ಬೆಂಗಳೂರು;ಹಣ್ಣುಗಳ ರಾಜಾ ಎಂದೇ ಪ್ರಸಿದ್ಧವಾಗಿರುವ ಮಾವಿನಹಣ್ಣಿನ ಸೀಸನ್‌ನಲ್ಲಿ ಶುದ್ಧ ರಾಸಾಯನಿಕ ಮುಕ್ತ ಹಣ್ಣು ಸವಿಯಬೇಕೆಂಬ ಗ್ರಾಹಕರಿಗೆ ರಾಜ್ಯ ತೋಟಗಾರಿಕೆ ಇಲಾಖೆ ಮಾವು ಮತ್ತು ಹಲಸು ಮೇಳವನ್ನು ಆಯೋಜಿಸಿದ್ದು,ಗ್ರಾಹಕರಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ.
ಲಾಲ್‌ಬಾಗ್ ಸಸ್ಯತೋಟದಲ್ಲಿ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿಯು ಆಯೋಜಿಸಿರುವ ಮೇಳದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವು ಮತ್ತು ಹಲಸಿನಹಣ್ಣು ಮಾರಾಟ ಮಾಡಲು ಉತ್ತಮ ವೇದಿಕೆ ನಿರ್ಮಿಸಿದೆ.
ಮೇ24ರಿಂದ ಆರಂಭವಾಗಿರುವ ಮಾವು ಮೇಳವು ಜೂ.10ರವರೆಗೆ ಮುಂದುವರೆಯಲಿದ್ದು,ಸುಮಾರು90ಸ್ಟಾಲ್‌ಗಳಲ್ಲಿ ವಿವಿಧ ತಳಿಯ ಮಾವು ಮತ್ತು ಹಲಸಿನ ಹಣ್ಣುಗಳ ಮಾರಾಟ ಭರದಿಂದ ಸಾಗಿದೆ.ಇದೇ ವೇಳೆ ತೋಟಗಾರಿಕಾ ಇಲಾಖೆಯು ಹಾಪ್‌ಕಾಮ್ಸ್ ಮಳಿಗೆಗಳಲ್ಲೂ ಮಾವು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು,ಗ್ರಾಹಕರು ತಮ್ಮ ಮನೆಯ ಸಮೀಪದಲ್ಲಿರುವ ಹಾಪ್‌ಕಾಮ್ಸ್ ಮಳಿಗೆಗಳಲ್ಲೂ ಮಾವು ಖದೀದಿಸುತ್ತಿದ್ದಾರೆ.
ಮಾವು ಮೇಳಕ್ಕೆ ಮೊದಲೆರಡು ದಿನ ಬೆಂಗಳೂರಿನಲ್ಲಿ ಸುರಿಯುತ್ತಿದ್ದ ಮಳೆ ಹಾಗೂ ಕೆಲಸದ ದಿನವಾದ್ದರಿಂದ ಗ್ರಾಹಕರಿಂದ ನಿರೀಕ್ಷಿತ ರೆಸ್ಪಾನ್ಸ್ ವ್ಯಕ್ತವಾಗಿರಲಿಲ್ಲ.ಆದರೆ ವೀಕೆಂಡ್‌ನಲ್ಲಿ ಬೆಂಗಳೂರಿಗರಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.ಎರಡು ದಿನದಿಂದ ಮಳೆ ಕೊಂಚ ವಿರಾಮ ನೀಡಿರುವುದು ಗ್ರಾಹಕರು ಹೆಚ್ಚಾಗಲು ಕಾರಣ.ಇದೇ ರೀತಿ ಮಳೆ ಅಡಚಣೆಯಾಗದಿದ್ದರೆ ಜೂ.10ರವರೆಗೆ ನಡೆಯುವ ಮಾವು ಮೇಳೆ ಸಂಪೂರ್ಣ ಯಶಸ್ವಿಯಾಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.ಮಾವು ಪ್ರಿಯರು ಕುಟುಂಬ ಸಮೇತವಾಗಿ ಬಂದು ಹಣ್ಣು ಸವಿಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.ಈ ವೀಕೆಂಡ್ ಆನಂದಿಸಲು ಜನರ ಆಯ್ಕೆ ಮಾವು ಮತ್ತು ಹಲಸು ಮೇಳ ಎಂಬುದು ಈ ಮೂಲಕ ಸಾಭೀತಾಗಿದೆ.
ಸುಮಾರು72ಸ್ಟಾಲ್‌ಗಳಲ್ಲಿ15ಕ್ಕೂ ಹೆಚ್ಚು ತಳಿಯ ಮಾವುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. 10ಸ್ಟಾಲ್‌ಗಳಲ್ಲಿ ಹಲಸಿನ ಹಣ್ಣು ಮಾರಾಟವಾಗುತ್ತಿದೆ.ಇನ್ನುಳಿದ ಸ್ಟಾಲ್‌ಗಳಲ್ಲಿ ಮಾವಿನಹಣ್ಣಿನ ಜ್ಯೂಸ್,ಹಲಸಿನ ಹಪ್ಪಳ,ಚಿಪ್ಸ್ ಇನ್ನಿತರೆ ಮಾವು ಮತ್ತು ಹಲಸಿನ ವಿವಿಧ ಉತ್ಪನ್ನಗಳು ಹಾಗೂ ತೋಟಗಾರಿಕಾ ಬೆಳೆಯಾದ ಒಣದ್ರಾಕ್ಷಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಕೇಸರ,ದಶಾರಿ,ಬಾದಾಮಿ,ಅಮರಪಾಳೆ,ರಸಪುರಿ,ಸಿಂಧೂರ,ಮಲಗೋವ,ಮಲ್ಲಿಕಾ,ಇಮಾಮ್‌ಪಸಂದ ಮತ್ತಿತರ ತಳಿಯ ಮಾವಿನಹಣ್ಣುಗಳು ಗ್ರಾಹಕರ ಗಮನ ಸೆಳೆಯುತ್ತಿವೆ.ಹಲಸಿನಹಣ್ಣಿನಲ್ಲೂ ಬಕ್ಕೆ,ಚಂದ್ರಬಕ್ಕೆ ಇತ್ಯಾದಿ ವರ್ಣರಂಜಿತ ವೆರೈಟಿಗಳಿದ್ದು,ನೋಡುಗರ ಬಾಯಲ್ಲಿ ನೀರೂರಿಸುತ್ತಿವೆ.ಅತಿ ಕಡಿಮೆ ಬೆಲೆ ಎಂದರೆ ತೋತಾಪುರಿ ಕೆಜಿಗೆ50ರಿಂದ ಇಮಾಮ್‌ಪಸಂದ250ರೂ.ವರೆಗೆ ಕೆಜಿ ಮಾವಿನಹಣ್ಣಿನ ಬೆಲೆ ಇದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಮಾವಿನ ಇಳುವರಿಯಲ್ಲಿ ಕೊಂಚ ಕಡಿಮೆಯಾಗಿದೆಯಾದರೂ;ಗ್ರಾಹಕರ ಬೇಡಿಕೆಗೆ ಅಗತ್ಯವಿರುವಷ್ಟು ಮಾಲು ಮೇಳಕ್ಕೆ ಬರುತ್ತಿದೆ.ಕನಕಪುರ,ಕೋಲಾರ,ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯ ರೈತರು ಮಾವು ಮೇಳದಲ್ಲಿ ಭಾಗವಹಿಸಿದ್ದು,ರೈತರಿಂದ ನೇರವಾಗಿ ಗ್ರಾಹಕರು ಕೊಳ್ಳುತ್ತಿದ್ದಾರೆ ಎಂದು ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿಯ ಉಪ ನಿರ್ದೇಶಕ ಶಿವಪ್ರಸಾದ್ ತಿಳಿಸಿದ್ದಾರೆ
ಪ್ರತಿದಿನ ಬೆಳಗ್ಗೆ10ರಿಂದ ಸಂಜೆ6ರವರೆಗೆ ವ್ಯಾಪಾರಕ್ಕೆ ಸಮಯ ನಿಗದಿಯಾಗಿದೆಯಾದರೂ ಬೆಳಗ್ಗೆ ವಾಯು ವಿಹಾರಕ್ಕೆ ಬರುವ ಜನರು7ಗಂಟೆಯಿಂದಲೇ ಖರೀದಿ ಮಾಡುತ್ತಿದ್ದಾರೆ.ಅದರಲ್ಲೂ ಹಲಸಿನಹಣ್ಣನ್ನು ಸವಿಯಲು ಮಳಿಗೆಗಳ ಮುಂದೆ ಜನದಟ್ಟಣೆಯಾಗುತ್ತಿದೆ ಎಂದು ಅವರು ವಿವರಿಸಿದರು.
“ಮಾವು ಮತ್ತು ಹಲಸು,ಮೇಳವನ್ನು ಆಯೋಜಿಸುವ ಹಾಗೆ ಒಣದ್ರಾಕ್ಷಿ ಮೇಳವನ್ನು ಪ್ರತ್ಯೇಕವಾಗಿ ಮಾಡಬೇಕು.ವಿಜಯಪುರ,ಬೆಳಗಾವಿ,ಬಾಗಲಕೋಟೆ ಜಿಲ್ಲೆಗಳಲ್ಲಿ ಒಣದ್ರಾಕ್ಷಿ ಹೆಚ್ಚಿಗೆ ಇದೆ.ಬೆಂಗಳೂರು ಸುತ್ತಮುತ್ತ ಕೇವಲ ಹಸಿದ್ರಾಕ್ಷಿ ಬೆಳೆಯುತ್ತಾರೆ.ಆ ರೈತರ ಅನುಕೂಲಕ್ಕೆ ದ್ರಾಕ್ಷಿ ಮತ್ತು ವೈನ್ ಮೇಳೆ ಆಯೋಜಿಸುತ್ತಾರೆ.ಅದೇ ರೀತಿ ಬೆಂಗಳೂರಿನ ಗ್ರಾಹಕರಿಗೆ ರೈತರಿಂದ ನೇರವಾಗಿ ಒಣದ್ರಾಕ್ಷಿ ಮಾರಾಟ ಮಾಡಲು ಪೂರಕವಾಗಿ ಒಣದ್ರಾಕ್ಷಿ ಮೇಳ ಆಯೋಜಿಸಬೇಕು.ಮಾವು ಮೇಳದಲ್ಲಿ ಪ್ರಾಯೋಗಿಕವಾಗಿ ಒಂದು ಒಣದ್ರಾಕ್ಷಿ ಮಳಿಗೆ ತೆರೆಯಲಾಗಿದ್ದು,ಗ್ರಾಹಕರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ.ಇಲಾಖೆ ಈ ಬಗ್ಗೆ ಗಮನಹರಿಸಿ ಪ್ರತ್ಯೇಕ ಒಣದ್ರಾಕ್ಷಿ ಮೇಳವನ್ನು ಆಯೋಜಿಸಿದರೆ ರೈತರು ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ”
–ಶಿವಕುಮಾರಸ್ವಾಮಿಗಳು,ದ್ರಾಕ್ಷಿ ಬೆಳೆಗಾರರು,ಕರಿಭಂಟನಾಳ,ವಿಜಯಪುರ ಜಿಲ್ಲೆ
“ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿಸುವುದರಿಂದ ರಾಸಾಯನಿಕ ವಸ್ತುವನ್ನು ಬಳಸಿರುವ ಆತಂಕ ಇರುವುದಿಲ್ಲ.ಮೇಲಾಗಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರಿಗೆ,ಗ್ರಾಹಕರಿಗೆ ಇಬ್ಬರಿಗೂ ಲಾಭವಾಗುತ್ತದೆ.ತೋಟಗಾರಿಕೆ ಇಲಾಖೆ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಮಾವು ಮೇಳದಲ್ಲಿ ಉತ್ತಮ ಹಣ್ಣುಗಳು ದೊರೆತಿವೆ.”
–ಸುಗುಣ,ಗ್ರಾಹಕರು,ವಿದ್ಯಾಪೀಠ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × 2 =
Remember me
