ಪ್ರಶಾಂತ ರಿಪ್ಪನ್​ಪೇಟೆ ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ತಿಂಗಳ ನಂತರ ಬಿದ್ದ ಮಳೆ ನಗರದಲ್ಲಿ ರಸ್ತೆಗುಂಡಿಗಳನ್ನು ಹೆಚ್ಚಾಗಿಸಿದೆ.ವಾಹನ ಸವಾರರು ನಿತ್ಯ ಓಡಾಡುವುದು ಕಷ್ಟಕರವಾಗಿದ್ದು,ಮುಖ್ಯರಸ್ತೆಯನ್ನು ಹೊರತುಪಡಿಸಿದ ಕೆಲವು ಒಳರಸ್ತೆಗಳ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿವೆ.ಸಾರ್ವಜನಿಕರು,ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಕೇಳಿದರೆ ಅವರಿಂದ ಬರುವ ಉತ್ತರ ನೀತಿಸಂಹಿತೆ!
ತಿಂಗಳುಗಳ ಹಿಂದೆ ಸ್ಯಾನಿಟರಿ ಪೈಪ್‌ಗಳನ್ನು ಬದಲಿಸುವ ಕಾಮಗಾರಿ ನಡೆಸಿರುವ ಬಿಬಿಎಂಪಿ ಆ ನಂತರ ಪೈಪ್ ಅಳವಡಿಕೆಗಾಗಿ ತೆಗೆದಿದ್ದ ಗುಂಡಿಗಳನ್ನು ಮುಚ್ಚಿ,ಮೇಲೆ ಡಾಂಬರ್ ಹಾಕಿಲ್ಲ.ಕೇವಲ ಜಲ್ಲಿಕಲ್ಲನ್ನು ಮಾತ್ರ ಹಾಕಿದ್ದು,ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ಮಣ್ಣು ಕುಸಿದು ರಸ್ತೆ ಬದಿ ತೆಗೆದಿದ್ದ ಗುಂಡಿ ಆಳವಾಗಿದೆ.ಜೊತೆಗೆ ರಸ್ತೆಯ ಮೇಲೆಯೇ ರಭಸವಾಗಿ ನೀರು ಹರಿದ ಪರಿಣಾಮ ಕೆಲ ಕಡೆಗಳಲ್ಲಿ ಗುಂಡಿ ಮೇಲೆ ಹಾಕಿದ್ದ ಜಲ್ಲಿಕಲ್ಲು ಕೂಡಾ ಕೊಚ್ಚಿಕೊಂಡು ಹೋಗಿದೆ.ಇದರಿಂದಾಗಿ ಸಣ್ಣ ಸಣ್ಣ ರಸ್ತೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ.
ಮಳೆಗಾಲದಲ್ಲಿ ಬೆಂಗಳೂರಿನಲ್ಲಿ ರಸ್ತೆಗುಂಡಿ ಸಮಸ್ಯೆ ಸಾಮಾನ್ಯ.ಆ ಕಾರಣಕ್ಕೆ ಮಳೆಗಾಲಕ್ಕೂ ಮುನ್ನ ಬಿಬಿಎಂಪಿ ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿಯನ್ನು ಕೈಗೆತ್ತಿಕೊಂಡು ಎದುರಾಗಬಹುದಾದ ಸಮಸ್ಯೆಯನ್ನು ಕೊಂಚಮಟ್ಟಿಗೆ ತಗ್ಗಿಸುವ ಪ್ರಯತ್ನ ಮಾಡುತ್ತದೆ.ಆದರೆ ಈ ಬಾರಿ ಚುನಾವಣೆಯಿಂದಾಗಿ ಕಾಮಗಾರಿಗೆ ಅಡ್ಡಿಯಾಗಿದ್ದು,ಅದರ ಪರಿಣಾಮ ರಸ್ತೆಗುಂಡಿಗಳು ಹಾಗೆಯೇ ಉಳಿದಿವೆ.ಈ ನಡುವೆ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಚರಂಡಿಗಳಲ್ಲಿ ತುಂಬಿಕೊಂಡಿರುವ ಹೂಳು ರಸ್ತೆಯನ್ನು ಮತ್ತಷ್ಟು ಹಾಳು ಮಾಡಿವೆ.
ಪರಿಸ್ಥಿತಿ ಹೀಗಿರುವಾಗ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕಾಗಿದೆ.
ಇದೇ ಮಾರ್ಗದಲ್ಲಿ ವಿವಿಧ ಶಾಲೆ ಮತ್ತು ಬಿಬಿಎಂಪಿ ಆಟದ ಮೈದಾನ ಇರುವುದರಿಂದ ಬೆಳಗ್ಗೆ ಮತ್ತು ಸಂಜೆ ವಾಹನಗಳ ಸಂಖ್ಯೆ ಹೆಚ್ಚಾಗಿರುತ್ತವೆ.ಕಳೆದ ಒಂದೂವರೆ ತಿಂಗಳ ಹಿಂದೆ ರಸ್ತೆಯಲ್ಲಿ ಸ್ಯಾನಿಟರಿ ಪೈಪ್ ಅಳವಡಿಕೆಗಾಗಿ ತೆಗೆದ ಗುಂಡಿಯನ್ನು ಇದುವರೆಗೂ ಸರಿಯಾಗಿ ಮುಚ್ಚದೆ ಕೇವಲ ಜಲ್ಲಿಕಲ್ಲು ಮಾತ್ರ ಹಾಕಿದ್ದು ಮಳೆ ಬಿದ್ದ ನಂತರ ಗುಂಡಿಯೊಳಗಿನ ಮಣ್ಣು ಕುಸಿದು ದೊಡ್ಡ ದೊಡ್ಡ ವಾಹನಗಳು ಅದೇ ಗುಂಡಿ ಮೇಲೆ ನಿತ್ಯ ಸಂಚರಿಸುವುದರಿಂದ ಗುಂಡಿ ಮತ್ತಷ್ಟು ತಗ್ಗಾಗಿದೆ.ಇದರಿಂದ ದ್ವಿಚಕ್ರ ವಾಹನ ಸವಾರರು ಸಂಚರಿಸುವುದು ಬಹಳ ಕಷ್ಟಕರವಾಗಿದೆ ಎಂದು ಸ್ಥಳೀಯ ನಾಗರೀಕರು ದೂರಿದ್ದಾರೆ.
ಬಿಬಿಎಂಪಿ ಕೈಕಟ್ಟಿದ ನೀತಿ ಸಂಹಿತೆ :ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದು,ರಾಜ್ಯದ ಮಟ್ಟಿಗೆ ಚುನಾವಣೆ ಮುಗಿದಿದ್ದರೂ ನೀತಿಸಂಹಿತೆ ಮಾತ್ರ ಲಿತಾಂಶ ಬಂದು ಎರಡು ದಿನಗಳ ವರೆಗೆ ಮುಂದುವರೆಯಲಿದೆ.ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗವೇ ಸ್ಪಷ್ಟಪಡಿಸಿದ್ದು,ನೀತಿ ಸಂಹಿತೆಯ ಕಾರಣಕ್ಕೆ ಬೆಂಗಳೂರಿನಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ಪರಿಸ್ಥಿತಿ ಹೀಗೆಯೇ ಮುಂದುವರೆಯುವ ಆತಂಕ ಇದೆ.
ಚುನಾವಣಾ ಆಯೋಗದ ವೇಳಾಪಟ್ಟಿ ಪ್ರಕಾರ ಜೂ.4ಕ್ಕೆ ಲಿತಾಂಶ ಪ್ರಕಟವಾಗಿ,ಜೂ.6ಕ್ಕೆ ನೀತಿಸಂಹಿತೆ ಅಂತ್ಯವಾಗಲಿದೆ.ಅಲ್ಲಿಗೆ ಸರಿಸುಮಾರು ಇನ್ನೂ ಒಂದು ತಿಂಗಳ ವರೆಗೆ ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆಗೆ ಮುಕ್ತಿ ಇಲ್ಲ.ಒಂದು ವೇಳೆ ವಾಡಿಕೆಗಿಂತ ಮೊದಲೇ ಮಳೆ ಆರಂಭವಾದರೆ ಈಗಿರುವ ಪರಿಸ್ಥಿತಿ ಮತ್ತಷ್ಟು ಹದಗೆಡುವುದರಲ್ಲಿ ಸಂದೇಹವಿಲ್ಲ.
ರಸ್ತೆಗಳಿಗೆ ಪೂರ್ಣ ಟಾರ್ ಹಾಕುವುದಿರಲಿ ಅಥವಾ ಈಗಿರುವ ಗುಂಡಿಗಳನ್ನು ಮುಚ್ಚುವುದಿರಲಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಯಬೇಕಿರುವುದರಿಂದ ನೀತಿ ಸಂಹಿತೆ ಮುಕ್ತಾಯವಾಗುವವರೆಗೆ ಕಾಮಗಾರಿ ಅಸಾಧ್ಯ.
“ರಸ್ತೆಗುಂಡಿ ಸಮಸ್ಯೆಯಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು,ವಾಹನ ಸವಾರರು ಸಣ್ಣಪುಟ್ಟ ಓಣಿಗಳ ಮೂಲಕ ಹೋಗುತ್ತಿದ್ದಾರೆ.ಓಣಿಗಳಲ್ಲಿರುವ ಡ್ರೈನೇಜ್‌ಗಳು ಬಾಯ್ದೆರೆದುಕೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.ಜನಪ್ರತಿನಿಧಿಗಳು,ಅಧಿಕಾರಿಗಳಿಗೆ ಎಷ್ಟು ಬಾರಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ.”
–ಸುಬ್ಬರಾವ್,ನಾಗರೀಕರು,ವಿದ್ಯಾಪೀಠ
“ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಇದ್ದರೂ ರಸ್ತೆಗುಂಡಿಗಳಿಂದ ಟ್ರಾಫಿಕ್ ಸಮಸ್ಯೆ ವಿಪರೀತವಾಗಿದೆ.ಶಾಲಾ ಕಾಲೇಜುಗಳು ಆರಂಭವಾದ ಮೇಲೆ ಪರಿಸ್ಥಿತಿ ಊಹಿಸುವುದು ಕಷ್ಟ.ಜೊತೆಗೆ ಮಳೆಗಾಲವೂ ಆರಂಭವಾಗಲಿದ್ದು,ಅಷ್ಟರೊಳಗೆ ಬಿಬಿಎಂಪಿ ರಸ್ತೆಗುಂಡಿಗಳನ್ನು ಮುಚ್ಚಿ ನಾಗರೀಕರ ಸಮಸ್ಯೆಗಳನ್ನು ಪರಿಹರಿಸಬೇಕು.”
–ಜಯಂತಿ,ಶಿಕ್ಷಕಿ,ಶ್ರೀನಿವಾಸನಗರ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 − 4 =
Remember me
