ದಾವಣಗೆರೆ:ಅನಾಥ ಶವ ಎಂದು ಪರಿಗಣಿಸಿ ಪೊಲೀಸರು ಅಂತ್ಯಸಂಸ್ಕಾರ ಮಾಡಿಸಿದ್ದ ಪ್ರಕರಣ ಈಗ ಮತ್ತೊಂದು ತಿರುವು ಪಡೆದಿದೆ. ಮಾತ್ರವಲ್ಲ, ಹೂತು ಹಾಕಿದ 20 ದಿನಗಳ ಬಳಿಕ ಶವವನ್ನು ಹೊರಕ್ಕೆ ತೆಗೆಸಿರುವ ಪೊಲೀಸರು ಮತ್ತೊಂದು ಸುತ್ತಿನ ತನಿಖೆಗೆ ಮುಂದಾಗಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬುಳ್ಳಾಪುರ ಗ್ರಾಮದ ನಿವಾಸಿ ತಿಪ್ಪೇಶಪ್ಪ (30) ಮೃತಪಟ್ಟವರು. ಮೇ 9ರಂದು ಬುಳ್ಳಾಪುರದ ತುಂಗಾಭದ್ರಾ ನದಿ ತೀರದಲ್ಲಿ ಇವರ ಶವ ಪತ್ತೆಯಾಗಿತ್ತು. ಆದರೆ ಈ ಶವಕ್ಕೆ ವಾರಸುದಾರರು ಪತ್ತೆಯಾಗದ್ದರಿಂದ ಅನಾಥ ಶವ ಎಂದು ಪರಿಗಣಿಸಿ ಪೊಲೀಸರು ಶವಸಂಸ್ಕಾರ ನಡೆಸಿದ್ದರು.
ಇದನ್ನೂ ಓದಿ:ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…
ಆದರೆ ಮೇ. 31ರಂದು ತಿಪ್ಪೇಶಪ್ಪನ ತಂದೆ ಶಿವಮೂರ್ತಪ್ಪ ಅವರಿಂದ ಹೊನ್ನಾಳಿ ಪೊಲೀಸ್​ ಠಾಣೆಯಲ್ಲಿ ಕೊಲೆ ದೂರು ದಾಖಲಾಗಿದ್ದು, ಆ ಹಿನ್ನೆಲೆಯಲ್ಲಿ ತನಿಖೆಗಿಳಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬುಳ್ಳಾಪುರ ಗ್ರಾಮದ ನಾಗರಾಜ್, ಪ್ರವೀಣ, ರಾಜ, ಮಂಜುನಾಥ, ಸಾಸ್ವೆಹಳ್ಳಿಯ ನಾಗರಾಜ ಬಂಧಿತರು.
ಇದನ್ನೂ ಓದಿ:ಹೆಂಡತಿಯನ್ನು ಇನ್ನೊಬ್ಬನ ಜತೆ ನೋಡಬಾರದ ಸ್ಥಿತಿಯಲ್ಲಿ ನೋಡಿದ ಗಂಡ; ಇಬ್ಬರನ್ನೂ ಹೊರಕ್ಕೆಳೆದು ಕಂಬಕ್ಕೆ ಕಟ್ಟಿ ಥಳಿಸಿದ..
ಹೆಚ್ಚಿನ ತನಿಖೆ ಸಲುವಾಗಿ ಶವಸಂಸ್ಕಾರ ನಡೆಸಿದ 20 ದಿನಗಳ ಬಳಿಕ ಅಂದರೆ ಇವತ್ತು ಅದನ್ನು ಹೊರಕ್ಕೆ ತೆಗೆಸಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಒಪ್ಪಿಸಿದ್ದಾರೆ. ತಹಸೀಲ್ದಾರ್ ಬಸನಗೌಡ ಕೊಟ್ಟೂರು, ಸಿಪಿಐ ದೇವರಾಜ್, ಪಿಎಸ್ಐ ಬಸವನಗೌಡ ಬಿರಾದಾರ್, ವೈದ್ಯ ಡಾ.ಎಚ್.ಜೆ. ನರೇಂದ್ರ, ವಿಧಿವಿಜ್ಞಾನ ಪ್ರಯೋಗಾಲಯ ನಿರ್ದೇಶಕಿ ಭಾರ್ಗವಿ ಅವರ ಸಮ್ಮುಖ ಶವ ಹೊರತೆಗೆಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಊಟ ಕೇಳಿದ 82 ವರ್ಷದ ತಾಯಿಗೆ ಹೊಡೆದು ಮನೆಯಿಂದ ಹೊರಹಾಕಿದ ಮಗ!
ಮದ್ವೆಯಾಗಿ ನಾಲ್ಕೇ ದಿನಗಳಲ್ಲಿ ಕರೊನಾಗೆ ಬಲಿಯಾದ ಯುವತಿ; ಸೋಂಕಿರುವುದು ಆಕೆಯ ಮರಣದ ಬಳಿಕ ಗೊತ್ತಾಯಿತು..!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 3 =
Remember me
