ಬೆಂಗಳೂರು:ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ಎಲ್ಲ ಪೌರಕಾರ್ವಿುಕರ ಕಾಯಂ ನೇಮಕಾತಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸುವ ಮೂಲಕ ಪೌರಕಾರ್ವಿುಕರ ದಿನದ ಉಡುಗೊರೆ ನೀಡಲು ಮುಂದಾಗಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಬೊಮ್ಮಾಯಿ, ಪೌರಕಾರ್ವಿುಕರಿಗೆ ಸಂಬಂಧಿಸಿದಂತೆ ಐಡಿಪಿ ಸಾಲಪ್ಪ ವರದಿ ಅನುಷ್ಠಾನಕ್ಕೆ ಸರ್ಕಾರ ಬದ್ಧ ಎಂದಿದ್ದಾರೆ. ಕಳೆದ ಸಂಪುಟ ಸಭೆಯಲ್ಲಿ 11 ಸಾವಿರ ಪೌರಕಾರ್ವಿುಕರ ಸೇವೆ ಕಾಯಂಗೆ ತೀರ್ವನಿಸಲಾಗಿತ್ತು. ಇನ್ನೂ 43 ಸಾವಿರ ಜನರು ಬಾಕಿ ಇದ್ದು, ಅವರ ಸೇವೆ ಕಾಯಮಾತಿಗೂ ಒತ್ತಾಯ ಕೇಳಿ ಬಂದಿದೆ.
ನೇರ ಪಾವತಿ ವ್ಯವಸ್ಥೆ:ಕಾಯಂ ಆಗಿರುವ ಪೌರಕಾರ್ವಿುಕರಿಗೆ 18 ಸಾವಿರ ರೂ. ವೇತನವಿದ್ದರೆ, ಹೊರಗುತ್ತಿಗೆಯವರಿಗೆ ಶೇ.5 ಜಿಎಸ್​ಟಿ ಹಾಗೂ ಇತರೆ ಕಡಿತಗಳ ಬಳಿಕ 12 ರಿಂದ 13 ಸಾವಿರ ರೂ. ಸಿಗುತ್ತಿದೆ. ಅವರನ್ನು ಮೊದಲಿಗೆ ನೇರ ಪಾವತಿ ವ್ಯವಸ್ಥೆಗೆ ತಂದು ಹಂತ ಹಂತವಾಗಿ ಕಾಯಂ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.
54 ಸಾವಿರ ಸಿಬ್ಬಂದಿ:ಗುತ್ತಿಗೆ ಆಧಾರದ ಕಾರ್ವಿುಕರು ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಸರ್ಕಾರ ಹಂತ ಹಂತವಾಗಿ ಅವರನ್ನು ಕಾಯಂ ಮಾಡುವ ಭರವಸೆ ನೀಡಿತ್ತು. ಒಟ್ಟಾರೆ ಇಂತಹ 54 ಸಾವಿರ ಪೌರ ಕಾರ್ವಿುಕರಿದ್ದು, ಸಂಪುಟದಲ್ಲಿ 11 ಸಾವಿರ ಜನರನ್ನು ಕಾಯಂ ಮಾಡಲು ನಿರ್ಧರಿಸಲಾಗಿತ್ತು. ಉಳಿದ 43 ಸಾವಿರ ಜನರನ್ನು ಕಾಯಂ ಮಾಡಲು ಸರ್ಕಾರ ಮುಂದಾಗಿದೆ. ಇದಲ್ಲದೆ, ಕಸ ಸಾಗಣೆ ವಾಹನಗಳ ಚಾಲಕರು ಮತ್ತು ಕ್ಲೀನರ್​ಗಳನ್ನು ಸಹ ಕಾಯಂ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಆರೋಗ್ಯ ಬಯಸುವವರಿಗೆ ಇದು ‘ಕಿವಿ’ಮಾತು: 10 ಬಹೂಪಯೋಗಿ ಅಂಶಗಳು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 3 =
Remember me
