ಕೆ.ಆರ್.ಪೇಟೆ:ಮುಂಬೈನಿಂದ ಬಂದು ಕ್ವಾರಂಟೈನ್​ನಲ್ಲಿರುವ ಜನರಿಗೆ ಊಟ ಕೊಟ್ಟರೆ ಅದು ಚೆನ್ನಾಗಿಲ್ಲ ಎಂಬ ನೆಪದಲ್ಲಿ ಮನಸೋ ಇಚ್ಛೆ ಎಲ್ಲೆಂದರಲ್ಲಿ ಬಿಸಾಡಿ ಉದ್ಧಟತನ ತೋರಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಟ್ಟಣದ ಬಂಡಿಹೊಳೆ ವೃತ್ತದ ಗ್ರಾಮ ಭಾರತಿ ವಿದ್ಯಾಸಂಸ್ಥೆಯಲ್ಲಿ ತಾಲೂಕು ಆಡಳಿತ ಕ್ವಾರಂಟೈನ್ ಮಾಡಿರುವ ಜನರು ಮಾಡಿರುವ ಕೃತ್ಯ ಇದು. ತಮಗೆ ನೀಡಿದ ಅನ್ನ, ಸಾಂಬಾರು, ಚಪಾತಿ, ಮುದ್ದೆ, ಮೊಟ್ಟೆ ಒಳಗೊಂಡ ಆಹಾರ ಪದಾರ್ಥಗಳನ್ನು ಹೊರಗೆ ಎಸೆದಿದ್ದಾರೆ. ಕೆಲವರು ಊಟದ ಪಾರ್ಸಲ್ ಅನ್ನು ತೆರೆಯದೇ ಬಿಸಾಡಿದ್ದಾರೆ! ಜತೆಗೆ ಟೀ, ಕಾಫಿ ಕುಡಿದು ಖಾಲಿ ಲೋಟಗಳನ್ನೂ ಅಲ್ಲಲ್ಲೇ ಎಸೆದಿದ್ದಾರೆ. ಸಂಸ್ಥೆಯ ಕಟ್ಟಡದ ಮೇಲೆಲ್ಲ ಊಟದ ಪಾರ್ಸಲ್‌ನ ಕವರ್, ಉಳಿದಿರುವ ಅನ್ನ ಚೆಲ್ಲಾಡಿರುವುದು ಕಂಡುಬಂದಿದೆ.
ಇದನ್ನೂ ಓದಿರಿತಾಯಿಯ ಶವದ ಜತೆಯಲ್ಲೇ 5 ದಿನ ಇದ್ದ ಮಗಳು!
ಊಟ ಬಿಸಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ತಹಸೀಲ್ದಾರ್ ಎಂ. ಶಿವಮೂರ್ತಿ, ‘‘ಕ್ವಾರಂಟೈನ್‌ನಲ್ಲಿ ಇರುವವರು ಮನೆಯಿಂದ ಊಟ ತರಿಸಿಕೊಳ್ಳಲು ಬಯಸಿದ್ದರು. ಇದಕ್ಕೆ ಒಪ್ಪದೇ ಇದ್ದುದರಿಂದ ಈ ರೀತಿ ಮಾಡಿದ್ದಾರೆ. ಅಷ್ಟೇ ಅಲ್ಲ, ಕ್ವಾರಂಟೈನ್‌ನಲ್ಲಿರುವ ಕೆಲವರು ಮದ್ಯ ತರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದನ್ನು ತಾಲೂಕು ಆಡಳಿತ ತಡೆದಿದೆ’’ ಎಂದು ವಿವರಿಸಿದ್ದಾರೆ.
ಇದನ್ನೂ ಓದಿರಿಬಾಲಿವುಡ್​ ನಟನಿಗೆ ವಾಟ್ಸ್​ಆ್ಯಪ್​ನಲ್ಲಿ ಬಂತು ಡಿವೋರ್ಸ್​ ನೋಟಿಸ್ !
https://www.facebook.com/VVani4U/videos/619346588656109/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + nineteen =
Remember me
