ಬೆಂಗಳೂರುನಾಸಾ ಮತ್ತು ಇಸ್ರೋ ಸಹಯೋಗದಲ್ಲಿ ಅಭಿವೃದ್ಧಿಪಡಿಸುತ್ತಿರುವ ನಿಸಾರ್ ಲೋ ಅರ್ಥ್ ಆರ್ಬಿಟ್ ವೀಕ್ಷಿಸುವುದಕ್ಕಾಗಿ ಭಾರತದ ಮೊದಲ ಗಗನಯಾತ್ರಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರೊಂದಿಗೆ ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಗುರುವಾರ (ನ.30) ಬೆಂಗಳೂರಿನ ಇಸ್ರೋ ಕಚೇರಿಗೆ ಭೇಟಿ ನೀಡಲಿದ್ದಾರೆ.ನಿಸಾರ್ ಅನ್ನು 2024ರ ಮೊದಲ ತ್ರೈಮಾಸಿಕದಲ್ಲಿ ಉಡ್ಡಯನ ಮಾಡುವ ಯೋಜನೆ ಹೊಂದಲಾಗಿದೆ. ನಿಸಾರ್ 12 ದಿನಗಳಲ್ಲಿ ಇಡೀ ಜಗತ್ತನ್ನು ನಕ್ಷೆ ಮಾಡಲಿದೆ. ಭೂಮಿಯ ಪರಿಸರ ವ್ಯವಸ್ಥೆಗಳು, ಮಂಜಗಡ್ಡೆಯ ದ್ರವ್ಯರಾಶಿ, ಸಸ್ಯವರ್ಗದ ಜೀವರಾಶಿ, ಸಮುದ್ರ ಮಟ್ಟ ಏರಿಕೆ, ಅಂತರ್ಜಲ ಮತ್ತು ಭೂಕಂಪನಗಳು, ಸುನಾಮಿ, ಜ್ವಾಲಾಮುಖಿ ಮತ್ತು ಭುಕುಸಿತಗಳು ಸೇರಿ ನೈಸರ್ಗಿಕ ಅಪಾಯಗಳಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾದೇಶಿಕವಾರು ಮತ್ತು ತಾತ್ಕಾಲಿಕ ಸ್ಥಿರವಾದ ದತ್ತಾಂಶಗಳನ್ನು ನಿಸಾರ್ ಕಳುಹಿಸಿಕೊಡಲಿದೆ ಎಂದು ನೆಲ್ಸನ್ ಮಾಹಿತಿ ನೀಡಿದರು.
ನಿಸಾರ್‌ನಲ್ಲಿ ವಿಭಿನ್ನ ಮಾದರಿಯ ಎರಡು ರಾಡಾರ್‌ಗಳಿವೆ. ಭಾರತ ಮತ್ತು ಅಮೆರಿಕ ತಲಾ ಒಂದು ರಾಡಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದನ್ನು ನೋಡಲು ನಾನು ಸಾಕಷ್ಟು ಕಾತುರನಾಗಿದ್ದೇನೆ.– ಬಿಲ್ ನೆಲ್ಸನ್, ನಾಸಾ ಆಡಳಿತಾಧಿಕಾರಿ
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 + fourteen =
Remember me
