ಚನ್ನಪಟ್ಟಣ:ರೇಷ್ಮೆನಗರಿ ಎಂದೇ ಪ್ರಸಿದ್ಧಿಯಾಗಿರುವ ರಾಮನಗರ ಜಿಲ್ಲೆಯಲ್ಲೀಗ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೇಷ್ಮೆ ಗೂಡಿನ ಬೆಲೆ ಪಾತಾಳಕ್ಕೆ ಕುಸಿದಿದ್ದು, ಬೇಸತ್ತ ರೈತರೊಬ್ಬರು ಹಿಪ್ಪುನೇರಳೆ ತೋಟವನ್ನೇ ನಾಶ ಮಾಡಿದ್ದಾರೆ.
ರೇಷ್ಮೆ ಬೆಳೆಯಿಂದ ಬದುಕು ಕಟ್ಟಿಕೊಳ್ಳುವ ಕನಸು ಕಟ್ಟಿಕೊಂಡಿದ್ದ ಚನ್ನಪಟ್ಟಣ ತಾಲೂಕಿನ ಆಂಕುಶನಹಳ್ಳಿಯ ಯುವರೈತ ಸುರೇಶ್, ನಾಲ್ಕು ಎಕರೆ ಜಮೀನಿನಲ್ಲಿ ಹಿಪ್ಪು ನೇರಳೆ ಬೆಳೆದಿದ್ದರು. ಆದರೆ, ಕಳೆದ 4 ಬೆಳೆಗಳು ನಿರಂತರವಾಗಿ ನಷ್ಟವಾಗಿವೆ. ಮನನೊಂದ ರೈತನು ಟ್ರ್ಯಾಕ್ಟರ್​ ಮೂಲಕ ಖುದ್ದು ತಾನೇ ಬೆಳೆಸಿದ ಹಿಪ್ಪುನೇರಳೆ ಬೆಳೆಯನ್ನು ನೆಲಸಮ ಮಾಡುತ್ತಿದ್ದಾರೆ.
ಇದನ್ನೂ ಓದಿರೇಷ್ಮೆ ಬೆಳೆಗಾರರು ಕಾದರೂ ಬಾರದ ಡಿಸಿಎಂ
ಮಂಗಳವಾರ 2 ಎಕರೆ ಹಿಪ್ಪುನೇರಳೆ ಬೆಳೆ ನಾಶ ಮಾಡಿದ ಸುರೇಶ್​, ಬುಧವಾರ ಉಳಿದ 2 ಎಕರೆ ಬೆಳೆ ಕಿತ್ತುಹಾಕಲು ಸಿದ್ಧರಾಗಿದ್ದಾರೆ. ಪ್ರತಿ ಬೆಳೆಗೆ 20 ಸಾವಿರ ರೂ.ನಂತೆ ಒಟ್ಟು 80 ಸಾವಿರ ರೂ. ನಷ್ಟವಾಗಿದೆ. ಮನೆಮಂದಿಯಲ್ಲ ಕಷ್ಟಪಟ್ಟು ಬೆಳೆದ ಬೆಳೆ ಲಾಭ ತರುತ್ತಿಲ್ಲ. ಕರೊನಾ ಲಾಕ್‍ಡೌನ್ ಮುಂದುವರಿದರೆ ರೇಷ್ಮೆ ಬೆಲೆ ಇನ್ನಷ್ಟು ಕುಸಿಯಲಿದೆ. ಇದರ ಸಹವಾಸವೇ ಬೇಡ ಎಂದು ಬೆಳೆ ನಾಶ ಮಾಡುತ್ತಿದ್ದೇನೆ ಎಂದು ಸುರೇಶ್​ ಅಳಲು ತೋಡಿಕೊಂಡರು.
ರೇಷ್ಮೆ ಅಲ್ಲದೆ ಬಾಳೆ, ಮಾವು ಬೆಳೆಯಲ್ಲೂ ತೀವ್ರ ಆರ್ಥಿಕ ನಷ್ಟ ಅನುಭವಿಸಿದ್ದೇನೆ. ಕಷ್ಟಪಟ್ಟು ಬೆಳೆದ ಬೆಳೆ ನಾಶಪಡಿಸುವಾಗ ಹೊಟ್ಟೆಗೆ ಬೆಂಕಿ ಬಿಂದತಾಗುತ್ತದೆ. ಆದರೂ ವಿಧಿಯಿಲ್ಲ. ಬ್ಯಾಂಕ್‍ನಲ್ಲಿ 7 ಲಕ್ಷ ರೂ. ಸಾಲ ಇದೆ ಎಂದರು.
ಇದನ್ನೂ ಓದಿಗುರುಗ್ರಾಮ್​ನಲ್ಲಿ ಮದುವೆ, ಬೆಂಗಳೂರಿಂದ ವಿಡಿಯೋ ಕಾಲ್​ನಲ್ಲೇ ಸೊಸೆಯನ್ನು ಮನೆ ತುಂಬಿಸಿಕೊಂಡ ಅತ್ತೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + twelve =
Remember me
