ಹುಬ್ಬಳ್ಳಿ:ಮನೆ, ನಿವೇಶನ ಖರೀದಿಸಲಿಚ್ಛಿಸುವ ಎಲ್ಲ ವರ್ಗದ ಜನರಿಗೆ ಸೂಕ್ತ ಮಾರ್ಗದರ್ಶಿಯಾದ, ಕನ್ನಡದ ನಂ. 1 ದಿನ ಪತ್ರಿಕೆ ‘ವಿಜಯವಾಣಿ’ ಯಿಂದ ಆಯೋಜಿಸ್ಪಲ್ಪಡುವ ಪ್ರಾಪರ್ಟಿ ಎಕ್ಸ್​ಪೋ ಮತ್ತೆ ಬಂದಿದೆ. ಈ ಬಾರಿ ಇನ್ನಷ್ಟು ಹೊಸತನದಿಂದ ಕೂಡಿದೆ.
ಇದು ಉತ್ತರ ಕರ್ನಾಟಕದ ಅತಿ ದೊಡ್ಡ ಪ್ರಾಪರ್ಟಿ ಎಕ್ಸ್​ಪೋ-ರಿಯಲ್ ಎಸ್ಟೇಟ್ ಹಾಗೂ ಇಂಟೀರಿಯರ್ ವಸ್ತುಗಳ ಪ್ರದರ್ಶನವಾಗಿದ್ದು, ಮೇ 3, 4 ಮತ್ತು 5ರಂದು ಹೊಸೂರು ವಿದ್ಯಾನಗರದ ರಾಯ್ಕರ್ ಮೈದಾನದಲ್ಲಿ ನಡೆಯಲಿದೆ.
‘ವಿಜಯವಾಣಿ’ 2012ರಲ್ಲಿ ಆರಂಭವಾ ದಾಗಿನಿಂದ ಪ್ರಾಪರ್ಟಿ ಎಕ್ಸ್​ಪೋ ಆಯೋಜನೆ ಮಾಡುತ್ತ ಬಂದಿದೆ. ಹಾಗಾಗಿ ಇದು ಮನೆ, ನಿವೇಶನ ಕೊಳ್ಳುವವರಿಗೆ ಹಾಗೂ ಮಾರಾಟ ಮಾಡುವವರಿಗೆ ಸೂಕ್ತ ವೇದಿಕೆಯಾಗಿ ಜನಜನಿತವಾಗಿದೆ. ಹುಬ್ಬಳ್ಳಿ-ಧಾರವಾಡ ಸೇರಿ ಉತ್ತರ ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಬೂಮ್ಲ್ಲಿರುವ ಕಾಲದಲ್ಲಿ ಇದೊಂದು ಬಹು ನಿರೀಕ್ಷಿತ ಪ್ರಾಪರ್ಟಿ ಎಕ್ಸ್​ಪೋ ಎಂದು ಪರಿಗಣಿಸಲ್ಪಟ್ಟಿದೆ.
ವಾಣಿಜ್ಯನಗರಿ ಹುಬ್ಬಳ್ಳಿ ಉತ್ತರ ಕರ್ನಾಟಕದ ಹೆಬ್ಬಾಗಿಲು. ಬೆಂಗಳೂರು ಬಳಿಕ ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಹುಬ್ಬಳ್ಳಿ-ಧಾರವಾಡ. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹು-ಧಾ ಅವಳಿ ನಗರಕ್ಕೆ ಕಾಲಿಡುತ್ತಿವೆ. ಐಟಿ ದಿಗ್ಗಜ ಕಂಪನಿ ಇನ್ಪೋಸಿಸ್ ಈಗಾಗಲೇ ಕಾರ್ಯಾಚರಣೆ ಶುರು ಮಾಡಿದೆ. ಐಐಟಿ, ಐಐಐಟಿಯಂಥ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಿಂದ ಶಿಕ್ಷಣ ಕ್ಷೇತ್ರದಲ್ಲೂ ಉತ್ತುಂಗ ಸ್ಥಾನದಲ್ಲಿದೆ. ರೈಲು, ವಿಮಾನಯಾನ ಸಂಪರ್ಕಗಳು, ಮೂಲ ಸೌಕರ್ಯಗಳು ಸಾಕಷ್ಟು ಸುಧಾರಿಸಿವೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮ ಸುಗ್ಗಿಯ ಕಾಲದಲ್ಲಿದ್ದು, ಇಲ್ಲಿ ಪ್ರಾಪರ್ಟಿ ಹೊಂದುವುದಕ್ಕೆ ಇದುವೇ ಸಕಾಲವಾಗಿದೆ. ಹಾಗಾಗಿ ಪ್ರಾಪರ್ಟಿ ಎಕ್ಸ್ ಪೋ-2024 ಜನರು ತಪ್ಪದೆ ಭೇಟಿ ನೀಡುವುದಕ್ಕೆ ಸೂಕ್ತ ಸಮಯವಾಗಿದೆ.
ತಮ್ಮ ಬಜೆಟ್​ಗೆ ಹೊಂದುವ ಕನಸಿನ ಮನೆ, ಸೈಟ್, ಹೈ ರೈಜ್ ಬಿಲ್ಡಿಂಗ್​ಗಳಲ್ಲಿ ಫ್ಲ್ಯಾಟ್, ಅಪಾರ್ಟಮೆಂಟ್​ಗಳಲ್ಲಿ ಮನೆ, ವಿಲ್ಲಾ, ವಾಣಿಜ್ಯ ಮಳಿಗೆಗಳನ್ನು ಖರೀದಿಸಲು ಇಚ್ಛಿಸುವವರಿಗೆ ಪ್ರಾಪರ್ಟಿ ಎಕ್ಸ್​ಪೋದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಈ ವಿಷಯದಲ್ಲಿ ನಿರಾಸೆ ಎದುರಾಗದು ಎಂಬುದು ಇಲ್ಲಿಯವರೆಗಿನ ಪ್ರಾಪರ್ಟಿ ಎಕ್ಸ್​ಪೋದ ನಂಬಿಕೆ. ಸಾಮಾನ್ಯವಾಗಿ ಜನರು ಬಿಲ್ಡರ್​ಗಳು, ಡೆವಲಪರ್​ಗಳ ಕಚೇರಿಗಳನ್ನು ಹುಡುಕಿಕೊಂಡು ಹೋಗುವ ಬದಲು ಒಂದೇ ಸೂರಿನಡಿ ಮನೆ, ನಿವೇಶನಗಳನ್ನು ಖರೀದಿಸಲು ಅಗತ್ಯ ಮಾಹಿತಿಗಳು ಸಿಗಲಿವೆ. ಈ ಹಿಂದೆ ಬಹಳಷ್ಟು ಜನರು ಇಲ್ಲಿಯೇ ಗಟ್ಟಿ ನಿರ್ಧಾರ ಕೈಗೊಂಡು ಇಂದು ಸ್ವಂತ ಮನೆ, ನಿವೇಶನಗಳ ಮಾಲೀಕರಾಗಿದ್ದಾರೆ.
200ಕ್ಕೂ ಹೆಚ್ಚು ಪ್ರಾಜೆಕ್ಟ್​ಗಳು: ಈ ಬಾರಿ ಪ್ರಾಪರ್ಟಿ ಎಕ್ಸ್​ಪೋದಲ್ಲಿ 40ಕ್ಕೂ ಹೆಚ್ಚು ಬಿಲ್ಡರ್ಸ್ ಮತ್ತು ಡೆವಲಪರ್ಸ್ ಭಾಗವಹಿಸಲಿದ್ದು, 200ಕ್ಕೂ ಹೆಚ್ಚು ಅನುಮೋದಿತ ಪ್ರಾಜೆಕ್ಟ್​ಗಳನ್ನು ಪ್ರದರ್ಶನ ಮಾಡುವರು. ನಿರ್ಮಾಣ ಕ್ಷೇತ್ರದ ಕಂಪನಿಗಳು, ಲ್ಯಾಂಡ್ ಡೆವಲಪರ್​ಗಳು, ಪ್ರೀಮಿಯಂ ವಿಲ್ಲಾಗಳು, ಅಪಾರ್ಟ್​ವೆುಂಟ್​ಗಳು, ಹಣಕಾಸು ಸಂಸ್ಥೆಗಳು, ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳು ಹಾಗೂ ಇಂಟೀರಿಯರ್ ಡಿಸೈನರ್​ಗಳು ಪಾಲ್ಗೊಳ್ಳುವರು. ಗ್ರಾಹಕರಿಗೆ ಆಯ್ಕೆಗೆ ಬಹು ಅವಕಾಶಗಳಿವೆ.
ಸರ್ಕಾರಿ ಸಂಸ್ಥೆಗಳಾದ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಹು-ಧಾ ಮಹಾನಗರ ಪಾಲಿಕೆಯಿಂದ ಅನುಮೋದಿತ ವಸತಿ ಯೋಜನೆಗಳು ಇಲ್ಲಿ ಪ್ರದರ್ಶಿಸಲ್ಪಡಲಿವೆ. ಹಾಗಾಗಿ, ಗ್ರಾಹಕರು ಯಾವುದೇ ಹಿಂಜರಿಕೆ, ಆತಂಕ ಇಲ್ಲದೆ ನಿವೇಶನ, ಮನೆ, ವಿಲ್ಲಾಗಳನ್ನು ಖರೀದಿಸಬಹುದು. ಸಾಲ ಸೌಲಭ್ಯ ನೀಡಲು ಹಲವು ಬ್ಯಾಂಕ್​ಗಳು ಮುಂದೆ ಬಂದಿದ್ದು, ಅವುಗಳ ಮಳಿಗೆಗಳೂ ಇರಲಿವೆ.
ನಿವೇಶನ, ಮನೆ, ಫ್ಲ್ಯಾಟ್, ಡುಪ್ಲೆಕ್ಸ್ ಹೌಸ್, ವಿಲ್ಲಾ ಖರೀದಿಸುವವರಿಗೆ ಎಕ್ಸ್​ಪೋ ಸುವರ್ಣ ಅವಕಾಶವಾಗಿದೆ. ಹು-ಧಾ ಸುತ್ತಮುತ್ತಲಿನ ಅಷ್ಟೇ ಅಲ್ಲದೆ, ಬೆಂಗಳೂರಿನ ಅನೇಕ ಪ್ರಾಜೆಕ್ಟ್ ಗಳು ಇರಲಿವೆ. ಕಡಿಮೆ ಆದಾಯ, ಮಧ್ಯಮ ವರ್ಗ, ಅಧಿಕ ಆದಾಯವುಳ್ಳವರು ತಮ್ಮ ಬಜೆಟ್​ಗೆ ಅನುಗುಣವಾಗಿ ನಿವೇಶನ, ಮನೆ, ಡುಪ್ಲೆಕ್ಸ್ ಹೌಸ್, ಫಾಮ್ರ್ ಲ್ಯಾಂಡ್, ವಿಲ್ಲಾಗಳನ್ನು ಖರೀದಿಸಬಹುದು.
ರಾಯ್ಕರ್ ಮೈದಾನದಲ್ಲಿ ಮೇ 3ರಿಂದ 5ರವರೆಗೆ ನಿತ್ಯ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಪ್ರಾಪರ್ಟಿ ಎಕ್ಸ್​ಪೋ ತೆರೆದಿರಲಿದೆ. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ. ವಾಹನಗಳ ರ್ಪಾಂಗ್​ಗೂ ವಿಶಾಲವಾದ ಸ್ಥಳಾವಕಾಶವಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಡಿ ಮಳಿಗೆಗಳನ್ನು ನಿರ್ವಿುಸಲಾಗುತ್ತಿದೆ. ಮಳಿಗೆಯ ಒಳಗೆ ಬಿಸಿಲಿನ ತೀವ್ರತೆ ತಟ್ಟುವುದಿಲ್ಲ. ಆರಾಮದಾಯಕ ವಾತಾವರಣದಲ್ಲಿ ಖರೀದಿ ಪ್ರಕ್ರಿಯೆ ಮಾಡಬಹುದು.
ಸಂತೋಷ ಮೊ. 9886922116, ಶಿವಕುಮಾರ ಮೊ. 8884432382 ಸಂರ್ಪಸಲು ಕೋರಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 10 =
Remember me
