ಶಿವಮೊಗ್ಗ:ವಿದ್ಯಾನಗರದ ಐದನೇ ತಿರುವಿನ ಸುಭಾಷ್‌ನಗರದಲ್ಲಿ ಶನಿವಾರ ತಡರಾತ್ರಿ ಕುಡಿದ ಮತ್ತಿನಲ್ಲಿದ್ದ ಸೋದರ ಮಾವ ಅಳಿಯನನ್ನು ತಳ್ಳಿದ್ದಾನೆ. ಮನೆ ಮುಂದಿನ ಚರಂಡಿಯಲ್ಲಿ ಬಿದ್ದು ಅಳಿಯನ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಕಿಟ್ಟಿ ಪಾರ್ಟಿ ಹೆಸರಿನಲ್ಲಿ ಜೂಜು; ರಮ್ಮಿ ಆಡುತ್ತಿದ್ದ 13 ಮಂದಿ ಮಮ್ಮಿಗಳು ಅರೆಸ್ಟ್​​
ಸುಭಾಷ್‌ನಗರದ ಜ್ಞಾನೇಶ್ವರ್ (43) ಮೃತ ವ್ಯಕ್ತಿ. ಈತನ ಸೋದರಮಾವ, ಚನ್ನಗಿರಿಯ ನಿವಾಸಿ ನಾಗರಾಜ್ ಎಂಬುವರು ತಳ್ಳಿದ್ದು ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಭೀಕರ ಅಪಘಾತ; ವಾಹನ ಗುದ್ದಿದ ರಭಸಕ್ಕೆ ರಸ್ತೆಗೆ ಹಾರಿ ಬಿತ್ತು ಸ್ಕೂಟಿ ಸವಾರನ ಕಣ್ಣು ಗುಡ್ಡೆ…
ಜ್ಞಾನೇಶ್ವರ್ ಪತ್ನಿ ಇಂದುಮತಿ ಅವರ ತಾಯಿ ಮನೆಯಲ್ಲೇ ನೆಲೆಸಿದ್ದರು. ನಾಗರಾಜ್ ಅವರು ಪದೇ ಪದೇ ಬಂದು ಅಕ್ಕನ ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಜಗಳ ಮಾಡುತ್ತಿದ್ದ.
ಇದನ್ನೂ ಓದಿ:ತಮ್ಮನ ಸಾವಿನಿಂದ ಮನನೊಂದ ಯುವತಿ ನೀರಿನ ಟ್ಯಾಂಕ್​ಗೆ ಹಾರಿ ಪ್ರಾಣ ಬಿಟ್ಟಳು
ಶನಿವಾರ ತಡರಾತ್ರಿಯೂ ಬಂದಿದ್ದ ನಾಗರಾಜ್ ಏಕಾಏಕಿ ಜ್ಞಾನೇಶ್ವರ್ ಮೇಲೆ ಹಲ್ಲೆ ಮಾಡಿದ್ದಾನೆ. ಆನಂತರ ಆಸ್ತಿ ವಿಚಾರದಲ್ಲಿ ಇಬ್ಬರ ನಡುವೆಯೂ ವಾಗ್ವಾದ ನಡೆದಿದೆ. ಈ ವೇಳೆ ನಾಗರಾಜ್ ಜೋರಾಗಿ ದೂಡಿದ್ದರಿಂದ ಜ್ಞಾನೇಶ್ವರ್ ಅವರು ಮನೆ ಎದುರಿನ ಚರಂಡಿಗೆ ಬಿದ್ದಿದ್ದಾರೆ. ತಲೆಗೆ ಗಂಭೀರ ಪೆಟ್ಟು ಬಿದ್ದು ಅಲ್ಲೇ ಮೃತಪಟ್ಟಿದ್ದಾರೆ. ಜ್ಞಾನೇಶ್ವರ್ ಅವರ ಅತ್ತೆ ಮನೆಯಲ್ಲಿ ಗಲಾಟೆ ಆಗಿದೆ. ಜ್ಞಾನೇಶ್ವರ್ ರಸ್ತೆ ಬದಿ ಮೇಲೆ ಬ್ಯಾಗ್ ರಿಪೇರಿ ಮಾಡಿ ಜೀವನ ನಡೆಸುತ್ತಿದ್ದರು.
VIDEO| ಸ್ಕೈಡೈವಿಂಗ್ ವೇಳೆ ರೋಮಾಂಚನಕಾರಿ ಮದುವೆ.. ಈ ವಿವಾಹಕ್ಕೆ ಹೋಗೋಕೆ ಧೈರ್ಯ ಬೇಕು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
