
ಬೆಂಗಳೂರು:ದಕ್ಷಿಣ ರಾಜ್ಯಗಳಲ್ಲಿ ಸಕ್ಕರೆ ಇಳುವರಿ ಕಡಿಮೆ ಇರುವ ಕಾರಣ ರೈತರು ನಷ್ಟ ಅನುಭವಿಸುತ್ತಿದ್ದಾರೆ. 10.25ಕ್ಕೆ ಸಕ್ಕರೆ ಇಳುವರಿ ಪ್ರಮಾಣ ಹೆಚ್ಚಿಸಿರುವುದರಿಂದ ರೈತರಿಗೆ ಅನ್ಯಾಯವಾಗಿದೆ. ಈಗಿನ ಕಬ್ಬಿನ ಎಫ್‌ಆರ್‌ಪಿ ದರ ನಿಗದಿ ಮಾನದಂಡ ಬದಲಾಯಿಸಿ ಸಕ್ಕರೆ ಇಳುವರಿ 9ಕ್ಕೆ ಇಳಿಸಬೇಕು. ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಮನವಿ ಮಾಡಿದೆ.
ಪ್ರಸಕ್ತ ಸಾಲಿನಲ್ಲಿ ಟನ್ಗೆ 3400 ಎಫ್‌ಆರ್‌ಪಿ ದರ ನಿಗದಿಪಡಿಸಿರುವುದನ್ನು ಪುನರ್ ಪರಿಶೀಲಿಸಬೇಕು ಟನ್ ಗೆ 4000 ರೂ.ಗೆ ಏರಿಕೆ ಮಾಡಬೇಕು, ಕಬ್ಬು ಕಟಾವು ಗೊಬ್ಬರದ ಬೆಲೆ ಏರಿಕೆಯಾಗಿದೆ ಸಾಗಣೆ ವೆಚ್ಚ, ಕಬ್ಬಿನ ಬೀಜದ ಬೆಲೆ ಏರಿಕೆ ಪ್ರಕಾರ. ಎ್.ಆರ್.ಪಿ ದರ ಏರಿಕೆಯಾಗಿಲ್ಲ ಹಾಗಾಗಿ ದರ ಮರು-ಪರಿಶೀಲಿನ ಮಾಡಬೇಕು ಹಾಗೂ ಕಬ್ಬಿನ ಎ್ ಆರ್‌ಪಿ ದರ ನಿಗದಿ ಮಾಡುವಾಗ ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಲು ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ತರಬೇಕು.ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರ್ ಸ್ವಾಮಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಕಬ್ಬು ಕಟಾವು ಸಾಗಣೆ 15 ರಿಂದ 16 ತಿಂಗಳುಗಳು ಆಗುತ್ತಿರುವುದರಿಂದ ಬ್ಯಾಂಕಿನ ಸಾಲದ ಮರುಪಾವತಿ ಅವಧಿ ವಿಳಂಬವಾಗುತ್ತಿದೆ. ಸಾಲ ಮರುಪಾವತಿ ವಿಳಂಬದಿಂದ ರೈತರು ಸುಸ್ತಿದಾರರಾಗುತ್ತಿದ್ದಾರೆ ಇದರಿಂದ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತಿದ್ದು, ರೈತರಿಗೆ ಸಾಲ ಸಿಗದಂತಾಗುತ್ತಿದೆ. ಈ ನಿಟ್ಟಿನಲ್ಲಿ ಕಬ್ಬಿನ ಬೆಳೆ ಸಾಲಕ್ಕೆ 20 ತಿಂಗಳ ಮರುಪಾವತಿ ಅವಧಿಯನ್ನು ವಿಸ್ತರಿಸುವುದರ ಜತೆಗೆ ವಿಳಂಬ ಅವಧಿಗೆ 15% ಬಡ್ಡಿಯನ್ನು ಎಫ್‌ಆರ್‌ಪಿ ದರಕ್ಕೆ ಸೇರಿಸಿ ಕೊಡಲು ಆದೇಶಿಸಬೇಕು ಅಲ್ಲದೆ, ರೈತರಿಗೆ ಕೃಷಿ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಮಾನದಂಡಗಳನ್ನು ಕೈಬಿಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಕ್ಕರೆ ಇಳುವರಿ ಪರಿಶೀಲನೆ ನಡೆಸಲು ಕಾರ್ಖಾನೆಗಳಿಗೆ ಅವಕಾಶ ನೀಡಿರುವುದರಿಂದ ರೈತರಿಗೆ ಕಬ್ಬಿನ ಇಳುವರಿಯಲ್ಲಿ ವಂಚನೆ ಜತೆಗೆ ರೈತರಿಗೆ ನಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಸಕ್ಕರೆ ಇಳುವರಿ ಸರಕಾರದ ವತಿಯಿಂದ ಗಮನಿಸಲು ವಿಶೇಷ ಕಾನೂನು ಜಾರಿ ತರಬೇಕು. ಪ್ರಸಕ್ತ ವರ್ಷ ಕಬ್ಬು ಪೂರೈಸಿದ ರೈತರಿಗೆ ಪಸಕ್ತ ವರ್ಷದ ಎ್ ಆರ್ ಪಿ ದರ ಸಿಗುವಂತಹ ವ್ಯವಸ್ಥೆ ಜಾರಿಗೆ ತನ್ನಿ ಎಂದು ತಿಳಿಸಿದ್ದಾರೆ.
ಕಬ್ಬು ಬೆಳೆದ ರೈತರು ಅತಿವೃಷ್ಟಿ, ಮಳೆ ಹಾನಿ ಹಾಗೂ ಪ್ರವಾಹದಿಂದ ಕಬ್ಬು ಹಾಳಾಗುತ್ತದೆ ಇಂಥ ಪರಿಸ್ಥಿತಿಯಲ್ಲಿ ರೈತರಿಗೆ ಯಾವುದೇ ಪರಿಹಾರ ಸಿಗುತ್ತಿಲ್ಲ ಹಾಗಾಗಿ ರೈತರಿಗೆ ಬೆಳೆ ವಿಮೆ ಮಾಡಿಸಬೇಕು. ಮಂಡ್ಯಮೈ ಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಎಥನಾಲ್ ಘಟಕ ಆರಂಭಿಸದರೆ ರೈತರಿಗೆ ಉತ್ತಮ ದರ ಸಿಗುವುದರ ಜತೆಗೆ ಸರ್ಕಾರಕ್ಕೂ ಹೆಚ್ಚು ಲಾಭ ಬರಲಿದೆ. ರೈತರು ಆಲೆಮನೆಗಳಲ್ಲಿ ಎಥನಾಲ್ ಉತ್ಪಾದನೆ ಮಾಡಲು ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.ಸಕ್ಕರೆ ನಿಯಂತ್ರಣ ಕಾಯಿದೆ 1966ರ ಪ್ರಕಾರ ರೈತರಿಗೆ ಕಬ್ಬು ಸರಬರಾಜು ಮಾಡಿದ 14 ದಿನಗಳಲ್ಲಿ ಹಣ ಪಾವತಿಸಬೇಕು. ಇದನ್ನು ಯಾವುದೇ ಕಾರ್ಖಾನೆಗಳು ಪಾಲಿಸುತ್ತಿಲ್ಲ, ಆದ್ದರಿಂದ ಕಾನೂನನ್ನು ತಿದ್ದುಪಡಿ ಮಾಡಿ ಕಾರ್ಖಾನೆಯ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ರೈತರಿಗೆ ಅಧಿಕಾರ ನೀಡಲು ಕೇಂದ್ರ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವರ ಭೇಟಿಯ ನಂತರ ನವದೆಹಲಿಯಲ್ಲಿ ಕರ್ನಾಟಕ ಭವನದಲ್ಲಿ ಪತ್ರಿಕಾ ವರದಿಗಾರರ ತಿಳಿಸಿದ್ದಾರೆ.

.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:twelve − eleven =
Remember me
