ಧಾರವಾಡ:ಯಾವುದೇ ಕಾರ್ಯಕ್ರಮಕ್ಕೆ ಗಣ್ಯರು ಬರುತ್ತಾರೆ ಎಂದಾಗ ವಿಶೇಷವಾಗಿ ಸ್ವಾಗತಿಸಲು ತಯಾರಿ ನಡೆಸಲಾಗುತ್ತದೆ. ಅದರಲ್ಲೂ ನಮ್ಮ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಬರುತ್ತಿದ್ದಾರೆ ಎಂದಾಗ ವಿಭಿನ್ನವಾಗಿ ಸ್ವಾಗತಿಸಲು ಮುಂದಾಗುತ್ತೇವೆ. ಇದೀಗ ಸೆ. 26 ರಂದು ಧಾರವಾಡದ ಇಂಡಿಯನ್​​ ಇನ್ಸ್​​ಟಿಟ್ಯೂಟ್ ಆಫ್​​ ಇನ್​​​ಫಾರ್ಮೇಷನ್​​​ ಟೆಕ್ನಾಲಜಿಯನ್ನು ಉದ್ಘಾಟಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಿಮಿಸುತ್ತಿದ್ದಾರೆ. ಈ ವೇಳೆ ಇವರನ್ನು ಸ್ವಾಗತಿಸಲು ರೋಬಾಟ್​ ಸಿದ್ಧವಾಗಿದೆ.
ಧಾರವಾಡ ಹೊರವಲಯದಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ರೋಬಾಟ್ ಒಂದನ್ನು ಆವಿಷ್ಕರಿಸಿದ್ದಾರೆ. ಕ್ಯಾಂಪಸ್‌ಗೆ ಬರುವ ಗಣ್ಯರನ್ನು ಸ್ವಾಗತ ಮಾಡುವ ಜವಾಬ್ದಾರಿ ಈ ರೋಬಾಟ್​​ನದ್ದು. ಇದೀಗ ರಾಷ್ಟ್ರಪತಿಯವರನ್ನು ಸ್ವಾಗತಿಸುವ ಈ ರೋಬಾಟ್ ಮುಂದಾಗಿದೆ.
ಉದ್ಘಾಟನೆಯ ರಿಮೋಟನ್ನು ರೋಬಾಟ್​ ಬಂದು ರಾಷ್ಟ್ರಪತಿಯವರ ಕೈಗಿರಿಸಲು ಪ್ಲ್ಯಾನ್ ಮಾಡಲಾಗಿದೆ. ತಜ್ಞರು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ಅವಶ್ಯಕ ಡೇಟಾಗಳನ್ನು ಅಪ್ಲೋಡ್​​ ಮಾಡಿ ರೋಬಾಟ್​ಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದಾರೆ.
ಪ್ರಶ್ನೆಗಳನ್ನು ಕೇಳಿದಾಗ ಉತ್ತರಿಸುವಂತೆ ತಜ್ಞರು ರೋಬಾಟನ್ನು ಸಿದ್ಧಪಡಿಸಿದ್ದಾರೆ. ಇಲ್ಲಿ ನಡೆಯುವ ಇವೆಂಟ್​​ ಯಾವುದು? ಈ ಕಾರ್ಯಕ್ರಮಕ್ಕೆ ಯಾರೆಲ್ಲಾ ಬರಲಿದ್ದಾರೆ? ಭಾರತದ ಪ್ರಧಾನ ಮಂತ್ರಿ ಯಾರು? ಎಂದು ಪ್ರಶ್ನೆಗಳನ್ನು ಕೇಳಿದಾಗ ಸರಿಯಾದ ಉತ್ತರವನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ತಜ್ಞರು ಈ ರೋಬಾಟ್ ಮೂಲಕ ಅನೇಕ ಪ್ರಾಜೆಕ್ಟ್​​ಗಳನ್ನು ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
