ಕಾರವಾರ:ಪೋಷಕರು ಹಸುಗೂಸನ್ನು ಬಾಕ್ಸ್​​ನಲ್ಲಿ ಹಾಕಿ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಸಿದ್ಧಾಪುರದಲ್ಲಿ ನಡೆದಿದೆ.
ಸಿದ್ಧಾಪುರದಿಂದ ಗುಡ್ಡೆಕೊಪ್ಪಕ್ಕೆ ತೆರಳುವ ತ್ಯಾರ್ಸಿ-ತಡಕೇರಿ ತಿರುವಿನ ಬಳಿ ಮಗುವನ್ನು ಬಾಕ್ಸ್​ನಲ್ಲಿ ಹಾಕಿ ಬಿಟ್ಟು ಹೋಗಿದ್ದಾರೆ. ಇದು ಸ್ಥಳೀಯರ ಗಮನಕ್ಕೆ ಬಂದಿದೆ. ಕೂಡಲೇ ಬಾಕ್ಸ್​ ತೆರೆದು ನೋಡಿದಾಗ ಹಸುಗೂಸು ಇರುವುದು ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನವಜಾತ ಮಗು ಸಿಕ್ಕಿರುವ ಜಾಗಕ್ಕೆ ಪೊಲೀಸರು ಬಂದು, ಮಹಿಳಾ ಮತ್ತು ಶಿಶು ಕಲ್ಯಾಣ ಅಧಿಕಾರಿ ಪೂರ್ಣಿಮಾ ಆರ್​.ದೊಡ್ಡನಿ ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಅನಾಥವಾಗಿದ್ದ ಮಗುವನ್ನು ಸ್ಥಳೀರು ಸರ್ಕಾರಿ ಆಸ್ಪತ್ರೆಗೆ ಕರೆತಂದು ಹಾಲುಣಿಸಿ, ಆರೋಗ್ಯ ತಪಾಸಣೆ ಮಾಡಲಾಗಿದೆ. ಮಗುವನ್ನು ಶಿರಸಿಯ ದತ್ತು ಮಕ್ಕಳ ಕೇಂದ್ರಕ್ಕೆ ತಲುಪಿಸುವುದಾಗಿ ಶಿಶು ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಮಾಹಿತಿ ನೀಡಿದ್ದಾರೆ.
ರಸ್ತೆ ಬದಿ ಬಾಕ್ಸ್​​ನಲ್ಲಿ ಸಿಕ್ಕಿರುವ ಮಗು ಅಂಗವೈಕಲ್ಯ ಹೊಂದಿತ್ತು. ಹೀಗಾಗಿ ಪೋಷಕರು ಮಗುವನ್ನು ಬಿಟ್ಟು ಹೋಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಸದ್ಯ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಅನಾಥವಾಗಿರುವ ಮಗುವಿನ ಪೋಷಕರನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 3 =
Remember me
