ಬೆಂಗಳೂರು:ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿದಂತೆ 50 ಐಪಿಎಸ್ ಅಧಿಕಾರಿಗಳಿಗೆ ಶನಿವಾರ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಕೆಲವು ಹಿರಿಯ ಅಧಿಕಾರಿಗಳನ್ನು ವರ್ಗಾಯಿಸಿದೆ.
ರಾಜ್ಯ ಅಗ್ನಿ ಶಾಮಕ ದಳ ಮತ್ತು ತುರ್ತು ಸೇವೆಗಳ ಡಿಜಿಪಿ ಡಾ.ಅಮರ್ ಕುಮಾರ್ ಪಾಂಡೆ ಅವರ ನಿವೃತ್ತಿಯಿಂದ ತೆರವಾದ ಡಿಜಿಪಿ ಹುದ್ದೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿಗೆ ಬಡ್ತಿ ನೀಡಿದ ಸರ್ಕಾರ, ಪೊಲೀಸ್ ಆಯುಕ್ತ ಹುದ್ದೆಯನ್ನು ಪದ್ನೋತಿಗೊಳಿಸಿ ಪ್ರತಾಪ್ ರೆಡ್ಡಿರನ್ನು ಮುಂದುವರಿಸಿದೆ.
ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಮೋಹನ್ ಅವರನ್ನು ಅಗ್ನಿ ಶಾಮಕ ದಳದ ಡಿಜಿಪಿ ಸ್ಥಾನಕ್ಕೆ ವರ್ಗಾಯಿಸಿದೆ. ಅದೇ ರೀತಿ ಬೆಂಗಳೂರು ನಗರ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಸೇರಿದಂತೆ 28 ಎಸ್‌ಪಿ ದರ್ಜೆ ಅಧಿಕಾರಿಗಳಿಗೆ ಆಡಳಿತಾತ್ಮಕ ಹಿರಿತನ ಲಭ್ಯವಾಗಿದೆ.
ಎಡಿಜಿಪಿ ದರ್ಜೆಗೆ ಬಡ್ತಿಮನೀಶ್ ಕರ್ಬೀಕರ್- ಕಾರಾಗೃಹ ಇಲಾಖೆ, ಸೌಮೆಂದು ಮುಖರ್ಜಿ- ಲ್ಯಾಜಿಸ್ಟಿಕ್ ಮತ್ತು ಕಂಪ್ಯೂಟರ್ ವಿಭಾಗ, ಕೇಂದ್ರ ಸೇವೆಯಲ್ಲಿರುವ ಪಕಂಜ್ ಕುಮಾರ್ ಠಾಕೂರ್.
ಐಜಿಪಿ ದರ್ಜೆಗೆಎಂ. ಚಂದ್ರಶೇಖರ್-ಹೆಚ್ಚುವರಿ ಆಯುಕ್ತ (ಪೂರ್ವ ವಿಭಾಗ ) ಬೆಂಗಳೂರು, ಎನ್.ಸತೀಶ್ ಕುಮಾರ್ – ಈಶಾನ್ಯ ವಲಯ,
ಐಜಿಪಿ ಹುದ್ದೆಗೆರಮಣಗುಪ್ತ- ಉತ್ತರ ವಲಯ, ಡಾ.ಬಿ.ಆರ್. ರವಿಕಾಂತೇಗೌಡ- ಕೇಂದ್ರ ವಲಯ, ಎಸ್.ಎನ್. ಸಿದ್ದರಾಮಪ್ಪ- ಆಯುಕ್ತ ಸಾರಿಗೆ ಇಲಾಖೆ, ಬಿ.ಎಸ್. ಲೋಕೇಶ್- ಬಳ್ಳಾರಿ ವಲಯ, ಕೆ.ಟಿ. ಬಾಲಕೃಷ್ಣ -ಅಗ್ನಿ ಶಾಮಕ ದಳ, ಕೇಂದ್ರ ಸೇವೆಯಲ್ಲಿರುವ ಅಭಿಷೇಕ್ ಗೋಯೆಲ್ ಹಾಗೂ ಕೌಶಲೇಂದ್ರ ಕುಮಾರ್ ಮುಂಬಡ್ತಿ ಪಡೆದಿದ್ದಾರೆ.
ಡಿಐಜಿ ಹುದ್ದೆಗೆಡಾ.ಎಸ್.ಡಿ. ಶರಣ್ಪಪ್ಪ -ಸಿಸಿಬಿ ಜಂಟಿ ಆಯುಕ್ತ ಬೆಂಗಳೂರು, ಎಂ.ಎನ್.ಅನುಚೇತ್- ಜಂಟಿ ಆಯುಕ್ತ ಸಂಚಾರ ಬೆಂಗಳೂರು, ರವಿ.ಡಿ. ಚೆನ್ನಣ್ಣನವರ್- ವ್ಯವಸ್ಥಾಪಕ ನಿರ್ದೇಶಕ ಕಿಯೋನಿಕ್ಸ್, ಬಿ. ರಮೇಶ್- ಆಯುಕ್ತ ಮೈಸೂರು, ಇಡಾ ಮಾರ್ಟಿನ್- ಡಿಐಜಿ ನೇಮಕಾತಿ, ಕೇಂದ್ರ ಸೇವೆಯಲ್ಲಿರುವ ಅಧಿಕಾರಿಗಳಾದ ಬೋರೆಸ್ ಭೂಷಣ್, ಶಾಂತುನು ಸಿನ್ಹಾ, ಅಭಿನವ್ ಖರೆ ಹಾಗೂ ಸಿ. ವಂಶಿಕೃಷ್ಣ ಪದನ್ನೋತ್ತಿ ಪಡೆದು ಅಲ್ಲೇ ಸೇವೆ ಮುಂದುವರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 18 =
Remember me
