ಲಿಂಗಸುಗೂರು (ರಾಯಚೂರು): ಸರ್ಕಾರಿ ಕ್ವಾರಂಟೈನ್‌ನಿಂದ ತಪ್ಪಿಸಿಕೊಂಡಿದ್ದ ತುಂಬು ಗರ್ಭಿಣಿಗೆ ದಾರಿ ಮಧ್ಯೆಯೇ ಹೆರಿಗೆಯಾಗಿ ಮತ್ತೆ ಕ್ವಾರಂಟೈನ್‌ಗೆ ಒಳಪಡುವಂತಾಗಿದೆ!
ಮಹಾರಾಷ್ಟ್ರದ ಪೂನಾಕ್ಕೆ ಗುಳೆ ಹೋಗಿದ್ದ ತಾಲೂಕಿನ ಹಾಲಬಾವಿ ತಾಂಡಾದ ಲಕ್ಷ್ಮೀಬಾಯಿ, ಕಳೆದ ಹತ್ತು ದಿನಗಳ ಹಿಂದೆ ಗಂಡ, ಅತ್ತೆ, ಇಬ್ಬರು ಮಕ್ಕಳ ಜತೆ ತವರಿಗೆ ಬಂದಿದ್ದರು. ಇವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು.
ಈಕೆಗೆ ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ಅಧಿಕಾರಿಗಳು ದಾಖಲಿಸಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ ಸ್ಥಳೀಯ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸುವ ಸಿದ್ಧತೆಯಲ್ಲಿದ್ದರು.
ಇದನ್ನೂ ಓದಿVIDEO| ನಿನ್ನೆ ದೇವೇಗೌಡರ ಜತೆ ಡಿಕೆಶಿ ಭೋಜನ; ಇವತ್ತು ಎಚ್‌ಡಿಕೆ ಜತೆ ಡಿಕೆ ಸುರೇಶ್ ಕ್ಷೇತ್ರ ಪ್ರವಾಸ!
ಆದರೆ ಅದೇ ಸಮಯದಲ್ಲಿ ಗರ್ಭಿಣಿಯು ತನ್ನ ಗಂಡ ಮತ್ತು ಅತ್ತೆ ಜತೆ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಳು. ಅಧಿಕಾರಿಗಳು ಸಾಕಷ್ಟು ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಸ್ವಗ್ರಾಮ ಹಾಲಬಾವಿಯತ್ತ ತೆರಳುವಾಗ ಸೋಮವಾರ ರಾತ್ರಿ ಸುಣಕಲ್ ಗ್ರಾಮದ ಬಳಿ ಗಂಡು ಮಗುವಿಗೆ ಈಕೆ ಜನ್ಮ ನೀಡಿದ್ದಾಳೆ.
ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ವಿಷಯ ತಿಳಿದ ವೈದ್ಯರು ಮತ್ತು ಅಧಿಕಾರಿಗಳು ಸಮೀಪದ ಆಸ್ಪತ್ರೆಯೊಂದರಲ್ಲಿ ಬಾಣಂತಿಯನ್ನು ಕ್ವಾರಂಟೈನ್ ಮಾಡಿಟ್ಟಿದ್ದಾರೆ.
ಯಾರಾದರೂ ಫುಡ್ ಕಿಟ್ ಕೊಟ್ಟರೆ ಸ್ವೀಕರಿಸುತ್ತಾರಂತೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 17 =
Remember me
