ಚುನಾವಣೆ ಸಮೀಪಿಸುತ್ತಿದ್ದಂತೆಪಕ್ಷಾಂತರ ಭರಾಟೆ ಜೋರಾಗಿಯೇ ನಡೆಯುತ್ತದೆ. ಬಹುತೇಕ ಸ್ವಾರ್ಥ ಒಂದೇ ಕಾರಣವಾದರೂ ತೋರಿಕೆಗೆ ಎಲ್ಲರೂ ಹೇಳುವುದು ಸಿದ್ಧಾಂತ, ಜನಸೇವೆ ಮುಂತಾದ ರಂಗುರಂಗಿನ ಮಾತುಗಳನ್ನು. ವೈಯಕ್ತಿಕ ಪಕ್ಷಾಂತರ ಒಂದೆಡೆಯಾದರೆ, ಇಡೀ ಪಕ್ಷವೇ ಇನ್ನೊಂದು ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಇನ್ನೊಂದು.
ಒಂದು ರೀತಿಯಲ್ಲಿ ರಾಜಕೀಯ ಪಕ್ಷಗಳ ಒಗ್ಗೂಡುವಿಕೆ ಒಳ್ಳೆಯ ಬೆಳವಣಿಗೆಯೇ. ಏಕೆಂದರೆ ಇದರಿಂದ ಮತಗಳ ಹಂಚಿಹೋಗುವಿಕೆ ಕಡಿಮೆಯಾಗುತ್ತದೆ. ಆ ಮೂಲಕ ಬಹುಮತ ಪಡೆಯುವ ಅಭ್ಯರ್ಥಿ ಪಡೆಯುವ ಮತ ಇತರ ಅಭ್ಯರ್ಥಿಗಳು ಪಡೆದ ಮತಗಳಿಗಿಂತ ಹೆಚ್ಚಿರಲು ಅವಕಾಶವಾಗುತ್ತದೆ, ಹಾಗೂ ಅದು ನಿಜಾರ್ಥದಲ್ಲಿ ಪ್ರಾತಿನಿಧಿಕವಾಗಿರುತ್ತದೆ. ಆದರೆ ಅಂತಹ ಬೆಳವಣಿಗೆಗೆ ಕಾನೂನಿನ ಚೌಕಟ್ಟು ಇರಬೇಕು, ಏಕೆಂದರೆ ಜನಾದೇಶ ಆಗುವುದು ಪಕ್ಷ ಅಥವಾ ಪಕ್ಷಗಳ ಒಕ್ಕೂಟಕ್ಕೆ. ಅದು ಚುನಾವಣೆಯ ನಂತರವೂ ಮುಂದುವರಿಯಬೇಕಾದರೆ ಇಂತಹದೊಂದು ಕಠಿಣ ಕಾನೂನಿನ ಅಗತ್ಯವಿದೆ. ಇಲ್ಲವಾದಲ್ಲಿ ಚುನಾವಣೆ ನಂತರ ಯಾರ ವಿರುದ್ಧ ಸ್ಪರ್ಧಿಸಿದ್ದರೋ, ಜನರು ಯಾರನ್ನು ತಿರಸ್ಕರಿಸಿದ್ದರೋ ಅವರೊಂದಿಗೆ ಮೈತ್ರಿ(?) ಮಾಡಿಕೊಂಡು ಸರ್ಕಾರ ರಚಿಸಲು ಮುಂದಾಗುತ್ತಾರೆ.
ಕಳೆದ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಸಂಭವಿಸಿದ ಬೆಳವಣಿಗೆಗಳು ಇದಕ್ಕೆ ಸಾಕ್ಷಿ. ರಂಗೋಲಿ ಕೆಳಗೆ ತೂರುವ ಬುದ್ಧಿವಂತಿಕೆ ತೋರಿಸುವ ರಾಜಕಾರಣಿಗಳು ಪಕ್ಷಾಂತರ ನಿಷೇಧ ಕಾಯ್ದೆಯ ಸಣ್ಣಪುಟ್ಟ ಕಿಂಡಿಯ ಮೂಲಕ ಇಡೀ ಜನಾದೇಶವನ್ನೇ ತಿರುಚಲು ಯತ್ನಿಸುತ್ತಾರೆ. ಏಕ ಪಕ್ಷದ ಸರ್ಕಾರ ಆಳ್ವಿಕೆ ಮಾಡುವ ಅವಕಾಶಗಳು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಜನಾದೇಶವು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಪೂರಕವಾಗಿ ಇರಬೇಕಾದರೆ ಇಂತಹದೊಂದು ಕಾನೂನು ಅಗತ್ಯ.
| ಮೋಹನದಾಸ ಕಿಣಿ ಕಾಪು
ಏಳು ತಿಂಗಳ ಗರ್ಭಿಣಿ ಮಾಡೋ ಕೆಲಸನಾ ಇದು? ನಟಿ ಅಮಲಾ ಪೌಲ್​ಗೆ ನೆಟ್ಟಿಗರ ತರಾಟೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
