ಕುಶಾಲನಗರ:ಪಟ್ಟಣದ ನಿವಾಸಿಯೊಬ್ಬರು ಪ್ರಧಾನಿ ಕಚೇರಿಯ ಮೂಲಕ ತಮಗೆ ಅಗತ್ಯವಾದ ಔಷಧ ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಜಿ.ಕೆ. ಗೋವಿಂದರಾಜ್ ಎಂಬುವರು ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದು, ಹೋಮಿಯೋಪಥಿ ಔಷಧ ತೆಗೆದುಕೊಳ್ಳುತ್ತಿದ್ದರು. 10 ದಿನಗಳ ಹಿಂದೆ ಔಷಧ ಖಾಲಿಯಾಗಿತ್ತು. ವಿತರಕರು ಅಂಚೆ ಮೂಲಕ ಔಷಧ ಕಳುಹಿಸುವ ಪ್ರಯತ್ನ ಮಾಡಿ ವಿಫಲರಾಗಿದ್ದರು.
ಕಡೆಗೆ, ಗೋವಿಂದರಾಜ್ ಅವರ ಮಗ ಸುಖೇಶ್‌ರಾಜ್ ಪ್ರಧಾನಿ ಕಚೇರಿಗೆ ಟ್ವೀಟ್ ಮಾಡಿ ಔಷಧಕ್ಕಾಗಿ ವಿನಂತಿಸಿದರು. ಇದಾದ 5 ದಿನಗಳಲ್ಲಿ ದಾವಣಗೆರೆಯಿಂದ ಸ್ಪೀಡ್‌ಪೋಸ್ಟ್ ಮೂಲಕ ಬುಧವಾರ ಔಷಧ ತಲುಪಿದೆ.
ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ರಾಜ್ಯ ಅಂಚೆ ಇಲಾಖೆ ಮುಖ್ಯಸ್ಥೆ ಸರಸ್ವತಿ ದೂರವಾಣಿ ಕರೆ ಮಾಡಿ, ಆದಷ್ಟು ಬೇಗ ಔಷಧ ತಲುಪಿಸುವ ವ್ಯವಸ್ಥೆ ಮಾಡಲಾಗುವುದೆಂದು ಭರವಸೆ ನೀಡಿದ್ದರು ಎಂದು ಸುಖೇಶ್ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 14 =
Remember me
