ಬೆಂಗಳೂರು:ಪುಸ್ತಕ ಉತ್ತಮವಾಗಿ ಹೊರಬರಲು ಪ್ರಕಾಶಕರು ಮುಖ್ಯ.ಕನ್ನಡದಲ್ಲಿ ಕೆಲ ಉತ್ತಮ ಪ್ರಕಾಶಕರಿದ್ದಾರೆ. ಆದರೆ, ನಾಮ್​ಕೇವಾಸ್ತೆ ಎಂಬಂತೆ ಕೆಲವರು ಪುಸ್ತಕ ಬಿಡುಗಡೆ ಮಾಡುವವರೂ ಇದ್ದಾರೆ ಎಂದು ಹಿರಿಯ ಕಾದಂಬರಿಕಾರ ಎಸ್​. ಎಲ್​.ಭೈರಪ್ಪ ಅಭಿಪ್ರಾಯಪಟ್ಟರು.
ಸಾಹಿತ್ಯ ಪ್ರಕಾಶನ ಭಾನುವಾರ ಬಸವನಗುಡಿಯ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ವಿಕ್ರಮ್​ ಸಂಪತ್​ ಬರೆದಿರುವ “ಭಾರತದ ಧೀರ ಚೇತನಗಳು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.ಯಾವುದೇ ಭಾಷೆಯಲ್ಲಿ ಗುಣಮಟ್ಟ ಪುಸ್ತಕಗಳು ಹೊರಬರಬೇಕಾದರೆ ಒಳ್ಳೆಯ ಪ್ರಕಾಶಕರು ಇರಬೇಕು. ಲೇಖಕಕರಿಗೆ ಪ್ರಾಮಾಣಿಕವಾಗಿ ರಾಜಧನ ನೀಡಬೇಕು. ಲೇಖಕ ಬರೆದಿರುವ ಕರಡು ನೋಡಬೇಕು. ಅದನ್ನು ತಿದ್ದಬೇಕಾ, ಏನಾದರೂ ಸೇರಿಸಬಹುದಾ ಅಥವಾ ತೆಗೆಯಬಹುದಾ ಎಂಬದನ್ನು ಮನಗಂಡು ಲೇಖಕರ ಜತೆಗೆ ಚರ್ಚಿಸಿ ಸರಿಪಡಿಸಿದಾಗ ಉತ್ತಮ ಕೃತಿಯಾಗಿ ಮೂಡಿಬರುತ್ತದೆ. ಪುಸ್ತಕವನ್ನು ಬರೆಯದೆ ಬದುಕಬಹುದು ಎಂಬ ವಾತಾವರಣ ನಿರ್ಮಾಣವಾಗಬೇಕು ಎಂದರು.
ಉತ್ತರ ಭಾರತದಲ್ಲಿ ಒಳ್ಳೆಯ ಪ್ರಕಾಶಕರಿಲ್ಲ. ಅಲ್ಲಿನ ಪ್ರಕಾಶಕರು ಬೇಡಿಕೆ ಬಂದ ಹಾಗೆ ಪುಸ್ತಕ ಪ್ರಕಟಿಸುತ್ತಾರೆ. ಅವರು ಬೇಡಿಕೆ ಬರುವಂತೆ ಮಾಡಿ ಬೆಲೆ ಏರಿಕೆಯೂ ಮಾಡುತ್ತಾರೆ. ಮರಾಠಿಯಲ್ಲಿ ಒಳ್ಳೆಯ ಪ್ರಕಾಶನ ಇದೆ. ಬರೆಯುವವರೆಗೆ ಉತ್ತಮ ಗೌರವ ಕೊಡುತ್ತಾರೆ. ಒಂದು ಪುಸ್ತಕ ಮರು ಮುದ್ರಣಗೊಂಡಾಗಲೆಲ್ಲ ರಾಜಧನ ಕೊಡುತ್ತಾರೆ. ಕನ್ನಡದಿಂದ ಮರಾಠಿಗೆ ಅನುವಾದಗೊಂಡಿರುವ ನನ್ನ ಪುಸ್ತಕಗಳು ಅಲ್ಲಿ 20ರಿಂದ25 ಬಾರಿ ಮುದ್ರಣಗೊಂಡಿವೆ. ಲೇಖಕರಿಗೆ ಪ್ರಾಮಾಣಿಕವಾಗಿ ನ್ಯಾಯಯುತವಾದ ರಾಯಲ್ಟಿಯನ್ನು ಪ್ರಕಾಶಕರು ಕೊಡಬೇಕು. ಇಡೀ ಭಾರತವನ್ನು ಒಂದಾಗಿಸಲು ಅನುವಾದ ಸಹಕಾರಿಯಾಗಿದೆ.ಇದಕ್ಕೆ ಇನ್ನಷ್ಟು ಆದ್ಯತೆ ನೀಡಬೇಕಿದೆ ಎಂದು ಎಸ್​. ಎಲ್​.ಭೈರಪ್ಪ ತಿಳಿಸಿದರು.
ಪ್ರಜ್ವಲ್ ಪಾಸ್‌ಪೋರ್ಟ್ ರದ್ದು, ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ: ಪರಮೇಶ್ವರ
ಇತಿಹಾಸದ ಕುರಿತು ಹೆಚ್ಚು ಪುಸ್ತಕ ಬರಲಿದಿನದಿಂದ ದಿನಕ್ಕೆ ಇತಿಹಾಸ ಕುರಿತು ಬರೆಯುವವರ ಸಂಖ್ಯೆ ಕ್ಷಿಣಿಸುತ್ತಿದೆ. ಐತಿಹಾಸಿಕ ಪ್ರಜ್ಷೆ ಮತ್ತು ದೃಷ್ಟಿ ಇಟ್ಟುಕೊಂಡು ಇತಿಹಾಸದ ಕುರಿತು ಹೆಚ್ಚು ಕೃತಿಗಳನ್ನು ಬರೆಯುವವರು ಬೇಕು. ಭೈರಪ್ಪನವರ ಕಾದಂಬರಿಗಳಲ್ಲೂ ಹಲವು ಇತಿಹಾಸದ ಕುರುಹು ಸಿಗುತ್ತದೆ. ಸತ್ಯದ ನೆಲೆಯಲ್ಲಿನ ಐತಿಹಾಸಿಕ ಕೃತಿಗಳು ಇತರ ಭಾಷೆಗೆ ಅನುವಾದಗೊಂಡರೆ ಅವುಗಳ ಪ್ರಸರಣ ಸಂಖ್ಯೆಯು ಜಾಸ್ತಿಯಾಗುತ್ತದೆ ಎಂದು ಅನುವಾದಕಿ ಎಲ್​.ವಿ. ಶಾಂತಕುಮಾರಿ ಹೇಳಿದರು.
ಭೈರಪ್ಪನವರ ಮೂರು ಕಾದಂಬರಿ ಬಿಡುಗಡೆಎಸ್​.ಎಲ್​.ಭೈರಪ್ಪನವರ ಇಂಗ್ಲಿಷ್​ ಅನುವಾದಿತ “ಕವಲು’, “ಧರ್ಮಶ್ರೀ’ ಹಾಗೂ “ನಿರಾಕರಣ’ ಕಾದಂಬರಿಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಹಿರಿಯ ಪತ್ರಕರ್ತ ಅಜಿತ್​ ಹನುಮಕ್ಕನವರ್​ ಸಂವಾದ ನಡೆಸಿಕೊಟ್ಟರು. ಅನುವಾದಕ ಪ್ರೊ.ಜಿ.ಎಲ್​.ಶೇಖರ್​, ಸಾಹಿತ್ಯ ಪ್ರಕಾಶನದ ಎಂ.ಎ.ಸುಬ್ರಹ್ಮಣ್ಯ, ಎಂ.ಎಸ್​.ಋತ್ವಿಕ್​ ಮತ್ತಿತರರಿದ್ದರು.
ಇತಿಹಾಸದಲ್ಲಿ ಒಳ್ಳೆಯದು, ಕೆಟ್ಟದ್ದು ಇರುತ್ತದೆ. ಎಲ್ಲದನ್ನೂ ಓದಬೇಕು. ಇತಿಹಾಸ ಕನ್ನಡಿ ಇದ್ದಂತೆ. ಅದರಿಂದ ನಮ್ಮನ್ನು ನಾವು ನೋಡಬೇಕು.ಇತಿಹಾಸವನ್ನು ಎಡ, ಬಲ ಚಿಂತನೆಗಳ ದೃಷ್ಟಿಕೋನದಲ್ಲಿ ರಚಿಸಬಾರದು. ವಿಾನದ ಆಧಾರವಾಗಿ ರಚಿಸಬೇಕು.|ಡಾ.ವಿಕ್ರಮ್​ ಸಂಪತ್​. ಲೇಖಕ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + fourteen =
Remember me
