ಹಾವೇರಿ:ಎರಡು ತಿಂಗಳ ಹಿಂದೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹ ಯಾರದ್ದೆಂದು ಪತ್ತೆ ಹಚ್ಚುವುದು ಹಾವೇರಿ ಪೊಲಿಸರಿಗೆ ಸವಾಲಾಗಿ ಪರಿಣಮಿಸಿತ್ತು. ದೇಹ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಯಾವುದೇ ಸುಳಿವು ಇರಲಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಕೊನೆಗೂ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಡವಿ ಸೋಮಾಪುರ ಗ್ರಾಮದ ಬಳಿ ಆಗಸ್ಟ್​ 25 ರಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯ ದೇಹ ಪತ್ತೆಯಾಗಿತ್ತು. ದೇಹ ಸಂಪೂರ್ಣವಾಗಿ ಸುಟ್ಟು ಹೋಗಿ, ಗುರುತು ಸಿಗದಂತಾಗಿತ್ತು. ಕೊಲೆ ಮಾಡಿದ ಆರೋಪಿಗಳು ದೇಹದ ಮೇಲೆ ಟಯರ್ ಇಟ್ಟು ಸುಟ್ಟಿದ್ದರು.
ಮೃತದೇಹ ಯಾರದ್ದೆಂದು ಪತ್ತೆ ಮಾಡಲು ಹಾವೇರಿ ಎಸ್​ಪಿ ಹನುಮಂತರಾಯ, ಎಎಸ್​​ಪಿ ವಿಜಯ್ ಕುಮಾರ್ ಹಾಗೂ ಡಿಎಸ್​ಪಿ ಮಂಜುನಾಥ್ ನೇತೃತ್ವದಲ್ಲಿ ತಂಡ ರಚನೆ ಆಗಿತ್ತು. ಬಳಿಕ ತನಿಖಾ ತಂಡ ಆರೋಪಿಗಳು ಹಾಗೂ ಮೃತಪಟ್ಟ ವ್ಯಕ್ತಿಯ ಪತ್ತೆಗೆ ಮುಂದಾಯಿತು. ಮೊದಲು ಅಕ್ಕ ಪಕ್ಕದ ಜಿಲ್ಲೆಯಲ್ಲಿ ವರದಿಯಾಗಿದ್ದ ಕಾಣೆಯಾದ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಯಿತು. ಈ ವೇಳೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ ವ್ಯಕ್ತಿ ಸಕ್ರಪ್ಪ ಲಮಾಣಿ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಇದೇ ಕೇಸ್​ನಲ್ಲಿ ಸಂಶಯ ಬಂದು, ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಪೊಲೀಸರಿಗೆ ಅಸಲಿ ಸತ್ಯ ಗೊತ್ತಾಗಿದೆ.
ಕೊಲೆಯಾದ ಸಕ್ರಪ್ಪ ಗಂಗಪ್ಪ ಲಮಾಣಿ ಪತ್ನಿ, ತನ್ನ ಪ್ರಿಯಕರನ ಜತೆಗೂಡಿ ಗಂಡನನ್ನು ಕೊಲೆ ಮಾಡಿದ್ದಾಳೆ. ಕೊಡಲಿ ಏಟಿನ ಮೂಲಕ ಗಂಡನನ್ನು ಕೊಲೆ ಮಾಡಿದ್ದಳು. ನಂತರ ಆರೋಪಿಗಳು ಮೃತದೇಹವನ್ನು ಸುಟ್ಟು ಹಾಕಿದ್ದಾರೆ. ಈ ಬಗ್ಗೆ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಘಟನೆ ನಡೆದು ಎರಡು ತಿಂಗಳ ಬಳಿಕ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಮೃತದೇಹ ಸಕ್ರಪ್ಪ ಗಂಗಪ್ಪ ಲಮಾಣಿ ಎಂಬುವರದ್ದು ಎಂದು ಖಚಿತಪಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೃಷಿ ಕೆಲಸ ಮಾಡುವಾಗ ಸಕ್ರಪ್ಪ ಲಮಾಣಿ ಕಾಲಿಗೆ ಗಾಯ ಮಾಡಿಕೊಂಡಿದ್ದ. ಸಂಪೂರ್ಣ ಸುಟ್ಟು ಕರಕಲಾದ ದೇಹದಲ್ಲಿ ಸುಡದೇ ಉಳಿದುಕೊಂಡಿದ್ದು ಒಂದು ಕಾಲು ಮಾತ್ರವಾಗಿತ್ತು. ಕಾಲಿಗೆ ಆಗಿದ್ದ ಗಾಯ ನೋಡಿ ಕೊಲೆಯಾದ ವ್ಯಕ್ತಿ ಸಕ್ರಪ್ಪ ಎಂದು ಕುಟುಂಬಸ್ಥರು ಗುರುತು ಹಿಡಿದಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 4 =
Remember me
