| ಕೀರ್ತಿನಾರಾಯಣ ಸಿ. ಬೆಂಗಳೂರು
ರಾಜ್ಯ ರಾಜಕೀಯದ ಜತೆಗೆ ಪೊಲೀಸ್ ವಲಯದಲ್ಲೂ ತಲ್ಲಣ ಮೂಡಿಸಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಕೈವಾಡದ ಬಿಟ್ ಕಾಯಿನ್ ಹಗರಣ ಬಿರುಬೇಸಿಗೆಯಲ್ಲೂ ತಣ್ಣಗಾಗಿದೆ. ಸಿಐಡಿ ವಿಶೇಷ ತನಿಖಾ ತಂಡದ (ಎಸ್​ಐಟಿ) ತನಿಖಾಧಿಕಾರಿಗಳೆಲ್ಲ ಚುನಾವಣಾ ಕರ್ತ ವ್ಯಕ್ಕೆ ನಿಯೋಜನೆ ಗೊಂಡಿದ್ದರಿಂದ ತನಿಖೆ ನಿಧಾನಗೊಂಡಿದೆ.
ಸಾಕ್ಷ್ಯ ನಾಶ ಪಡಿಸಿದ ಪ್ರಮುಖ ಆರೋಪಿ ಡಿವೈಎಸ್ಪಿ ಶ್ರೀಧರ್ ಪೂಜಾರ ತಲೆಮರೆಸಿಕೊಂಡಿದ್ದಾರೆ. ಫೆ.27ರಂದು ಬಂಧಿಸಲು ಹೋಗಿದ್ದ ಎಸ್​ಐಟಿಯ ಇಬ್ಬರು ಅಧಿಕಾರಿಗಳಿಗೆ ಕಾರು ಗುದ್ದಿಸಿ ಅವರ ಕೊಲೆಗೆ ಯತ್ನಿಸಿ ಶ್ರೀಧರ್ ಪೂಜಾರ ಪರಾರಿಯಾಗಿದ್ದಾರೆ. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಶ್ರೀಧರ್ ಪೂಜಾರ ಎಸಿಎಂಎಂ ಕೋರ್ಟ್​ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.
ವಿಳಂಬಕ್ಕೆ ಕಾರಣವೇನು?:ಶ್ರೀಕೃಷ್ಣ, ಬಿಟ್ ಕಾಯಿನ್ ವಿನಿಮಯ ಕಂಪನಿಗಳ ವೆಬ್​ಸೈಟ್ ಹ್ಯಾಕ್ ಮಾಡಿರುವುದು ಗೊತ್ತಾಗಿದೆ. ಆದರೆ, ಹ್ಯಾಕ್ ಮಾಡಿ ಕದ್ದ ಬಿಟ್ ಕಾಯಿನ್​ಗಳನ್ನು ಹೇಗೆ? ಯಾವ್ಯಾವ ವ್ಯಾಲೆಟ್​ಗಳಿಗೆ ವರ್ಗಾವಣೆಯಾಗಿದೆ ಎಂಬುದರ ಮಾಹಿತಿ ಸಿಕ್ಕಿಲ್ಲ. ಹ್ಯಾಕ್ ಮಾಡಿದ ಬಿಟ್ ಕಾಯಿನ್​ಗಳನ್ನು ನಗದು ರೂಪದಲ್ಲಿ ಸ್ಥಳೀಯ ಬ್ಯಾಂಕ್​ಗಳಿಂದ ಡ್ರಾ ಮಾಡಿರುವುದು ಎಸ್​ಐಟಿ ತನಿಖೆಯಲ್ಲಿ ಗೊತ್ತಾಗಿದೆ. ಆದರೆ,ಆನ್​ಲೈನ್ ವೇದಿಕೆಯಲ್ಲಿ ನಡೆದಿರುವ ಬಿಟ್ ವ್ಯವಹಾರದ ಸ್ಪಷ್ಟ ಮಾಹಿತಿ ಎಸ್​ಐಟಿಗೆ ಸಿಗದಿರುವುದು ತನಿಖೆ ವಿಳಂಬಕ್ಕೆ ಕಾರಣ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾವಿರಾರು ಕೋಟಿ ವ್ಯವಹಾರ:2020 ನ.18ರಂದು ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಹ್ಯಾಕರ್ ಶ್ರೀಕಿ ಬಂಧಿಸಲಾಗಿತ್ತು. ವ್ಯಾಲೆಟ್​ನಲ್ಲಿದ್ದ ಬಿಟ್ ಕಾಯಿನ್​ಗಳನ್ನು ಬಲವಂತವಾಗಿ ಬೇರೆಬೇರೆ ವ್ಯಾಲೆಟ್​ಗಳಿಗೆ ವರ್ಗಾವಣೆ ಮಾಡಿಸಿ, ನಂತರ ಅಲ್ಲಿಂದ ಬಿಟ್ ಕಾಯಿನ್ ಟ್ರೇಡಿಂಗ್ ಎಕ್ಸ್​ಚೇಂಜ್​ಗೆ ಟ್ರಾನ್ಸ್​ಫರ್ ಮಾಡಲಾಗಿದೆ. ಸಾವಿರಾರು ಕೋಟಿ ಮೌಲ್ಯದ ಬಿಟ್ ಕಾಯಿನ್ ವರ್ಗಾವಣೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಟ್ ಕಾಯಿನ್ ವರ್ಗಾವಣೆಯ ಡಿಜಿಟಲ್ ಸಾಕ್ಷ್ಯವನ್ನು ಬಂಧಿತ ಪೊಲೀಸ್ ಅಧಿಕಾರಿಗಳು ನಾಶಪಡಿಸಿದ್ದಾರೆ.
.2023ರ ಜು.3ಕ್ಕೆ ಎಸ್​ಐಟಿ ತಂಡ ರಚನೆ
.10 ತಿಂಗಳಾದರೂ ರ್ತಾಕ ಅಂತ್ಯ ಕಂಡಿಲ್ಲ
.ಎಸ್​ಐಟಿ ಮೂರು ಅಧಿಕಾರಿಗಳನ್ನು ಬಂಧಿಸಿದೆ
.ಈ ಪೈಕಿ ಇಬ್ಬರು ಇನ್​ಸ್ಪೆಕ್ಟರ್​ಗಳಾಗಿದ್ದಾರೆ
.ಡಿ.ಎಂ.ಪ್ರಶಾಂತ್, ಲಕ್ಷ್ಮೀಕಾಂತಯ್ಯ ಅರೆಸ್ಟ್
.ಖಾಸಗಿ ಸೈಬರ್ ತಜ್ಞ ಸಂತೋಷ್ ಕೂಡ ಸೆರೆ
.ಶ್ರೀಕಿ ಸ್ನೇಹಿತ ರಾಬಿಲ್ ಖಂಡೆಲ್​ವಾಲಾ ಬಂಧನ
.ಇದನ್ನು ಬಿಟ್ಟರೆ ಬೇರೆ ಯಾರೂ ಸೆರೆಸಿಕ್ಕಿಲ್ಲ
.ಚುನಾವಣಾ ಕರ್ತವ್ಯದಿಂದ ವಾಪಸಾದ ಬಳಿಕ ಎಸ್​ಐಟಿ ಅಧಿಕಾರಿಗಳಿಂದ ತನಿಖೆಗೆ ವೇಗ
.ಎಫ್​ಐಆರ್ ದಾಖಲಾದ 90 ದಿನದಲ್ಲಿ ಚಾರ್ಜ್​ಶೀಟ್ ಸಲ್ಲಿಸ ಬೇಕಾದ್ದರಿಂದ ಶೀಘ್ರ ಸಲ್ಲಿಕೆ
.ಹಗರಣದ ಸಂಬಂಧ ಹಿರಿಯ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ಮತ್ತೆ ವಿಚಾರಣೆ ಸಾಧ್ಯತೆ
.ಅಧಿಕಾರಿಗಳ ಬಂಧನವಾದರೂ ಲಾಭ ಪಡೆದವರ ಗುರುತು ಪತ್ತೆ ಹಚ್ಚಿಲ್ಲ
.ಹಿರಿಯ ಐಪಿಎಸ್ ಅಧಿಕಾರಿ ವಿಚಾರಣೆ ನಡೆಸಿದ ಹೇಳಿಕೆ ದಾಖಲು
.ಕೆಲ ರಾಜಕಾರಣಿಗಳು, ಅವರ ಮಕ್ಕಳು ಹಗರಣದಲ್ಲಿ ಭಾಗಿ ಆಗಿರುವ ಶಂಕೆ
.ಆದರೂ ರಾಜಕಾರಣಿಗಳು, ಮಕ್ಕಳ ವಿಚಾರಣೆಯನ್ನು ನಡೆಸಿಲ್ಲ
.ಆರೋಪಿತ ಅಧಿಕಾರಿಗಳ ಆಸ್ತಿ ವಿವರವನ್ನು ಸಂಗ್ರಹಿಸಲಾಗಿದೆ
.ಹಗರಣಕ್ಕೂ ಮುಂಚೆ ಮತ್ತು ಹಗರಣದ ಬಳಿಕ ಆಸ್ತಿ ಮಾಹಿತಿ ಸಂಗ್ರಹ
ಕಾಂಗ್ರೆಸ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಪ್ರಚಾರದಲ್ಲಿ ಭಾಗವಹಿಸದಂತೆ ಮಾಜಿ ಸಿಎಂ ಕೆಸಿಆರ್​ಗೆ ನಿಷೇಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + two =
Remember me
