ಕೋಲಾರ:ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಲು ಹೋದ ತಹಸೀಲ್ದಾರ್ ಅವರ ಎದೆಗೆ ನಿವೃತ್ತ ಶಿಕ್ಷಕನೊಬ್ಬ ಚಾಕುವಿನಿಂದ ಇರಿದು ಅಮಾನುಷವಾಗಿ ಕೊಂದಿದ್ದಾನೆ.
ಬಂಗಾರಪೇಟೆ ತಹಸೀಲ್ದಾರ್ ಚಂದ್ರಮೌಳೇಶ್ವರ ಮೃತಪಟ್ಟವರು. ಆರೋಪಿ, ದೊಡ್ಡಕಳವಂಚಿ ಗ್ರಾಮದ ನಿವೃತ್ತ ಶಿಕ್ಷಕ ವೆಂಕಟಾಚಲಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿರಿಧಾರಾಕಾರ ಮಳೆಯಲ್ಲೂ ಪೇದೆ ಮಾಡಿದ ಕೆಲಸಕ್ಕೆ ಸಿಕ್ತು ಭರ್ಜರಿ ಮೆಚ್ಚುಗೆ!
ಸರ್ಕಾರಿ ಜಮೀನು ಒತ್ತುವರಿ ಆರೋಪ ಹಿನ್ನೆಲೆಯಲ್ಲಿ ತಹಸೀಲ್ದಾರ್ ಚಂದ್ರಮೌಳೇಶ್ವರ ಅವರು ಜಮೀನು ಸರ್ವೇ ಮಾಡಲು ಇಬ್ಬರು ಪೇದೆಗಳ ಜತೆ ಇಂದು ದೊಡ್ಡಕಳವಂಚಿ ಗ್ರಾಮಕ್ಕೆ ಹೋಗಿದ್ದರು. ಆ ವೇಳೆ ಒತ್ತುವರಿ ಆಗಿಲ್ಲ ಎಂದು ವಾಗ್ವಾದಕ್ಕಿಳಿದ ವೆಂಕಟಾಚಲಪತಿ, ಅಗತ್ಯ ದಾಖಲೆ ತಮ್ಮ ಬಳಿ ಇರುವುದಾಗಿ ಹೇಳಿದ್ದಾರೆ.
ಸೂಕ್ತ ದಾಖಲೆ ತೋರಿಸಿ ಎಂದ ತಹಸೀಲ್ದಾರ್​ ಅವರ ಕೈಗೆ ಕೆಲ ಪತ್ರಗಳನ್ನಿಟ್ಟ ವೆಂಕಟಾಚಲಪತಿ, ಜೇಬಿನಿಂದ ಚಾಕು ತೆಗೆದು ತಹಸೀಲ್ದಾರ್​ ಅವರ ಎದೆಗೆ ಹಿರಿದಿದ್ದಾನೆ. ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದುಬಿದ್ದ ಅಧಿಕಾರಿಯನ್ನು ಕೂಡಲೇ ಬಂಗಾರಪೇಟೆ ಆಸ್ಪತ್ರೆಗೆ ಕರೆತರಲಾಯಿತು. ತಹಸೀಲ್ದಾರ್ ಸ್ಥಿತಿ ಗಂಭೀರ ಆಗಿದ್ದರಿಂದ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕನಕಪುರ ಮೂಲದ ತಹಸೀಲ್ದಾರ್ ಚಂದ್ರಮೌಳೇಶ್ವರ ಅವರು ಕುಟುಂಬಸ್ಥರೊಂದಿಗೆ ಬಂಗಾರಪೇಟೆಯಲ್ಲೇ ನೆಲೆಸಿದ್ದರು.
ಕತ್ತು ಕೊಯ್ದುಕೊಂಡು ರಕ್ತದ ಮಡುವಿನಲ್ಲಿ ಒದ್ದಾಡಿದ ಪ್ರೇಮಿಗಳು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 20 =
Remember me
