ್ಸೂರ್​ಗೆ ಅಧಿಕಾರಿಗಳ ಶ್ರೀರಕ್ಷೆ:ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳು ಐಎಂಎ ವಿರುದ್ಧ ಶಿಸ್ತು ಕ್ರಮ ಜರá-ಗಿಸá-ವ ಬದಲು ರಕ್ಷಣೆ ನೀಡಿ ಮತ್ತಷ್ಟು ವಂಚನೆಗೆ ಅವಕಾಶ ಮಾಡಿಕೊಟ್ಟಿರುವ ಅಂಶವೂ ತನಿಖೆ ವೇಳೆ ಬಯಲಾಗಿದೆ. ಐಎಂಎ ಹಣಕಾಸಿನ ವಹಿವಾಟು ಗಮನಿಸಿದ ಆರ್​ಬಿಐ 2016ರ ಆ.12ರಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತನಿಖೆಗೆ ಸೂಚಿಸಿತ್ತು. ಸರ್ಕಾರ ಅಂದಿನ ಪೂರ್ವ ವಿಭಾಗ ಡಿಸಿಪಿ ಅಜಯ್ ಹಿಲೋರಿಗೆ ತನಿಖೆ ಜವಾಬ್ದಾರಿ ವಹಿಸಲಾಗಿತ್ತು. ಕಮರ್ಷಿಯಲ್ ಸ್ಟ್ರೀಟ್ ಇನ್​ಸ್ಪೆಕ್ಟರ್ ರಮೇಶ್, ಐಎಂಎ ವಿರುದ್ಧ ತನಿಖೆ ನಡೆಸದೆ, ಕಾನೂನು ರೀತಿ ವ್ಯವಹಾರ ನಡೆಸುತ್ತಿದೆ ಎಂದು ವರದಿ ನೀಡಿದ್ದರು. ಅದಕ್ಕೆ ಡಿಸಿಪಿ ಸಹ ಒಪ್ಪಿದ್ದರು. ಠೇವಣಿದಾರರು ದೂರು ನೀಡದ ಕಾರಣ ಕೆಪಿಐಡಿ ಕಾಯ್ದೆಯಡಿ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು 2016ರ ಆ.29 ರಂದು ಪ್ರಕರಣ ಕೈಬಿಡಲಾಗಿತ್ತು. ಮತ್ತೆ ಕೆಪಿಐಡಿ ಕಾಯ್ದೆಯಡಿ ಬೆಂ. ದಕ್ಷಿಣ ಉಪವಿಭಾಗಾಧಿಕಾರಿ ತನಿಖೆಗೆ ಸೂಚಿಸಲಾಗಿತ್ತು. ಅಂದಿನ ಎಸಿ ಎಲ್.ಸಿ. ನಾಗರಾಜು, ತನಿಖೆ ನೆಪದಲ್ಲಿ ಕ್ಲೀನ್​ಚೀಟ್ ನೀಡಿದ್ದರು. ಇದೀಗ ಐಜಿಪಿ ಹೇಮಂತ್ ನಿಂಬಾಳ್ಕರ್, ಎಸ್​ಪಿ ಅಜಯ್ ಹಿಲೋರಿ, ಡಿವೈಎಸ್​ಪಿ ಇ.ಬಿ. ಶ್ರೀಧರ್, ಇನ್​ಸ್ಪೆಕ್ಟರ್ ಎಂ. ರಮೇಶ್, ಪಿಎಸ್​ಐ ಗೌರಿಶಂಕರ್ ಮತ್ತು ಕೆಎಎಸ್ ಅಧಿಕಾರಿ ಎಲ್.ಸಿ. ನಾಗರಾಜು ವಿರುದ್ಧ ಸಿಬಿಐ ಎಫ್​ಐಆರ್ ದಾಖಲಿಸಿ ತನಿಖೆ ಮುಂದುವರಿಸಿದೆ.
13 ಕಂಪನಿ ಹೆಸರಿನಲ್ಲಿ ಹೂಡಿಕೆ
ಹೂಡಿಕೆ ಹಣ ಹೆಚ್ಚಾದಂತೆ ಆದಾಯ, ಇಡಿ ಅಧಿಕಾರಿಗಳ ಗಮನ ಬೇರೆಡೆ ಸೆಳೆಯಲು ಮನ್ಸೂರ್, ಐಎಂಎ ಜಲವೆಲರ್ಸ್, ಐಎಂಎ ಡೈಮಂಡ್, ಐಎಂಎಐಪಿ ಬುಲೆಯನ್ಸ್ ಆಂಡ್ ಟ್ರೇಡಿಂಗ್, ಐಎಂಎ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಪ್ರೖೆ.ಲಿ., ಐಎಂಎ ಇನ್ಪಾ ›ಸ್ಟ್ರಕ್ಚರ್ ಆಂಡ್ ಡೆವಲಪರ್ಸ್, ಐಎಂ ಅಡ್ವೆಸರಿ ಪ್ರೖೆ.ಲಿ.ಮಿ., ಮಲ್ಬಾರಿ ಗ್ರೀಸ್, ಐಎಂಎ ಪಬ್ಲಿಷರ್ ಪ್ರೖೆ.ಲಿ., ಐಎಂಎ ಅಕಾಡೆಮಿ, ಫ್ರೆಂಟ್​ಲೈನ್ ಮಲ್ಟಿಸ್ಪೆಷಾಲಿಟಿ ಹಾಸ್ಪೆಟಲಿಟಿ, ಫ್ರೆಂಟ್​ಲೈನ್ ಫಾಮ್ರ್, ಮಾಲ್ ಆಫ್ ಐಎಂ, ರಾಯನ್ ಫರ್​ಫೀಮ್ ಎಂಬ 13 ಕಂಪನಿ ಸ್ಥಾಪಿಸಿದ್ದ.
ಜಾಮೀನಿಗೆ ಮನ್ಸೂರ್ ಅರ್ಜಿ
ಮಹಮದ್ ಮನ್ಸೂರ್ ಖಾನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಮಾ.3ಕ್ಕೆ ಪ್ರಕರಣ ಮುಂದೂಡಲಾಗಿದೆ. ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮನ್ಸೂರ್ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದು, ಸಿಬಿಐ ಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಸಿದ್ದ. ಮನ್ಸೂರ್ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಈ ಆಧಾರದ ಮೇಲೆ ಜಾಮೀನು ಪಡೆಯಲು ಮುಂದಾಗಿದ್ದಾನೆ. ಈಗಾಗಲೇ ಐಎಂಎ ಕಂಪನಿಯ ಕೆಲ ನಿರ್ದೇಶಕರು ಜಾಮೀನು ಪಡೆದು ಹೊರ ಬಂದಿದ್ದು, ಮನ್ಸೂರ್ ಕೂಡ ಜೈಲಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದಾನೆ.
| ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
