ಹುಬ್ಬಳ್ಳಿ:ಪೊಲೀಸರಿಂದ ತಲೆಮರೆಸಿಕೊಂಡು ಊರುಬಿಟ್ಟಿದ್ದ ಕುಖ್ಯಾತ ರೌಡಿ, ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ಕೊಲೆ‌ ಪ್ರಕರಣ ಪ್ರಮುಖ ಆರೋಪಿ ಸಲೀಂ ಬಳ್ಳಾರಿ ಎಂಬಾತ ಇಲ್ಲಿನ ನೇಕಾರ ನಗರದ ಹೋಟೆಲ್​ವೊಂದರಲ್ಲಿ ಊಟಕ್ಕೆಂದು ಬಂದು ತಾನೇ ಸೃಷ್ಟಿಸಿಕೊಂಡ ಅವಾಂತರದಿಂದಾಗಿ ಸಿಕ್ಕಿಬಿದ್ದಿದ್ದಾನೆ.
ಕಂಠಪೂರ್ತಿ ಕುಡಿದಿದ್ದ ಈತ ಶುಕ್ರವಾರ ತಡ ರಾತ್ರಿ ಊಟಕ್ಕೆಂದು ಹೋಟೆಲ್ ಬಳಿ ಹೋಗಿದ್ದಾನೆ. ಲಾಕ್​ಡೌನ್​ ಹಿನ್ನೆಲೆ ಊಟ ಲಭ್ಯ ಇಲ್ಲ ಎಂದು ಮಾಲೀಕರು ತಿಳಿಸಿದರಾದರೂ ಕುಪಿತಗೊಂಡ ಸಲೀಂ ಬಳ್ಳಾರಿ, ಹೋಟೆಲ್​ಗೆ ಎಂಜಲು ಉಗಿದು ಅಸಭ್ಯವಾಗಿ ವರ್ತಿಸುತ್ತಿದ್ದ. ವಾಂತಿ ಮಾಡಿಕೊಂಡು ಕೂಗಾಡುತ್ತಿದ್ದ. ಈತನ ಹುಚ್ಚಾಟಕ್ಕೆ ಬೇಸತ್ತ ಹೋಟೆಲ್​ ಮಾಲೀಕ ಮತ್ತು ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿಹೋಟೆಲ್​ಗೆ ಕನ್ನ ಹಾಕಿದವರು ಹಸಿವನ್ನಷ್ಟೇ ತೀರಿಸಿಕೊಂಡರು…!
ಸಾರ್ವಜನಿಕ ಸ್ಥಳದಲ್ಲಿ ‌ಎಂಜಲು ಉಗಿಯುತ್ತಿದ್ದವನನ್ನು ವಶಕ್ಕೆ ಪಡೆಯಲೆಂದು ಸ್ಥಳಕ್ಕೆ ಬಂದ ಪೊಲೀಸರಿಗೆ ಆ ವ್ಯಕ್ತಿ ಸುಪಾರಿ ಕಿಲ್ಲರ್ ಸಲೀಂ ಬಳ್ಳಾರಿ ಎಂಬುದು ಗೊತ್ತಾಗುತ್ತದೆ. ಈತನ ಮೇಲೆ ಹಲವು ಪ್ರಕರಣಗಳಿದ್ದು, ಪೊಲೀಸರಿಂದ ತಲೆಮರೆಸಿಕೊಂಡು ನೇಕಾರ ನಗರದಲ್ಲಿ ಮನೆ ಮಾಡಿಕೊಂಡಿದ್ದ. ಕುಡಿದ ಅಮಲಿನಲ್ಲಿ ಊಟ, ತಿಂಡಿ ಕೊಡಿ ಎಂದು ಹೋಟೆಲ್​ಗಳ ಬಳಿ ಹೋಗಿ ಕೇಳುತ್ತಿದ್ದ. ಲಾಕ್​ಡೌನ್​ ಹಿನ್ನೆಲೆ ಈಗ ಊಟ ಲಭ್ಯವಿಲ್ಲ ಎಂದಾಗ ರೊಚ್ಚಿಗೆದ್ದು ಎಂಜಲು ಉಗಿದು ಬಯ್ಯುತ್ತಿದ್ದ. ಸ್ಥಳಕ್ಕೆ ಬಂದಿದ್ದ ಕಸಬಾಪೇಟೆ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆದೊಯ್ದರು.
ಇದನ್ನೂ ಓದಿಮಹಿಳೆ ಹೊತ್ತೊಯ್ದು ಅರೆಬರೆ ತಿಂದು ಬೀಸಾಡಿದ ಚಿರತೆ: ರುಂಡ-ಮುಂಡ ಬೇರೆ ಬೇರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
