ಬೆಂಗಳೂರು:ಕ್ರಿಕೆಟ್​ ಎಂದರೆ ಸಖತ್​ ಕ್ರೇಜ್​​. ಯುವಕ, ಯುವತಿ, ವೃದ್ಧರಿದಂದ ಹಿಡಿದು ಚಿಕ್ಕ ಮಕ್ಕಳು ಕೂಡಾ ಕ್ರಿಕೆಟ್​​​ ಇಷ್ಟ ಪಡುತ್ತಾರೆ. ಐಪಿಎಲ್ ಹವಾ ಕಳೆದ ಕೆಲವು ವಾರಗಳಿಂದ ಶುರುವಾಗಿದೆ. ಆದರೆ ಒಂದು ವಿಚಾರವಾಗಿ ನಾಡಿದ್ದು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಐಪಿಎಲ್‌ ಪಂದ್ಯದ ಭಾರೀ ಚರ್ಚೆಯಲ್ಲಿದೆ.
2023 ಮೇ 21 ರಂದು ಆರ್​ಸಿಬಿ ಮತ್ತು ಗುಜರಾತ್​ ಟೈಟನ್ಸ್​ ನಡುವೆ ಐಪಿಎಲ್​ ಪಂದ್ಯ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿಯೇ ಮ್ಯಾಚ್​ ನಡೆಯುತ್ತಿರುವುದರಿಂದ ಅಭಿಮಾನಿಗಳು ಮ್ಯಾಚ್​ ವೀಕ್ಷಿಸಲು ಕಾತುರರಾಗಿದ್ದಾರೆ. ಆದರೆ ಆರ್​ಸಿಬಿ ಪಂದ್ಯವನ್ನು ನೋಡಲು ಟಿಕೆಟ್​ ಸಿಗುತ್ತಿಲ್ಲ ಎಂದು ಅಭಿಮಾನಿಗಳು ಮ್ಯಾನೆಜ್​ಮೆಂಟ್ ವಿರುದ್ಧವಾಗಿ ಹಿಡಿ ಶಾಪ ಹಾಕುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್​ ಟೈಟನ್ಸ್​ ತಂಡಗಳು ಸೆಣಸಾಡುತ್ತಿದೆ. ಹುಬ್ಬಳ್ಳಿ, ಧಾರವಾಡ, ರಾಯಚೂರು ಸೇರಿದಂತೆ ಅನೇಕ ಭಾಗಗಳಿಂದ ಅಭಿಮಾನಿಗಳು ಬಂದಿದ್ದಾರೆ. ಆದರೆ ಇವರಿಗೆ ಮ್ಯಾಚ್​​ ವೀಕ್ಷಣೆಗೆ ಟಿಕೆಟ್​ ಸಿಗುತ್ತಿಲ್ಲ. ಈ ಕುರಿತಾಗಿ ಸಾಕಷ್ಟು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳು ಹೇಳಿದ್ದೇನು?:9 ಸಾವಿರ ಟಿಕೆಟ್​ಗಳಿವೆ. ಆದರೆ ನೂರು ಟಿಕೆಟ್​ಗಳ ಹಂಚಿಕೆ ಕೂಡಾ ಆಗಿಲ್ಲ. ಬೆಳಿಗ್ಗೆ 5 ಗಂಟೆಯಿಂದ ನಾವು ಟಿಕೆಟ್​ಗಾಗಿ ಕಾಯುತ್ತಿದ್ದೇವೆ. 1200 ರೂಪಾಯಿ ಬೆಲೆಯ ಟಿಕೆಟ್​ನ್ನು 8 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಪೊಲೀಸರೇ ಈ ಟಿಕೆಟ್​ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮ್ಯಾನೆಜ್​ಮೆಂಟ್​​ ಬಳಿ ಈ ಕುರಿತಾಗಿ ಕೇಳಿದರೆ, ಪೊಲೀಸರ ಬಳಿ ದೂರು ನೀಡಿ, ಫ್ರಿಡಂ ಪಾರ್ಕ್​​ನಲ್ಲಿ ಕುಳಿತು ಪೈಟ್​ ಮಾಡಿ ಎಂದು ಹೇಳುತ್ತಿದ್ದಾರೆ. ಹುಬ್ಬಳ್ಳಿ, ಕೋಲಾರ, ದಾವಣಗೆರೆ ಹೀಗೆ ಬೇರೆ ಬೇರೆ ಕಡೆಯಿಂದ ಸರಿಸುಮಾರು 5 ಸಾವಿರ ಜನರು ಬಂದು ಟಿಕೆಟ್​ಗಾಗಿ ಕಾಯುತ್ತಿದ್ದೇವೆ. ಕ್ರೀಡಾಂಗಣದಲ್ಲಿ 40 ಸಾವಿರ ಆಸನಗಳು ಇವೆ. ಕೇವಲ 150 ಟಿಕೆಟ್​ ಮಾತ್ರ ಕೊಟ್ಟಿದ್ದಾರೆ. ಉಳಿದ ಟಿಕೆಟ್​ಗಳು ಯಾಕೆ ಕೊಡುತ್ತಿಲ್ಲ. ಈ ಕುರಿತಾಗಿ ಪ್ರಶ್ನೆ ಮಾಡಿದೆ ಸರಿಯಾದ ಮಾಹಿತಿಯನ್ನು ಯಾರು ನೀಡುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.
ಮುಸ್ಲಿಂ ಯುವಕನನ್ನು ಮದುವೆಯಾಗಲಿದ್ದಾಳೆ ಬಿಜೆಪಿ ಮುಖಂಡನ ಮಗಳು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 + 12 =
Remember me
