ನಾಗಮಂಗಲ:ಜನಪರ ಕೆಲಸಗಳಲ್ಲಿ ದಕ್ಷಿಣ ಭಾರತದ ಮಠಗಳು ತೊಡಗಿಕೊಂಡಿವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಬಣ್ಣಿಸಿದ್ದಾರೆ.
9 ದಿನಗಳ ಆದಿಚುಂಚನಗಿರಿ ಜಾತ್ರಾ ಮಹೋತ್ಸವದಲ್ಲಿ 3ನೇ ದಿನವಾದ ಬುಧವಾರ ಆಯೋಜಿಸಿದ್ದ ದ್ವಾದಶಾಬ್ದ ಮಹಾಕುಂಭಾಭಿಷೇಕದಲ್ಲಿ ಪಾಲ್ಗೊಂಡು ಮಾತನಾಡಿದರು. ದಕ್ಷಿಣ ಭಾರತದಲ್ಲಿರುವ ಮಠ, ಮಂದಿರಗಳು ಎಲ್ಲ ವರ್ಗದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಜತೆಗೆ ಜನಪರ ಕೆಲಸಗಳನ್ನು ಮಾಡುತ್ತಿವೆ. ಆ ಮೂಲಕ ಉತ್ತರ ಭಾರತದಲ್ಲಿರುವ ಮಠಗಳಿಗಿಂತ ಶ್ರೇಷ್ಠವಾಗಿವೆ ಎಂದರು. ಎಲ್ಲ ದೋಷಗಳನ್ನು ಸ್ವೀಕರಿಸುವ ಸ್ಥಳವನ್ನು ಶ್ರೀಕ್ಷೇತ್ರವೆಂದು ಕರೆಯಲು ಸಾಧ್ಯ. ಅಧರ್ಮ, ಸಮಾಜಘಾತುಕ ಮತ್ತು ತಪ್ಪುಗಳನ್ನು ಮಾಡುವವರಿಗೆ ಮಾತ್ರ ಭಯವಿರುತ್ತದೆಯೇ ಹೊರತು ಧರ್ಮದ ಮಾರ್ಗದಲ್ಲಿ ನಡೆಯುವವರಿಗೆ ಅಲ್ಲ ಎಂದರು.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರದು ಮೇರು ವ್ಯಕ್ತಿತ್ವ. ಸಮಾಜ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದರು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ರಾಜ್ಯ ಕಂಡ ಉತ್ತಮ ಮುಖ್ಯಮಂತ್ರಿಗಳಲ್ಲಿ ಕುಮಾರಸ್ವಾಮಿಯೂ ಒಬ್ಬರು. ಅವರು ಜನರೊಂದಿಗೆ ಬೆರೆತು ಜನರ ನೋವನ್ನು ಒರೆಸುವ ಕೆಲಸ ಮಾಡಿದವರು. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಜನಪರರಾದರು ಎಂದರು. ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ದೇಶ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳನ್ನು ಬಗೆಹರಿಸಲು ಕೇವಲ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಸಾಧ್ಯವಿಲ್ಲ. ಜನರು ಕೂಡ ಪ್ರಜ್ಞಾವಂತರಾಗಬೇಕು ಎಂದರು.
ಬೆಳಗಾವಿಯ ಇಂಚಲಮಠದ ಪೀಠಾಧ್ಯಕ್ಷ ಶಿವಕುಮಾರ ಸ್ವಾಮೀಜಿ, ಹರಿದ್ವಾರದ ಶ್ರೀ ಆನಂದ ಪೀಠದ ಆಚಾರ್ಯ ಮಹಾಮಂಡಲೇಶ್ವರ ಬಾಲಕನಂದಜೀ, ದೆಹಲಿಯ ಕಾಳಿಕಾ ಮಂದಿರದ ಸುರೇಂದ್ರನಾಥ ಮಹಾರಾಜ್ ಇತರರಿದ್ದರು.
ಮಹಾಕುಂಭಾಭಿಷೇಕ:ಶ್ರೀ ಕಾಲಭೈರವೇಶ್ವರ ದೇವಾಲಯ ನಿರ್ವಣಗೊಂಡು 12 ವರ್ಷವಾದ ಹಿನ್ನೆಲೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವ ದಲ್ಲಿ ದ್ವಾದಶಾಬ್ದ ಮಹಾಕುಂಭಾಭಿಷೇಕ ನಡೆಯಿತು.
ಕಾಲ ಕೆಟ್ಟಿದೆ ಎನ್ನುವುದು ತಪ್ಪು. ನಾವು ಕೆಡುವ ಮೂಲಕ ಕಾಲವನ್ನು ಕೆಡಿಸಿದ್ದೇವೆ. ಜನರಲ್ಲಿ ಮಾನವೀಯ ಮೌಲ್ಯಗಳನ್ನು ಹೆಚ್ಚಿಸಲು, ಧರ್ಮದ ಮಾರ್ಗದಲ್ಲಿ ನಡೆಸಲು ಧಾರ್ವಿುಕ ಕ್ಷೇತ್ರಗಳಿಂದ ಮಾತ್ರ ಸಾಧ್ಯ.
| ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
