|ವಿ.ಅನಂತ ನಾಗೇಶ್ವರನ್
ಕೇಂದ್ರ ಹಣಕಾಸು ಸಚಿವರು ಫೆಬ್ರವರಿ 1ರಂದು ಮಂಡಿಸಿದ 2022-23ರ ಬಜೆಟ್​ನಲ್ಲಿ ನಾಲ್ಕು ’c’ಗಳಾದ continuity (ನಿರಂತರತೆ), correctness (ನಿಖರತೆ), conservatism (ಸಾಂಪ್ರದಾಯಿಕತೆ) ಮತ್ತು crowding-in (ಹೂಡಿಕೆಗೆ ಉತ್ತೇಜನ) ಉತ್ಕೃಷ್ಟತೆಯ ಲಕ್ಷಣಗಳಾಗಿವೆ. ಲಾಭದಾಯಕವಲ್ಲದ ಎಲ್ಲ ವಲಯಗಳನ್ನು ಮೇಲಕ್ಕೆತ್ತುವ ಪ್ರಯತ್ನ 2 ವರ್ಷಗಳ ಹಿಂದೆ ಪ್ರಾರಂಭವಾಗಿದ್ದು, ಅದು ಈ ಬಜೆಟ್​ನಲ್ಲೂ ಮುಂದುವರಿದಿದೆ. ಕರೊನಾ ಸಾಂಕ್ರಾಮಿಕ ರೋಗದಿಂದ ಕಳೆದ ಎರಡು ವರ್ಷಗಳಲ್ಲಿ ಸೃಷ್ಟಿಯಾಗಿರುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಹೀಗಾಗಿ ಸಮಾಜದ ದುರ್ಬಲ ವರ್ಗಗಳಿಗೆ ಸರ್ಕಾರವು ತುರ್ತಸಾಲ ಯೋಜನೆ, ತುರ್ತು ಆಹಾರ ಬೆಂಬಲದ (ಪಿಎಂ ಗರಿಬ್ ಕಲ್ಯಾಣ್ ಯೋಜನೆ) ಮೂಲಕ ಸಂಪನ್ಮೂಲಗಳನ್ನು ಸಕಾಲಿಕವಾಗಿ ಒದಗಿಸಿದೆ. ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಸಾರ್ವಜನಿಕ ಆಹಾರಧಾನ್ಯ ವಿತರಣೆಯನ್ನು ಹಲವಾರು ಬಾರಿ ವಿಸ್ತರಿಸಲಾಗಿದೆ, ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಯಕ್ರಮ ಮತ್ತು ಪಿಎಂ-ಕಿಸಾನ್​ಗೆ ಹೆಚ್ಚಿನ ಅನುದಾನ ಒದಗಿಸಲಾಗಿರುವುದು ಗಮನಾರ್ಹ.
ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆ (ಎಂಎಸ್​ಎಂಇ) ಗಳಿಗಾಗಿ ಸಾಲ ಖಾತ್ರಿ ಟ್ರಸ್ಟ್​ನ ಪರಿಷ್ಕರಣೆ ಮತ್ತು ಅದಕ್ಕೆ ಹೆಚ್ಚುವರಿ ಬಂಡವಾಳ ಹೂಡಿಕೆಯಿಂದ ಎಂಎಸ್​ಎಂಇಗೆ ಹೆಚ್ಚುವರಿಯಾಗಿ 2 ಲಕ್ಷ ಕೋಟಿ ರೂ. ಸಾಲ ಲಭ್ಯವಾಗುವಂತೆ ಮಾಡಲಾಗಿದೆ. ಆರ್ಥಿಕತೆಯಲ್ಲಿ ಪ್ರಮುಖ ರಚನಾತ್ಮಕ ಬದಲಾವಣೆ ತರಲು ಸರ್ಕಾರವು ಸಾಂಕ್ರಾಮಿಕ ಬಿಕ್ಕಟ್ಟನ್ನು ಒಂದು ಅವಕಾಶವನ್ನಾಗಿ ಬಳಸಿ ಕೊಂಡಿದೆ. ಉದಾಹರಣೆಗೆ, 14 ವಲಯಗಳಿಗೆ ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆ, ಪೂರ್ವಾನ್ವಯ ತೆರಿಗೆಗೆ ಸಂಬಂಧಿಸಿದ ಅನಿಶ್ಚಿತತೆಗೆ ತೆರೆ, ಖಾಸಗೀಕರಣ, ಕಾರ್ಪೆರೇಟ್ ಮತ್ತು ವೈಯಕ್ತಿಕ ಆದಾಯ ತೆರಿಗೆದಾರರು ಕಡಿಮೆ ತೆರಿಗೆ ದರಗಳನ್ನು ಆಯ್ದುಕೊಳ್ಳುವ ಅಥವಾ ಹಳೆಯ ವಿಧಾನದಲ್ಲಿ ರಿಟರ್ನ್ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಜತೆಗೆ, ಗತಿಶಕ್ತಿ ಡ್ಯಾಶ್​ಬೋರ್ಡ್​ಗೆ ಚಾಲನೆ, ಸರ್ಕಾರದ ಖರೀದಿಯಲ್ಲಿ ಸುಧಾರಣೆಗಳು, ಫ್ಯಾಕ್ಟರಿಂಗ್ ಕಾನೂನುಗಳಿಗೆ ಬದಲಾವಣೆಗಳಂಥ ಪ್ರಮುಖ ಪ್ರಕ್ರಿಯೆ- ಆಧಾರಿತ ಕ್ರಮಗಳನ್ನು ಪ್ರಾರಂಭಿಸಲಾಗಿದೆ. 2022-23ರ ಬಜೆಟ್, ರಚನಾತ್ಮಕ ಸುಧಾರಣೆಗಳು ಮತ್ತು ಪ್ರಕ್ರಿಯೆ ಸುಧಾರಣೆಗಳನ್ನು ಸಂಯೋಜಿಸುವ ವಿಧಾನಕ್ಕೆ ಒತ್ತು ನೀಡಿದೆ. ಉದಾಹರಣೆಗೆ, ಗತಿಶಕ್ತಿ ಅಡಿಯಲ್ಲಿ ಅನೇಕ ಉಪಕ್ರಮ, ಹಲವು ಪೋರ್ಟಲ್​ಗಳ (ಉದ್ಯಮ್ ಇ-ಶ್ರಮ್ ಎನ್​ಸಿಎಸ್ ಮತ್ತು ಎಎಸ್​ಇಇಎಂ) ಅಂತರ್ ಜೋಡಣೆ, ಎಂಎಸ್​ಎಂಇಗೆ ಸಾಲಸೌಲಭ್ಯಗಳು, ಕೌಶಲವರ್ಧನೆ, ಕೋರ್-ಬ್ಯಾಂಕಿಂಗ್ ಸೌಲಭ್ಯದೊಂದಿಗೆ ಅಂಚೆಕಚೇರಿಗಳನ್ನು ಸಕ್ರಿಯಗೊಳಿಸುವುದು ಮತ್ತು ಮೂಲ ಆದಾಯದಲ್ಲಿನ ದೋಷಗಳನ್ನು ಸರಿಪಡಿಸಲು ಎರಡು ವರ್ಷಗಳವರೆಗೆ ನವೀಕರಿಸಿದ ತೆರಿಗೆ ರಿಟರ್ನ್ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಏರ್ ಇಂಡಿಯಾಗೆ ನೀಡಿದ 52 ಸಾವಿರ ಕೋಟಿ ರೂ.ಗಳ ನೆರವನ್ನು ಹೊರತು ಪಡಿಸಿಯೂ ಸರ್ಕಾರದ ಬಂಡವಾಳ ವೆಚ್ಚ ಪರಿಷ್ಕೃತ ಬಜೆಟ್ ಅಂದಾಜಿಗಿಂತ ಶೇ.36ರಷ್ಟು ಹೆಚ್ಚಾಗುತ್ತದೆ. ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರಗಳಿಗೆ 1 ಲಕ್ಷ ಕೋಟಿ ರೂ.ಗಳ (50 ವರ್ಷಗಳ ಅವಧಿಗೆ ಬಡ್ಡಿರಹಿತ) ಸಾಲಗಳನ್ನು ಇದು ಒಳಗೊಂಡಿದೆ. ಇದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿದ 69 ಸಾವಿರ ಕೋಟಿ ರೂ.ಗಳ ಅನುದಾನವನ್ನೂ ಒಳಗೊಂಡಿದೆ.
ರಾಜ್ಯ ಸರ್ಕಾರಗಳಿಗೆ 1 ಲಕ್ಷ ಕೋಟಿ ರೂ.ಗಳವರೆಗೆ ಹೆಚ್ಚುವರಿ ಸಾಲ ಪಡೆಯಲು ಅನುಮತಿಸಲಾಗಿದೆ. ಈ ಬಡ್ಡಿರಹಿತ ಸಾಲವನ್ನು ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ. ರಾಜ್ಯಗಳ ಬಂಡವಾಳ ವೆಚ್ಚ (ನವೆಂಬರ್ 2021ರವರೆಗೆ) ಹಿಂದಿನ ಹಣಕಾಸು ವರ್ಷದ ಅದೇ ಎಂಟು ತಿಂಗಳಿಗಿಂತ ಶೇ.67 ಹೆಚ್ಚಾಗಿದೆ ಎಂಬ ಅಂಶವು ಈ 50 ವರ್ಷಗಳ ಬಡ್ಡಿರಹಿತ ಸಾಲವನ್ನು ಸಂಪೂರ್ಣವಾಗಿ ಬಂಡವಾಳ ವೆಚ್ಚದ ಉದ್ದೇಶಗಳಿಗೆ ನೀಡುವುದನ್ನು ಸೂಚಿಸಿತ್ತದೆ. ಇತ್ತೀಚಿನ ವರ್ಷಗಳಲ್ಲಿ ಎನ್​ಎಚ್​ಎಐನಲ್ಲಿ ಮಾಡಿದ ಬಂಡವಾಳ ಹೂಡಿಕೆಗಳು ಬಹುತೇಕ ಸಾಲದ ರೂಪದಲ್ಲಿ ಪಡೆದು ಮಾಡಿದ್ದಾಗಿವೆ ಮತ್ತು ಇದು ಬಡ್ಡಿಯ ಹೊರೆಯನ್ನು ಹೆಚ್ಚಿಸಿದೆ. ಆದ್ದರಿಂದ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರಂತರ ಹೂಡಿಕೆ ಖಾತ್ರಿಪಡಿಸಲಾಗಿರುವುದು ಉತ್ತಮ ಬೆಳವಣಿಗೆ.
(ಲೇಖಕರು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
