ಬೆಂಗಳೂರು:ಕರೊನಾ ಬಗ್ಗೆ ಇಡೀ ದೇಶ ಜಾಗೃತವಾಗಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸುತ್ತಿರುವಾಗ ಒಂದು ಸಮುದಾಯ ಮಾತ್ರ ಹೆಚ್ಚು ಆಸಕ್ತಿ ತೋರಿಸದಿರುವುದರ ಹಿಂದಿನ ಕಾರಣವನ್ನು ಸರ್ಕಾರ ಇದೀಗ ಕಂಡುಕೊಂಡಿದೆ. ಯಾವುದೇ ಸರ್ಕಾರಿ ಅಧಿಕಾರಿ, ಸಿಬ್ಬಂದಿಗೂ ವೈಯಕ್ತಿಕ ಮಾಹಿತಿ ಕೊಡಬಾರದು ಎಂಬ ಸಂದೇಶ ಮುಸ್ಲಿಂ ಸಮುದಾಯದಲ್ಲಿ ಬಲವಾಗಿ ಹರಡಿದ್ದು, ಸರ್ಕಾರದ ಗಮನಕ್ಕೆ ಬಂದಿದೆ. ವಿಶೇಷವಾಗಿ ಈ ಸಮುದಾಯದವರು ಅತಿ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಯಾರಾದರೂ ಮಾಹಿತಿ ಅರಸಿ ಬಂದರೆ ತಕ್ಷಣವೇ ಎಚ್ಚರಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆಂಬ ಸಂಗತಿ ಕೂಡ ಗುರುವಾರ ಪ್ರಕರಣದಿಂದ ಬಯಲಾಗಿದೆ.
ಇದಕ್ಕೆಲ್ಲ ಕಾರಣ, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿಷಯದಲ್ಲಿನ ತಪ್ಪು ತಿಳುವಳಿಕೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳೇ ಅಭಿಪ್ರಾಯಪಡುತ್ತಾರೆ. ಕರೊನಾದಿಂದ ವಿಶ್ವದ ಪ್ರಬಲ ದೇಶಗಳಲ್ಲಿ ಸಾವಿರಾರು ಜನ ಸಾಯುತ್ತಿದ್ದರೂ ಅಲ್ಪಸಂಖ್ಯಾತ ಸಮುದಾಯ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಸಾಮೂಹಿಕ ಪ್ರಾರ್ಥನೆಯನ್ನು ಮುಂದುವರಿಸಿಕೊಂಡೇ ಬಂದಿದ್ದು, ಸರ್ಕಾರದ ಮನವಿಗಳಿಗೆ ಸೊಪ್ಪು ಹಾಕಿಲ್ಲ. ಆ ಸಮುದಾಯದ ಪ್ರಮುಖರಿಗೆ ವಿಷಯದ ಅರಿವಾಗಿದ್ದೂ ಕೆಳಹಂತಕ್ಕೆ ಅದರ ಪ್ರಾಮುಖ್ಯತೆ ತಲುಪಿಲ್ಲ.
ಕರೊನಾ ಜಾಗೃತಿಗೆ ಹೋಗುವವರಿಗೆ ಮತ್ತು ಲಾಕ್​ಡೌನ್ ಮಾಡಿಸಲು ಪೊಲೀಸರು ಅನೇಕ ಕಡೆ ಪ್ರತಿರೋಧ ಎದುರಿಸಿದ್ದಾರೆ. ಲಾಕ್​ಡೌನ್ ಸಂದರ್ಭದಲ್ಲಿ ಮನೆಯಲ್ಲಿಯೇ ಇರಬೇಕೆಂದು ಸರ್ಕಾರ ಪರಿಪರಿಯಾಗಿ ಮನವಿ ಮಾಡಿದರೂ ಪೂರ್ಣ ಸ್ಪಂದನೆ ಸಿಗದೇ ಇರುವುದಕ್ಕೂ ಇದೊಂದು ಕಾರಣ ಎನ್ನಲಾಗಿದೆ.
ಮಾಹಿತಿ ಆತಂಕ:ಪೌರತ್ವ ತಿದ್ದುಪಡಿ ವಿಧೇಯಕವನ್ನು ಕೇಂದ್ರ ಸರ್ಕಾರ ಜಾರಿ ಮಾಡಿದ ಬಳಿಕ ಕರ್ನಾಟಕವೊಂದರಲ್ಲೇ 900 ಸಂಖ್ಯೆಯಲ್ಲಿ ಚಿಕ್ಕಪುಟ್ಟ ಸಭೆಗಳು ನಡೆದಿವೆ. ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಸಹಕಾರ ನೀಡವಾರದೆಂದು ಭಾಷಣಕಾರರು ತಲೆಗೆ ತುಂಬಿ ಹೋಗಿದ್ದಾರೆ. ರಾಷ್ಟ್ರೀಯ ಗಣತಿ ನಡೆಸುವ ಘೋಷಣೆಯಾಗಿದ್ದು, ಈ ವೇಳೆ ಮಾಹಿತಿ ನೀಡಿದ್ದೇ ಆದರೆ ಅಪಾಯವಾಗಬಹುದು ಎಂದು ಒತ್ತಿ ಒತ್ತಿ ಹೇಳಿದ್ದೂ ಇದೆ. ಇನ್ನು ಕರೊನಾ ಬಗ್ಗೆ ಸರ್ಕಾರ ಹೆಚ್ಚು ಒತ್ತು ಕೊಡುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸುವುದು, ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಡದೇ ಇರುವುದೂ ಸಹ ತಮ್ಮ ಸಮುದಾಯವನ್ನು ಒಡೆಯಲು ಮಾಡಿರುವ ತಂತ್ರವೆಂದೂ ಅಪಪ್ರಚಾರವೂ ಜಾಲತಾಣದಲ್ಲಿ ವ್ಯವಸ್ಥಿತವಾಗಿ ನಡೆದಿದೆ. ಇದೆಲ್ಲ ಕಾರಣದಿಂದ ಕರೊನಾ ಜಾಗೃತಿ ಮತ್ತು ಲಾಕ್ ಡೌನ್ ಶೇ.100 ಯಶಸ್ವಿಯಾಗದಿರಲು ಕಾರಣ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಸರ್ಕಾರದ ನೌಕರ, ಅಧಿಕಾರಿಗಳು ಯಾವುದೇ ರೂಪದಲ್ಲಿ ಮಾಹಿತಿ ಸಂಗ್ರಹಿಸಲು ಮನೆಗಳಿಗೆ ಬರಬಹುದು, ಅವರನ್ನು ವಾಪಾಸು ಕಳಿಸಬೇಕೆಂದು ಪೌರತ್ವ ಸಭೆಯ ಭಾಷಣಕಾರರು ಹೇಳಿದ್ದರಿಂದಾಗಿಯೇ ಈಗ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಹಿನ್ನೆಡೆಯಾಗುತ್ತಿದೆ ಎಂಬ ವಿಶ್ಲೇಷಣೆಯೂ ಸರ್ಕಾರದ ಮಟ್ಟದಲ್ಲಿ ಕೇಳಿಬಂದಿದೆ. ಬುಧವಾರ ಬೆಂಗಳೂರಿನಲ್ಲಿ ನಡೆದ ಪ್ರಕರಣದಲ್ಲೂ ಸಹ ಆಶಾ ಕಾರ್ಯಕರ್ತೆಯರು ಕರೊನಾ ಸೋಂಕಿತರಿಗಾಗಿ ಮಾಹಿತಿ ಕಲೆ ಹಾಕುವುದನ್ನು ತಪ್ಪಾಗಿ ಅರ್ಥೈಸಿಕೊಂಡ ಆ ಸಮುದಾಯದವರು ಮಸೀದಿಯಿಂದಲೂ ಮಾಹಿತಿ ಕೊಡದಂತೆ ಫರ್ವನು ಹೊರಡಿಸಿದ್ದು ಸರ್ಕಾರದ ಗಮನಕ್ಕೆ ಬಂದಿದೆ. ಒಟ್ಟಾರೆ, ಪೌರತ್ವ ತಿದ್ದುಪಡಿ ಹೋರಾಟ ಕರೊನಾ ಜಾಗೃತಿಗೆ ಅಡ್ಡಿಯಾಗುತ್ತಿದೆ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಗೆ ನಿಂದನೆ
ಬಂಟ್ವಾಳ: ತಾಲೂಕಿನ ಕರಿಯಂಗಳ ಗ್ರಾಮದಲ್ಲಿ ಆರೋಗ್ಯ ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ನಿಂದಿಸಲಾಗಿದೆ. ಬಡಕಬೈಲು ಅಬ್ದುಲ್ ಲತೀಫ್ ಎಂಬುವರ ಅಳಿಯ ಮಹಮ್ಮದ್ ಆರಿಫ್ ಎಂಬಾತ ಮೀನು ವ್ಯಾಪಾರದ ನಿಮಿತ್ತ ಕೊಚ್ಚಿಯಲ್ಲಿದ್ದು, ಅಲ್ಲಿಂದ ಮಾವನ ಮನೆಗೆ ಬಂದಿದ್ದಾರೆ. ಈ ಬಗ್ಗೆ ಮಾಹಿತಿಗಾಗಿ ಸಹಾಯಕ ಆರೋಗ್ಯಾಧಿಕಾರಿ ಹಾಗೂ ಆಶಾ ಕಾರ್ಯಕರ್ತೆ ಸಂರ್ಪಸಿದಾಗ ಉಡಾಫೆಯಿಂದ ವರ್ತಿಸಿ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಇಬ್ಬರ ವಿರುದ್ಧ ಪ್ರಕರಣ: ಅಮ್ಟಾಡಿ ಗ್ರಾಮದ ಕಲಾಯಿಯಲ್ಲಿ ಕರ್ತವ್ಯ ನಿರತ ಆಶಾ ಕಾರ್ಯಕರ್ತೆಗೆ ಬೆದರಿಕೆಯೊಡ್ಡಿದ ಘಟನೆಗೆ ಸಂಬಂಧಿಸಿ ಮಾರಪ್ಪ ಪೂಜಾರಿ ಹಾಗೂ ಉಮೇಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಸಂಬಂಧಿ ನಿತೇಶ್ ವಿದೇಶದಿಂದ ಬಂದಿದ್ದರು. ಈ ಕುರಿತು ಆಶಾ ಕಾರ್ಯಕರ್ತೆ ವಿಚಾರಣೆ ನಡೆಸುತ್ತಿದ್ದರು. ಈ ಕಾರಣಕ್ಕೆ ಆರೋಪಿಗಳು ಕರೆ ಮಾಡಿ ಬೆದರಿಕೆಯೊಡ್ಡಿದ್ದಾರೆ.
ಪಾಲಿಸಿದಾರರಿಗೆ ಬಿಗ್‌ ರಿಲೀಫ್‌: ಪಾವತಿಯ ಅವಧಿ ಏ.21ರವರೆಗೆ ವಿಸ್ತರಣೆ

ಕರೊನಾ ವೈರಸ್​ ಅವಧಿಯಲ್ಲಿ ತುರ್ತು ಸೇವೆ ಒದಗಿಸಿದ ವಿಮಾನದ ಗಗನ ಸಖಿಯರ ದಿರಿಸು ನೋಡಿ ವಿದೇಶಿಗರು ಗೇಲಿ ಮಾಡಿದ್ದರಂತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
