| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರುರಾಜ್ಯದಲ್ಲಿ ರಸ್ತೆ ಅಪಘಾತಗಳಲ್ಲಿ ಸಾವು-ನೋವಿನ ಸಂಖ್ಯೆ ಕೊಂಚ ಇಳಿಮುಖವಾಗಿದೆ. 2023ರ ಮೊದಲ 6 ತಿಂಗಳಿಗೆ ಹೋಲಿಸಿದರೆ ಈ ವರ್ಷ ಮೊದಲ ಅರ್ಧ ವರ್ಷದಲ್ಲಿ ಸಾವಿನ ಸಂಖ್ಯೆ 430 ತಗ್ಗಿದೆ. 2023ರಲ್ಲಿ ಜನವರಿ-ಜೂನ್ ನಡುವೆ ಸಂಭವಿಸಿದ ಅಪಘಾತಗಳಲ್ಲಿ 6,370 ಮಂದಿ ಅಸುನೀಗಿದ್ದರು. 2024ರ ಮೊದಲ 6 ತಿಂಗಳಲ್ಲಿ 5,940 ಮಂದಿ ಪ್ರಾಣ ಬಿಟ್ಟಿದ್ದಾರೆ.
ಮುಂದಿನ 6 ತಿಂಗಳಲ್ಲಿ ಮಳೆಗಾಲ ಮತ್ತು ಡಿಸೆಂಬರ್​ನಲ್ಲಿ ಚಳಿಗಾಲ ಶುರುವಾಗಲಿದೆ. ಈ ವೇಳೆ ರಸ್ತೆ ಅಪಘಾತ ಏರುಮುಖವಾಗಲು ನೈಸರ್ಗಿಕ ಕಾರಣಗಳು ಹೆಚ್ಚಾಗಿರುತ್ತವೆ. ಮಳೆ ಮತ್ತು ಚಳಿ ನೆಪದಲ್ಲಿ ಚಾಲಕ, ಸವಾರರು ಮದ್ಯ ಸೇವಿಸಿ ವಾಹನ ಚಲಾಯಿಸುವುದು, ಮಳೆಯಲ್ಲಿ ಬ್ರೇಕ್ ಫೇಲ್, ರಸ್ತೆ ಹಾಳಾಗುವುದು ಇನ್ನಿತರ ಕಾರಣಗಳಿಂದ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಮುಂದಿನ 6 ತಿಂಗಳಲ್ಲಿ ಸಾವು-ನೋವಿನ ಬಗ್ಗೆ ವಿಶ್ಲೇಷಣೆ ಕಷ್ಟಸಾಧ್ಯವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಪ್ರಸ್ತುತ ಮೊದಲ ಆರು ತಿಂಗಳಲ್ಲಿ ಅಪಘಾತ ಇಳಿಮುಖವಾಗಲು ಕೆಲ ಕಟ್ಟುನಿಟ್ಟಿನ ಕ್ರಮಗಳು ಕಾರಣವಾಗಿವೆ ಎಂದು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೇ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್​ಕುಮಾರ್, ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಬ್ಲಾ್ಯಕ್ ಸ್ಪಾಟ್​ಗಳನ್ನು ಅಲ್ಪ ಅವಧಿಯಲ್ಲಿ ಅಭಿವೃದ್ಧಿಪಡಿಸಿ ಎಚ್ಚರಿಕೆ ವಹಿಸಲಾಗಿದೆ. ಬೆಳಗಾವಿ, ವಿಜಯನಗರ, ತುಮಕೂರು ಸೇರಿ ಕೆಲ ಜಿಲ್ಲಾ ಎಸ್​ಪಿಗಳು ಖುದ್ದು ಕಾರ್ಯಾಚರಣೆಗೆ ಇಳಿದು ವಾಹನ ಚಾಲಕ/ಸವಾರರಿಗೆ ಜಾಗೃತಿ ಮೂಡಿಸುವುದು ಮತ್ತು ಬ್ಲಾ್ಯಕ್ ಸ್ಪಾಟ್​ಗಳನ್ನು ಅಭಿವೃದ್ಧಿಪಡಿಸಿರುವುದು ಉತ್ತಮ ಕೆಲಸವಾಗಿದೆ. ಇದಲ್ಲದೆ, ಡ್ರಂಕ್ ಆಂಡ್ ಡ್ರೖೆವ್ ತಪಾಸಣೆಗೆ ಆಲ್ಕೋಮೀಟರ್​ಗಳು ಇರಲಿಲ್ಲ. ಇದೀಗ ರಾಜ್ಯ ವ್ಯಾಪಿ ವಿತರಿಸಲಾಗಿದೆ. ಜತೆಗೆ ಅತೀ ವೇಗದ ಚಾಲನೆ ತಪಾಸಣೆ ಸಲುವಾಗಿ ವಿಶೇಷ ಕ್ಯಾಮರಾಗಳು ಇರುವ ಯಂತ್ರಗಳನ್ನು ಕೊಡಲಾಗಿದೆ.
ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ಎಟಿಎಂಸಿ ತಂತ್ರಜ್ಞಾನ ಅಳವಡಿಸಿದ್ದು, ಶಿಸ್ತುಪಥ ಉಲ್ಲಂಘನೆ, ಅತೀ ವೇಗದ ಚಾಲನೆ ಮಾಡುವ ವಾಹನಗಳ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ. ಕಡ್ಡಾಯವಾಗಿ ಶೇ.10 ರಸ್ತೆಯಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕೇಸ್ ದಾಖಲಿಸಿ ದಂಡ ವಸೂಲಿ ಮಾಡುವ ಕ್ರಮ ಕೈಗೊಳ್ಳಬೇಕಾಗಿದೆ. ರಾಜ್ಯದಲ್ಲಿ ಕೊಂಚ ಅಪಘಾತ ಇಳಿಮುಖವಾಗಿದೆ ಎಂದು ಅಲೋಕ್​ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಸ್ತೆ ಬದಿ ನಿಂತ ವಾಹನ ತೆರವಿಗೆ ಆದ್ಯತೆ :ಹೆದ್ದಾರಿಗಳಲ್ಲಿ ರಸ್ತೆ ಬದಿ ಕೆಟ್ಟು ನಿಂತ ಅಥವಾ ಪಾರ್ಕ್ ಮಾಡಿರುವ ವಾಹನಗಳ ತೆರವಿಗೆ ಮೊದಲ ಆದ್ಯತೆ ನೀಡುವಂತೆ ಗಸ್ತು ಸಿಬ್ಬಂದಿಗೆ ಸೂಚಿಸಲಾಗಿದೆ. ಈ ಮೊದಲು ಗಣ್ಯ ವ್ಯಕ್ತಿಗಳ ಮುಂಗಾವಲು ವಾಹನಗಳಾಗಿ ಸೇವೆ ಕೊಡುವುದಕ್ಕೆ ಹೆಚ್ಚು ಸಮಯ ಕಳೆಯುತ್ತಿದ್ದರು. ಇದೀಗ ರಸ್ತೆ ಬದಿ ಕೆಟ್ಟು ನಿಂತಿರುವ ವಾಹನಗಳ ತೆರವು ಅಥವಾ ಸೂಚನಾ ಲೈಟ್ ಆನ್ ಮಾಡಿಸುವುದು. ಉಳಿದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗದಂತೆ ನೋಡಿಕೊಳ್ಳಬೇಕು. ಅದರಲ್ಲಿಯೂ ರಾತ್ರಿ ವೇಳೆ ಹೆದ್ದಾರಿಗಳಲ್ಲಿ ವಾಹನಗಳು ಕೆಟ್ಟು ನಿಂತರೇ ಹೆಚ್ಚು ಅಪಾಯ ಸಂಭವಿಸುತ್ತಿವೆ. ಆದ್ದರಿಂದ ಇಂತಹ ವಾಹನಗಳ ಮೇಲೆ ನಿಗಾ ವಹಿಸುವಂತೆ ಹೆದ್ದಾರಿ ಗಸ್ತು ವಾಹನಗಳ ಅಧಿಕಾರಿ, ಸಿಬ್ಬಂದಿಗೆ ಪೊಲೀಸ್ ಇಲಾಖೆ ಸೂಚಿಸಿದೆ.
ರಾಜ್ಯದಲ್ಲಿ ಮೊದಲ ಆರು ತಿಂಗಳಲ್ಲಿನ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. ಅಪಘಾತ ತಗ್ಗಿಸಲು ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
| ಅಲೋಕ್ ಕುಮಾರ್ , ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ, ಎಡಿಜಿಪಿ
ಕಳೆದ 3-4 ವರ್ಷಗಳಲ್ಲಿ 8 ಕೋಟಿ ಹೊಸ ಉದ್ಯೋಗ ಸೃಷ್ಟಿಯಾಗಿವೆ: ಪ್ರಧಾನಿ ಮೋದಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one + five =
Remember me
