ಬೆಂಗಳೂರು:ಬ್ಯಾಟರಾಯನಪುರ ವಾರ್ಡ್​ನ ಕೆಂಪಾಪುರದಲ್ಲಿ ವಾಲಿಕೊಂಡ ಬಹುಮಹಡಿ ಕಟ್ಟಡ ತೆರವಿಗೆ 10 ದಿನ ಬೇಕು ಎಂದು ಪಾಲಿಕೆಯ ಯಲಹಂಕ ವಲಯದ ಜಂಟಿ ಆಯುಕ್ತರು ತಿಳಿಸಿದ್ದಾರೆ. ಕಟ್ಟಡ ತೆರವು ವಿಳಂಬವಾಗುತ್ತಿರುವುದರಿಂದ ಅಕ್ಕಪಕ್ಕದ ಮನೆಗಳ ಕುಟುಂಬಗಳು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಕೆಂಪಾಪುರದಲ್ಲಿ ಗುರುವಾರ (ಫೆ. 6) ವಾಲಿಕೊಂಡಿರುವ ಕಟ್ಟಡವನ್ನು ಪಾಲಿಕೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನಿಂದ ತೆರವು ಮಾಡಲಾಗುತ್ತಿದೆ. ಈ ಕೆಲಸ ಪೂರ್ಣಗೊಳ್ಳು ವವರೆಗೂ ಸುತ್ತಲಿನ ಕುಟುಂಬದವರನ್ನು ತಮ್ಮ ಮನೆಗಳಿಗೆ ಹೋಗುವುದಕ್ಕೆ ಪೊಲೀಸರು ನಿರ್ಬಂಧಿಸಿದ್ದಾರೆ. ಇದರಿಂದ ಅವರೆಲ್ಲ ಬೇರೆಡೆ ವಾಸ ಮಾಡುವ ಅನಿವಾರ್ಯತೆ ಎದುರಾಗಿದೆ.
ಕಾಳಜಿ ಕೇಂದ್ರದಲ್ಲಿ ಜನರಿಲ್ಲ:ಕಟ್ಟಡ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸುತ್ತಲಿನ ಮನೆಗಳ ಜನರಿಗೆ ಪಾಲಿಕೆಯಿಂದ ಕಾಳಜಿ ಕೇಂದ್ರ ಆರಂಭಿಸಲಾಗಿತ್ತು. ಮೊದಲ ದಿನ ಪಕ್ಕದ ಶಾಲೆಯಲ್ಲಿ 150 ಜನರಿಗೆ ಆಹಾರ ಹಾಗೂ ವಸತಿ ವ್ಯಸಸ್ಥೆ ಮಾಡಲಾಗಿತ್ತು. ಆದರೆ ಸಂತ್ರಸ್ತ ಕುಟುಂಬಗಳು ನೆರವು ಕೇಂದ್ರದಲ್ಲಿರದೆ ಸಂಬಂಧಿಕರ ಮನೆಗಳಿಗೆ ಹಾಗೂ ಊರುಗಳಿಗೆ ಹೋಗಿದ್ದಾರೆ. ಇದರಿಂದ ಕೇಂದ್ರವಿದ್ದರೂ ಅತ್ತ ಯಾರೊಬ್ಬರೂ ಸುಳಿಯುತ್ತಿಲ್ಲ.
ವಿದ್ಯಾರ್ಥಿಗಳಿಗೆ ತೊಂದರೆ:ಶೈಕ್ಷಣಿಕ ವರ್ಷದ ಕೊನೆಯ ಅವಧಿಯಾಗಿದ್ದು, ಮಾರ್ಚ್​ನಲ್ಲಿ ಪರೀಕ್ಷೆ ಆರಂಭವಾಗುತ್ತದೆ. ಹೀಗಾಗಿ ಶಾಲಾ- ಕಾಲೇಜುಗಳಲ್ಲಿ ವಿಶೇಷ ತರಗತಿಗಳು ನಡೆಯುತ್ತಿವೆ. ಆದರೆ ವಿದ್ಯಾರ್ಥಿಗಳು ಬೇರೆಡೆ ತೆರಳಿರುವ ಕಾರಣ ಶಾಲಾ-ಕಾಲೇಜುಗಳಿಗೆ ಗೈರಾಗುತ್ತಿದ್ದಾರೆ.
ನಾನು ಮನೆ ಕಟ್ಟಿಸಿಲ್ಲ, ಬೇರೊಬ್ಬರು ಕಟ್ಟಿದ್ದನ್ನು ಖರೀದಿಸಿದ್ದೇನೆ. ಬ್ಯಾಂಕ್​ನಲ್ಲಿ ಇದಕ್ಕಾಗಿ ಸಾಲ ಮಾಡಿದ್ದೇನೆ ಎಂದು ಈಗಿನ ಮನೆ ಮಾಲೀಕರು ತಿಳಿಸಿದ್ದಾರೆ. ದಂಡ ವಿಧಿಸುವುದು ಸೇರಿ ಇನ್ನಿತರೆ ವಿಚಾರಗಳ ಬಗ್ಗೆ ಮುಂದೆ ಚರ್ಚೆ ನಡೆಸಲಾಗುತ್ತದೆ. ಪಕ್ಕದ ಕಟ್ಟಡಗಳಿಗೆ ತೊಂದರೆಯಾಗದಂತೆ ತೆರವುಗೊಳಿಸಬೇಕಿದೆ. ಹಾಗಾಗಿ ಹೆಚ್ಚು ಸಮಯ ತಗಲುತ್ತದೆ. ಸದ್ಯ ಬಿಬಿಎಂಪಿ ವತಿಯಿಂದಲೇ ತೆರವು ಮಾಡಲಾಗುತ್ತಿದೆ.
| ಎಂ. ಗೌತಮ್ುಮಾರ್ ಮೇಯರ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 5 =
Remember me
