ಮೈಸೂರು: ನಂಜನಗೂಡಿನ ಜá-ಬಿಲೆಂಟ್ ಔಷಧ ಕಾರ್ಖಾನೆಯ ಕಾರ್ವಿುಕರಲ್ಲಿ ಹೇಗೆ ಸೋಂಕು ಹರಡಿದೆ ಎನ್ನುವುದು ಚಿದಂಬರ ರಹಸ್ಯವಾಗಿದ್ದು, ತನಿಖೆಯಿಂದ ಮಾತ್ರ ಉತ್ತರ ಸಿಗಬೇಕಾಗಿದೆ.
ಕಾರ್ಖಾನೆಯ ಕಾರ್ವಿುಕ, ರೋಗಿ ಸಂಖ್ಯೆ 52ನೇ ವ್ಯಕ್ತಿಗೆ ಮೊದಲು ಕರೊನಾ ವೈರಸ್ ದೃಢಪಟ್ಟಿತು. ಹೀಗಾಗಿ ವೈರಸ್ ಕಾಣಿಸಿಕೊಂಡ ಕಾರ್ಖಾನೆಯ ಪ್ರಥಮ ವ್ಯಕ್ತಿಯಿಂದ ಒಟ್ಟು 23 ಕಾರ್ವಿುಕರಲ್ಲಿ ಮತ್ತು ಕುಟುಂಬ ಸದಸ್ಯರಲ್ಲಿ ಸೋಂಕು ಕಂಡುಬಂದಿದೆ. ಈ ಪೈಕಿ ಕಾರ್ವಿುಕರ ಹೊರತಾಗಿ ಅನೇಕರಿಗೆ ವೈರಸ್ ಪಸರಿಸಿದಂತಾಗಿದೆ. ಹೀಗಾಗಿ ಇದು ಮೂರನೇ ಹಂತದ ಲಕ್ಷಣ ಎನ್ನುವ ಆತಂಕವೂ ಮನೆ ಮಾಡಿದೆ.
ಕಾರ್ಖಾನೆಯಲ್ಲಿ ಮೊದಲು ಕರೊನಾ ದೃಢಪಟ್ಟ ವ್ಯಕ್ತಿ ವಿದೇಶ ಪ್ರಯಾಣವನ್ನೂ ಮಾಡಿರಲಿಲ್ಲ. ಇತ್ತ ವಿದೇಶದಿಂದ ಬಂದವರ ಸಂಪರ್ಕದಲ್ಲೂ ಇರಲಿಲ್ಲ. ಹೀಗಿದ್ದರೂ, ವೈರಸ್ ಹೇಗೆ ಬಂತು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಕಾರ್ಖಾನೆಯ ಕಾರ್ವಿುಕರಲ್ಲಿ ಹೇಗೆ ಸೋಂಕು ಹರಡಿದೆ ಎನ್ನುವುದನ್ನು ತಿಳಿಯುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರಿಗೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಕೂಡ ಎಲ್ಲ ರೀತಿ ತನಿಖೆ ನಡೆಸುತ್ತಿದ್ದರೂ ಉತ್ತರ ಸಿಗದೆ ಇಡೀ ಪ್ರಕರಣ ಕಗ್ಗಂಟಾಗಿದೆ.
ಚೈನಾ ಕಂಟೈನರ್ ಮೇಲೆ ಅನುಮಾನ: ಚೈನಾ ಕಂಟೈನರ್​ನಿಂದ ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆಯ ನೌಕರರಿಗೆ ಸೋಂಕು ತಗುಲಿರುವ ಸಾಧ್ಯತೆ ಇರಬಹುದಾ? ಎಂಬ ಅನುಮಾನ ಮೂಡಿದೆ. ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ಜಿಲ್ಲಾಧಿಕಾರಿ ಅನುಮಾನ ಹೊರ ಹಾಕಿದ್ದಾರೆ. ಅಂತೆಯೇ, ಈ ಬಗ್ಗೆ ಕಂಟೈನರ್ ಸ್ಯಾಂಪಲ್ ತೆಗೆದುಕೊಂಡು ಅದನ್ನು ಲ್ಯಾಬ್​ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ. ಕಾರ್ಖಾನೆಯಲ್ಲಿ ಸಾವಿರಕ್ಕೂ ಹೆಚ್ಚು ಕಾರ್ವಿುಕರಿದ್ದು, ಎಲ್ಲರನ್ನೂ ಕ್ವಾರಂಟೈನ್​ನಲ್ಲಿಡಲಾಗಿದೆ. ಈಗಾಗಲೇ 23 ಕಾರ್ವಿುಕರಲ್ಲಿ ಸೋಂಕು ದೃಢಪಟ್ಟಿದ್ದು, ಇದು ಇನ್ನೆಷ್ಟು ಜನರಿಗೆ ಕಾಣಿಸಿಕೊಂಡೀತೋ ಎಂಬ ತಲೆನೋವು ಜಿಲ್ಲಾಡಳಿತವನ್ನು ಕಾಡುತ್ತಿದೆ.
ಮೈಸೂರಲ್ಲಿ ಸೋಂಕಿತರು 35
ಮೈಸೂರು ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ಏಳು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 35ರ ಗಡಿ ಮುಟ್ಟಿದ್ದು, ಇನ್ನಷ್ಟು ಏರಿಕೆಯಾಗಲಿದೆಯೇ ಎನ್ನುವ ಆತಂಕ ಮನೆ ಮಾಡಿದೆ. ಸೋಮವಾರ ಹೊಸದಾಗಿ ಕಾಣಿಸಿಕೊಂಡ 7 ಸೋಕಿಂತರ ಪೈಕಿ ದೆಹಲಿ ಪ್ರವಾಸ ಹಿನ್ನೆಲೆ ಹೊಂದಿರುವ ಮೂವರಿಗೆ ಸೋಂಕು ತಗುಲಿರುವುದು ಕಂಡುಬಂದಿದೆ. ಆದರೆ ಇವರು ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡವರಲ್ಲ ಎಂದು ಡಿಸಿ ಹೇಳಿದ್ದಾರೆ. ಜತೆಗೆ, ಜುಬಿಲೆಂಟ್ ಕಾರ್ಖಾನೆಯ ಮತ್ತಿಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ದುಬೈ ಪ್ರವಾಸ ಹಿನ್ನೆಲೆ ಹೊಂದಿರುವ ಮತ್ತೊಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನೊಬ್ಬರಿಗೆ ಮೈಸೂರಿನ ಎರಡನೇ ಸೋಂಕಿತರಿಂದ ಕರೊನಾ ವೈರಸ್ ತಗುಲಿದೆ.
ಮೊದಲ ಸೋಂಕಿತ ರಿಲೀಸ್?
ಜಿಲ್ಲೆಯ ಕರೊನಾ ಸೋಂಕಿತ ಮೊದಲ ಪ್ರಕರಣದ ವ್ಯಕ್ತಿ ಗುಣಮá-ಖನಾಗಿದ್ದು, ಆತನನ್ನು ಆಸ್ಪತ್ರೆಯಿಂದ ಬಿಡá-ಗಡೆ ಮಾಡಲಾಗಿದೆ ಎಂಬ ವದಂತಿ ವೈರಲ್ ಆಗಿದೆ. ಆದರೆ, ಈ ಬಗ್ಗೆ ಜಿಲ್ಲಾಧಿಕಾರಿ ಅವರಿಂದ ಯಾವುದೇ ಸ್ಪಷ್ಟನೆ ದೊರೆತಿಲ್ಲ.
ರಾಜ್ಯಾದ್ಯಂತ ಸಿಟ್ರೋಶಿಲ್ ಸಾವಯವ ಹಾಗೂ ನವತಂತ್ರಜ್ಞಾನದ ಆಧಾರಿತ ಕರೊನಾ ಸೋಂಕು ನಿವಾರಕ ದ್ವಾರದ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ದೆಹಲಿಯ ಜಮಾತ್ ಸಮಾವೇಶ ಮತ್ತು ಮೈಸೂರಿನ ನಂಜನಗೂಡು ಖಾಸಗಿ ಕಾರ್ಖಾನೆ ಪ್ರಕರಣಗಳು ಸಂಭವಿಸದಿದ್ದರೆ ಕರೊನಾ ಸಮರದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತಿತ್ತು. ಆದರೆ, ಇವು ಆತಂಕವನ್ನು ಹೆಚ್ಚಿಸಿವೆ.
| ಎಸ್.ಸುರೇಶ್​ಕುಮಾರ್ ಸಚಿವ
https://www.vijayavani.net/covid-19-at-the-door-step-of-maha-cm-uddhav-thackeray/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
