ಮೋದಿ 3.0 ಖಚಿತ ನಿತೀಶ್​ಕುಮಾರ್, ನಾಯ್ಡು ಕಿಂಗ್​ವೆುೕಕರ್ಸ್ ಮಿತ್ರಪಕ್ಷಗಳ ಹಿಡಿದಿಡಲು ಬಿಜೆಪಿ ಸರ್ಕಸ್ | ಇಂಡಿ ಮೈತ್ರಿಕೂಟಕ್ಕೆ ನಿರೀಕ್ಷೆಗೂ ಮೀರಿ ಸಕ್ಸಸ್ ಸರ್ಕಾರ ರಚನೆಗೂ ಚಾನ್ಸ್ ಹಳೇ ಮಿತ್ರರಿಗೆ ಕಾಂಗ್ರೆಸ್ ಹೊಸ ಗಾಳ
ಪ್ರಜಾಪ್ರಭುತ್ವದ ಹಬ್ಬ ಲೋಕಸಭಾ ಚುನಾವಣೆ ಫಲಿತಾಂಶ ಮಿಶ್ರಭಾವನೆಗಳನ್ನು ಹೊರಹೊಮ್ಮಿಸಿದೆ. ಆಡಳಿತಾರೂಢ ಎನ್​ಡಿಎ ಮೈತ್ರಿಕೂಟಕ್ಕೆ ಸತತ ಮೂರನೇ ಅವಧಿಗೆ ಅಧಿಕಾರ ನಡೆಸಲು ಮತದಾರ ಬಹುಮತದ ಬೆಂಬಲ ವ್ಯಕ್ತಪಡಿಸಿದ್ದರೂ, ಬಿಜೆಪಿ ಏಕಾಂಗಿಯಾಗಿ 272 ಮ್ಯಾಜಿಕ್ ನಂಬರ್​ನಿಂದ ಹಿಂದೆ ಬಿದ್ದಿರುವುದು ಹಾಗೂ ‘ಅಬ್ ಕಿ ಬಾರ್ 400 ಪಾರ್’ ಮಹತ್ವಾಕಾಂಕ್ಷೆ ಕೈಗೆಟುಕದಿರುವುದು ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. 10 ವರ್ಷಗಳ ಅಭಿವೃದ್ಧಿ, ರಾಮಮಂದಿರ ಸಾಕಾರ, ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನ ಹೊರತಾಗಿಯೂ ಎನ್​ಡಿಎ 300ರ ಗಡಿ ದಾಟಲು ವಿಫಲವಾಗಿದ್ದು, ಬಿಹಾರದ ಸಿಎಂ ನಿತೀಶ್ ಕುಮಾರ್ ಮತ್ತು ಆಂಧ್ರದಲ್ಲಿ ಅಧಿಕಾರಕ್ಕೆ ಮರಳಿರುವ ಚಂದ್ರಬಾಬು ನಾಯ್ಡು ಕಿಂಗ್​ವೆುೕಕರ್​ಗಳಾಗಿದ್ದಾರೆ. 10 ವರ್ಷ ಬಳಿಕ ಸಂಖ್ಯಾಬಲ ಹೆಚ್ಚಿಸಿಕೊಂಡಿರುವ ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಎನ್​ಡಿಎ ಮೈತ್ರಿ ಒಡೆಯಲು ಪ್ರಯತ್ನಿಸಲಿದ್ದು, ನೂತನ ಸರ್ಕಾರ ಸ್ಥಾಪಿತವಾಗುವ ಮುನ್ನ ಇನ್ನಷ್ಟು ಹೈಡ್ರಾಮಾ ನಡೆಯುವುದು ನಿಶ್ಚಿತವಾಗಿದೆ.
1. ಸರ್ಕಾರ ರಚನೆಗೆ 272 ಮ್ಯಾಜಿಕ್ ನಂಬರ್
2. 292 ಸ್ಥಾನ ಗೆದ್ದಿರುವ ಎನ್​ಡಿಎಗಿದೆ ಬಹುಮತ
3. ಜೆಡಿಯು, ಟಿಡಿಪಿ ಹಿಡಿದಿಟ್ಟುಕೊಳ್ಳುವುದು ಅನಿವಾರ್ಯ
4. ಜೆಡಿಯು, ಟಿಡಿಪಿ ಬೆನ್ನಿಗಿದ್ದರೆ ಸರ್ಕಾರ ಸೇಫ್
5. ಎನ್​ಡಿಎ ಬಿಡಲ್ಲ ಎಂದಿರುವ ಜೆಡಿಯು, ಟಿಡಿಪಿ
1. ಸರ್ಕಾರ ರಚನೆ ಕಷ್ಟವಾದರೂ ಅಸಾಧ್ಯವೇನಲ್ಲ
2. ಇನ್ನೂ 43 ಸ್ಥಾನ ಪಡೆಯಲು ಪ್ರಯತ್ನಿಸಬಹುದು
3. ಆತ್ಮೀಯ ನಿತೀಶ್, ನಾಯ್ಡುಗೆ ಈಗಾಗಲೇ ಗಾಳ
4. ಜೆಡಿಯು, ಟಿಡಿಪಿಯಿಂದ 30 ಸ್ಥಾನ ಪಕ್ಕಾ ಲಭ್ಯ
5. ಉಳಿದ 13 ಸ್ಥಾನಕ್ಕಾಗಿ ಎನ್​ಡಿಎ ಮಿತ್ರರಿಗೆ ಗಾಳ
6. ಸಾಧ್ಯವಾಗದಿದ್ದಲ್ಲಿ ಪಕ್ಷೇತರರನ್ನು ಸೆಳೆಯುವುದು
ಸಮೀಕ್ಷೆ ಉಲ್ಟಾ:ಈ ಬಾರಿಯ ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಉಲ್ಟಾ ಆಗಿವೆ. 7ಕ್ಕೂ ಹೆಚ್ಚು ಸಂಸ್ಥೆಗಳು ಎನ್​ಡಿಎ ಮೈತ್ರಿಕೂಟ 342ರಿಂದ 400 ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದ್ದವು. ಇನ್ನು ಇಂಡಿ ಮೈತ್ರಿಕೂಟಕ್ಕೆ 107-169 ಸ್ಥಾನ ಬರಬಹುದೆಂದು ಹೇಳಲಾಗಿತ್ತು. ಆದರೆ ಈ ಸಮೀಕ್ಷೆಗಳಿಗೆ ವ್ಯತಿರಿಕ್ತ ಫಲಿತಾಂಶ ಬಂದಿದೆ.
ಷೇರುಪೇಟೆ:30 ಲಕ್ಷ ಕೋಟಿ ನಷ್ಟ : ಲೋಕಸಭೆ ಫಲಿತಾಂಶದ ಬೆನ್ನಲ್ಲೇ ಷೇರು ಮಾರುಕಟ್ಟೆ ಕಂಪಿಸಿದೆ. ಮತದಾನೋತ್ತರ ಸಮೀಕ್ಷೆಗಳಲ್ಲಿ ಮುನ್ನಡೆ ಸಾಧಿಸಿದ್ದ ಎನ್​ಡಿಎಗೆ ಹಿನ್ನಡೆ ಆಗುತ್ತಿದ್ದಂತೆ ಒಂದೇ ದಿನ 30 ಲಕ್ಷ ಕೋಟಿ ರೂ. ಸಂಪತ್ತು ಕರಗಿ ಹೋಯಿತು.
3ನೇ ಬಾರಿ ಮೋದಿ ಪ್ರಧಾನಿ?:10 ವರ್ಷ ನಿರಂತರವಾಗಿ ಪ್ರಧಾನಿ ಹುದ್ದೆ ನಿರ್ವಹಿಸಿರುವ ನರೇಂದ್ರ ಮೋದಿ ಮೂರನೇ ಅವಧಿಗೂ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಆದರೆ ಈ ಬಾರಿ ಮಿತ್ರಪಕ್ಷಗಳೇ ನಿರ್ಣಾಯಕ ಆಗಿರುವುದರಿಂದ ಮಿತ್ರರ ಸಭೆ ಬಳಿಕ ಈ ವಿಚಾರ ಅಂತಿಮವಾಗಲಿದೆ.
1. ಟಕಾಟಕ್ 1 ಲಕ್ಷ ರೂ. ನೀಡುವ ಭರವಸೆ
2. ರಾಹುಲ್ ಗಾಂಧಿಯ ನ್ಯಾಯಯಾತ್ರೆ
3. ಮೀಸಲಾತಿಗೆ ಸಂಚಕಾರ ಎಂದು ಪ್ರಚಾರ
4. ಮುಸ್ಲಿಮರ ಮತ ಕೈತಪ್ಪದಂತೆ ತಡೆದಿದ್ದು
5. ಸಂವಿಧಾನ ಪ್ರತಿ ಹಿಡಿದು ರಕ್ಷಣೆ ಘೋಷಣೆ
6. ಉತ್ತರ ಪ್ರದೇಶದಲ್ಲಿ ಎಸ್​ಪಿ ಜತೆ ಮೈತಿ
1. ಮತವಾಗಿ ಬದಲಾಗದ ರಾಮಮಂದಿರ
2. 10 ವರ್ಷದ ಸಾಧನೆ ಸರಿಯಾಗಿ ಬಿಂಬಿಸದ್ದು
3. ಎಸ್​ಪಿ ಅಲೆ ಅಂದಾಜಿಸುವಲ್ಲಿ ವಿಫಲ
4. ಮಹಾ ಸರ್ಕಾರ ಕೆಡವಿದ್ದು ತಿರುಗುಬಾಣ
5. ಕಾಡಿದ ಪ್ರಬಲ ಮಿತ್ರ ಪಕ್ಷಗಳ ಕೊರತೆ
6. ಕನಿಷ್ಠ 400 ಸ್ಥಾನ ಗೆಲ್ಲುವ ಅತಿ ಆತ್ಮವಿಶ್ವಾಸ
1. ಇಬ್ಬರದ್ದೂ ಅವಕಾಶವಾದಿ ರಾಜಕಾರಣ ನೀತಿ
2. ಎನ್​ಡಿಎ, ಯುಪಿಎಗೆ ಹೈಜಂಪ್ ಇತಿಹಾಸ
3. ಪ್ರಧಾನಿ ಗಾದಿಯ ಪ್ರಬಲ ಆಕಾಂಕ್ಷಿಗಳು ಹೌದು
4. ನಿತೀಶ್​ಗೆ ಇಂಡಿಯಿಂದ ಉಪಪ್ರಧಾನಿ ಆಮಿಷ
5. ಆಂಧ್ರಕ್ಕೆ ವಿಶೇಷ ಸ್ಥಾನಮಾನ ಭರವಸೆ
ಕರ್ನಾಟಕದಲ್ಲಿ ಕಾಂಗ್ರೆಸ್, ದೋಸ್ತಿಗೆ ಸಿಹಿ ಕಹಿ:ರಾಜ್ಯದ ಲೋಕಸಭೆ ಚುನಾವಣೆ ಫಲಿತಾಂಶ ಮೂರು ಪಕ್ಷಗಳಿಗೆ ಸಿಹಿ ಕಹಿ ಅನುಭವ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ 28 ಕ್ಷೇತ್ರಗಳ ಪೈಕಿ ಒಂದರಲ್ಲಷ್ಟೇ ಗೆದ್ದಿತ್ತು. ಆದರೆ ಈಗ 9 ಸ್ಥಾನದಲ್ಲಿ ಗೆದ್ದು ಬೀಗಿದೆ. ಇದು ಉತ್ತಮ ಸಾಧನೆ ಆದರೂ ಗ್ಯಾರಂಟಿ ಯೋಜನೆಗಳ ಲಾಭ ಎತ್ತಿ ಎರಡಂಕಿ ಸ್ಥಾನ ಗೆಲ್ಲಲು ವಿಫಲವಾಗಿದೆ. ಬಿಜೆಪಿ 17ರಲ್ಲಿ ಗೆಲುವು ಸಾಧಿಸುವ ಮೂಲಕ 8 ಸ್ಥಾನ ಕಳೆದುಕೊಂಡಿದೆ. ಮಿತ್ರಪಕ್ಷ ಜೆಡಿಎಸ್ 3ರಲ್ಲಿ 2 ಸ್ಥಾನ ಗೆದ್ದಿರುವುದು ತುಸು ಸಮಾಧಾನ ತರಿಸಿದೆ.
ಯಾರಿಗೆಲ್ಲ ಸಚಿವ ಯೋಗ?
1. ಎಚ್.ಡಿ.ಕುಮಾರಸ್ವಾಮಿ
2. ಬಸವರಾಜ ಬೊಮ್ಮಾಯಿ
3. ಜಗದೀಶ ಶೆಟ್ಟರ್
4. ಶೋಭಾ ಕರಂದ್ಲಾಜೆ
5. ಡಾ.ಸಿ.ಎನ್.ಮಂಜುನಾಥ್
6. ಡಾ.ಕೆ.ಸುಧಾಕರ್
7. ಬಿ.ವೈ. ರಾಘವೇಂದ್ರ
8. ಪ್ರಲ್ಹಾದ ಜೋಶಿ
1. 1 ಸ್ಥಾನದಿಂದ 9ಕ್ಕೆ ಏರಿಕೆ ಆಗಿದ್ದು ಸ್ವಲ್ಪ ನಿರಾಳ
2. ಸಿಎಂ, ಡಿಸಿಎಂ ತವರಲ್ಲೇ ಮುಖಭಂಗ
3. ಮೈಸೂರು, ಬೆಂ.ಗ್ರಾಮಾಂತರದಲ್ಲಿ ಸೋಲು
4. ಧ್ವನಿ ಎತ್ತಲಾಗದ ಸ್ಥಿತಿಯಲ್ಲಿ ಸಿದ್ದು, ಡಿಕೆಶಿ
5. ಗ್ಯಾರಂಟಿಯಷ್ಟೇ ಮತ ತರಲ್ಲ ಎಂಬುದಕ್ಕೆ ಸಾಕ್ಷಿ
1. ಮೋದಿ ಅಲೆಯಲ್ಲೂ ಎಡವಿದ ರಾಜ್ಯ ಬಿಜೆಪಿ
2. ನಾಯಕರ ಮುಸುಕಿನ ಗುದ್ದಾಟಕ್ಕೆ ತಕ್ಕ ಬೆಲೆ
3. ಕಲ್ಯಾಣ ಕರ್ನಾಟಕದಲ್ಲಿ ಭಾರಿ ಆಘಾತ
4. 2019ರ ಚುನಾವಣೆಗಿಂತ 8 ಸ್ಥಾನ ಕುಸಿತ
5. ಸ್ಥಳೀಯ ಅಭಿಪ್ರಾಯ ಕಡೆಗಣಿಸಿ ಟಿಕೆಟ್
1. ಸಂಸತ್​ಗೆ ಮೂವರು ಮಾಜಿ ಸಿಎಂಗಳ ಎಂಟ್ರಿ
2. ಎಚ್​ಡಿಕೆ, ಶೆಟ್ಟರ್, ಬೊಮ್ಮಾಯಿ ಗೆಲುವು
3. ಅಸೆಂಬ್ಲಿ ಸೋತಿದ್ದ ನಾಲ್ವರಿಗೆ ಮರು ಜನ್ಮ
4.  ಸೋಮಣ್ಣ, ಸುಧಾಕರ್, ಶೆಟ್ಟರ್, ಕಾಗೇರಿ ಜಯ
5. ಮೊದಲ ಪ್ರಯತ್ನದಲ್ಲೇ ಗೆದ್ದ ಡಾ.ಮಂಜುನಾಥ್
6. 3.37 ಲಕ್ಷ ಮತಗಳ ಅಂತರದಿಂದ ಗೆದ್ದ ಕಾಗೇರಿ
ದೇಶದ ಜನ ಎನ್​ಡಿಎ ಮೇಲೆ ನಂಬಿಕೆ ಇರಿಸಿದ್ದಾರೆ. ಸತತವಾಗಿ ಮೂರನೇ ಬಾರಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ. ಮುಂದಿನ ದಿನಗಳಲ್ಲೂ ಜನರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ಉತ್ತಮ ಆಡಳಿತ ನೀಡುತ್ತೇವೆ.
| ನರೇಂದ್ರ ಮೋದಿ ಪ್ರಧಾನಿ
ಆಂಧ್ರಪ್ರದೇಶದ ಜನತೆ ಎನ್​ಡಿಎ ಮೈತ್ರಿಕೂಟದ ಮೇಲೆ ನಂಬಿಕೆ ಇಟ್ಟಿದ್ದರು. ನಮ್ಮ ಗೆಲುವು ಕೂಡ ಮೈತ್ರಿ ಮೇಲಿನ ನಂಬಿಕೆಯ ಪ್ರತಿಫಲನ. ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು.
| ಚಂದ್ರಬಾಬು ನಾಯ್ಡು, ಟಿಡಿಪಿ ವರಿಷ್ಠ
ಸತತ ಮೂರನೇ ಬಾರಿಗೆ ಎನ್​​ಡಿಎ ಸರ್ಕಾರ ರಚಿಸಲಿದೆ: ಗೆಲುವು ಕೊಟ್ಟ ದೇಶವಾಸಿಗಳಿಗೆ ಮೋದಿ ಧನ್ಯವಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eleven =
Remember me
