ಬೆಂಗಳೂರು:ಬಹು ರ್ಚಚಿತ, ಪರ-ವಿರೋಧಕ್ಕೆ ಕಾರಣವಾಗಿದ್ದ ಬಲವಂತದ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ವಿಧಾನಸಭೆಯಲ್ಲಿ ಅನುಮೋದನೆಗೊಂಡು, ಪರಿಷತ್ತಿನಲ್ಲಿ ಬಾಕಿ ಉಳಿದುಕೊಂಡಿದ್ದ ‘ಕರ್ನಾಟಕ ಧಾರ್ವಿುಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧ್ಯಾದೇಶ, 2022’ಕ್ಕೆ ಗುರುವಾರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸಂಪುಟದ ತೀರ್ವನವನ್ನು ಶುಕ್ರವಾರ ರಾಜಭವನಕ್ಕೆ ಕಳಿಸಲಾಗುತ್ತದೆ. ರಾಜ್ಯಪಾಲರು ಕಾನೂನು ತಂಡದ ಜತೆ ಸಮಾಲೋಚಿಸಿ ಸುಗ್ರೀವಾಜ್ಞೆಗೆ ಸಹಿ ಹಾಕಿದ ಕೂಡಲೇ ಮತಾಂತರ ನಿಷೇಧ ಕಾನೂನು ಜಾರಿಗೆ ಬರಲಿದೆ. ಪ್ರಕ್ರಿಯೆಯ ಮುಂದಿನ ಭಾಗವಾಗಿ ಆರು ತಿಂಗಳೊಳಗೆ ಅಥವಾ ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಅನುಮೋದನೆ ಪಡೆದುಕೊಂಡರೆ ಸಾಕು. ಅಲ್ಲಿಯವರೆಗೆ ಕಾನೂನು ಜಾರಿಗೆ ಸರ್ಕಾರಕ್ಕೆ ಸಂವಿಧಾನಬದ್ಧ ಅವಕಾಶ ಇರಲಿದೆ.
ಅಡೆ ತಡೆಯ ಹಾದಿ:ಮತಾಂತರ ನಿಷೇಧ ಮಸೂದೆ 2021ರ ಡಿಸೆಂಬರ್​ನಲ್ಲಿ ಬೆಳಗಾವಿ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಮಂಡನೆಯಾಗಿ ಗದ್ದಲದ ನಡುವೆ ಅನು ಮೋದನೆಯಾಗಿತ್ತು. ಅದರೆ ಪರಿಷತ್​ನಲ್ಲಿ ಒಪ್ಪಿಗೆ ಸಿಕ್ಕಿರಲಿಲ್ಲ. ವಿಧೇಯಕಕ್ಕೆ ಒಪ್ಪಿಗೆ ಪಡೆಯಬೇಕೆಂದು ಸರ್ಕಾರ ನಡೆಸಿದ ಪ್ರಯತ್ನ ಹಿಮ್ಮೆಟ್ಟಿಸಲು ಹೈಡ್ರಾಮವೇ ನಡೆದಿತ್ತು. ಬಳಿಕ ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲೂ ಸರ್ಕಾರಕ್ಕೆ ಒಪ್ಪಿಗೆ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ.
ಮುಂದೆ ಅನುಮೋದನೆ:ವಿಧಾನಸಭೆ ಅನುಮೋದನೆ ಸಿಕ್ಕಿರುವುದರಿಂದ ಪರಿಷತ್​ನಲ್ಲಿ ಅಧ್ಯಾದೇಶಕ್ಕೆ ಒಪ್ಪಿಗೆ ಪಡೆದುಕೊಂಡರೆ ಸಾಕಾಗುತ್ತದೆ. ಒಂದು ವೇಳೆ ವಿಧಾನಸಭೆಯಿಂದ ಅನುಮೋದನೆ ರೂಪದಲ್ಲಿರುವ ಮಸೂದೆಗೆ ತಿದ್ದುಪಡಿ ಮಾಡಬೇಕಾದ ಸಂದರ್ಭ ಬಂದಲ್ಲಿ ಪುನಃ ವಿಧಾನಸಭೆಯಲ್ಲಿ ಮಂಡನೆಯಾಗಿ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ. ವಿಧಾನ ಪರಿಷತ್​ನಲ್ಲಿ ಸರ್ಕಾರಕ್ಕೆ ಈವರೆಗೂ ಬಹುಮತ ಇರಲಿಲ್ಲ. ಒಂದು ವೇಳೆ ವಿಧೇಯಕವನ್ನು ಪರ್ಯಾಲೋಚನೆ ಪ್ರಕ್ರಿಯೆಗೆ ತೆಗೆದುಕೊಂಡ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಜಂಟಿಯಾಗಿ ಮಸೂದೆ ತಿರಸ್ಕರಿಸಲು ಅವಕಾಶವಿತ್ತು ಅಥವಾ ಜಂಟಿ ಸದನ ಸಮಿತಿಗೆ ಕೊಡುವಂತೆ ಒತ್ತಡ ಹೇರಿ ಒಂದಷ್ಟು ಕಾಲ ತಡೆಹಾಕಬಹುದಿತ್ತು. ಪ್ರಸ್ತುತ 75 ಸದಸ್ಯ ಬಲದ ವಿಧಾನಪರಿಷತ್​ನಲ್ಲಿ ಆಡಳಿತ ಪಕ್ಷ 37 ಸದಸ್ಯರನ್ನು (ಶೇ.49.3) ಹೊಂದಿದೆ. ಇತ್ತೀಚೆಗಷ್ಟೇ ಸಿಎಂ ಇಬ್ರಾಹಿಂ ರಾಜೀನಾಮೆ ಕೊಟ್ಟಿರುವುದರಿಂದ ಪ್ರತಿಪಕ್ಷದ ಬಲ ಒಂದು ಸ್ಥಾನ ತಗ್ಗಿದೆ. ಜತೆಗೆ ಪರಿಷತ್​ನ ಏಳು ಸ್ಥಾನಕ್ಕೆ ಜೂ.3ಕ್ಕೆ ಚುನಾವಣೆ ನಡೆಯಲಿದ್ದು, ಆಡಳಿತ ಪಕ್ಷದ ಬಲ 39ಕ್ಕೆ ಏರಲಿದೆ. ಇದರಿಂದ ವಿಧೇಯಕ ಪಾಸ್ ಮಾಡಿಕೊಳ್ಳಲು ಸಲೀಸಾಗಲಿದೆ.
ಸುಗ್ರೀವಾಜ್ಞೆ ಮೊರೆ ಏಕೆ?:ವಿಧಾನಸಭೆಯಲ್ಲಿ ಅನುಮೋದನೆ ರೂಪದಲ್ಲಿರುವ ‘ಕರ್ನಾಟಕ ಧಾರ್ವಿುಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ’ ಪರಿಷತ್​ನಲ್ಲಿ ಅನುಮೋದನೆ ಪಡೆದ ನಂತರ ರಾಜ್ಯಪಾಲರ ಸಹಿ ಆದ ಬಳಿಕವಷ್ಟೇ ಕಾನೂನು ಜಾರಿ ಮಾಡಬಹುದು. ಸದ್ಯಕ್ಕೆ ಅಧಿವೇಶನ ನಡೆಯದ ಕಾರಣ ಈ ಪ್ರಕ್ರಿಯೆ ಅಸಾಧ್ಯ. ಹೀಗಾಗಿ ಸುಗ್ರೀವಾಜ್ಞೆಯ ಸಂವಿಧಾನ ಬದ್ಧ ಅಧಿಕಾರ ಬಳಸಿಕೊಳ್ಳಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + thirteen =
Remember me
