ಬೆಂಗಳೂರು:ಸರ್ಕಾರಕ್ಕೆ ಅನಗತ್ಯ ಆರ್ಥಿಕ ಹೊರೆ, ನೌಕರರಿಗೆ ಕಿರುಕುಳ ತಪ್ಪಿಸಲು ಅಮಾನತು ಕ್ರಮವನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಿದ್ದು, ಸಂಬಂಧಿಸಿದ ನಿಯಮಗಳನ್ನು ತಿದ್ದುಪಡಿ ಮಾಡಿದ ಅಧಿಕೃತ ಆದೇಶ ಪ್ರಕಟಿಸಲಾಗಿದೆ.
ಕರ್ತವ್ಯಲೋಪ, ಅಧಿಕಾರ ದುರ್ಬಳಕೆ ಇನ್ನಿತರ ಆರೋಪಗಳಡಿ ಅಮಾನತಾದ ನೌಕರನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು 6 ತಿಂಗಳು ಗಡುವು ವಿಧಿಸಲಾಗಿದೆ. ಸಕ್ಷಮ ಪ್ರಾಧಿಕಾರ ಇದರಲ್ಲಿ ವಿಫಲವಾದರೆ 6 ತಿಂಗಳು ಅವಧಿ ಪೂರ್ಣಗೊಂಡ ದಿನಾಂಕದಿಂದ ಅಮಾನತು ಆದೇಶ ತನ್ನಿಂದ ತಾನೇ (ಡೀಮ್್ಡ) ರದ್ದಾಗಲಿದೆ. ಲೋಕಾಯುಕ್ತ ಪ್ರಕರಣಗಳಿಗೂ ಇದೇ ನಿಯಮವನ್ನು ಅನ್ವಯಿಸಲಾಗಿದೆ. ‘ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 10’ಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಕುರಿತು ಬುಧವಾರ ಆದೇಶಿಸಿದೆ.
ನಿಯಮ ತಿದ್ದುಪಡಿಯಂತೆ ಮರು ಸೂಚನೆಗಳು: =ಅಮಾನತುಗೊಂಡ 6 ತಿಂಗಳೊಳಗೆ ಆಪಾದಿತ ನೌಕರನ ವಿರುದ್ಧ ಇಲಾಖೆ ವಿಚಾರಣೆ ಪ್ರಾರಂಭಿಸಬೇಕು ಇಲ್ಲವೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಈ ಅವಧಿಯೊಳಗೆ ತೀರ್ಮಾನ ಕೈಗೊಳ್ಳಲು ವಿಫಲವಾದರೆ ಅವಧಿ ಪೂರ್ಣಗೊಂಡ ದಿನಾಂಕದಿಂದ ಸ್ವಯಂಚಾಲಿತ (ಡೀಮ್್ಡ) ಆಧಾರದಲ್ಲಿ ಅಮಾನತು ರದ್ದಾಗಲಿದೆ. =ಭ್ರಷ್ಟಾಚಾರ ಆರೋಪದಡಿ ಲೋಕಾಯುಕ್ತ ದಾಖಲಿಸಿಕೊಂಡ ಪ್ರಕರಣಗಳಿಗೂ ಇದೇ ನಿಯಮ ಅನ್ವಯಿಸಲಾಗಿದೆ. =ಅಮಾನತು ರದ್ದಾದ ಬಳಿಕ ಅಂತಹ ನೌಕರನು ನೇಮಕ ಪ್ರಾಧಿಕಾರದಿಂದ ಸ್ಥಳ ನಿಯುಕ್ತಿ ಆದೇಶವನ್ನು ತಕ್ಷಣವೇ ಕೋರಬೇಕು. ಇಲ್ಲವಾದರೆ ಕರ್ತವ್ಯಕ್ಕೆ ಅನಧಿಕೃತ ಗೈರಾಗಿದ್ದಾನೆ ಎಂದು ಪರಿಗಣಿಸಬೇಕು. =ನಿಗದಿತ ಅವಧಿಯೊಳಗೆ ಇಲಾಖೆ ವಿಚಾರಣೆ ಪ್ರಾರಂಭ ಇಲ್ಲವೇ ದೋಷಾರೋಪ ಪಟ್ಟಿ ಸಲ್ಲಿಸದಿದ್ದರೆ ಅಂತಹ ನೌಕರನನ್ನು ಮರು ಸೇವೆಗೆ ನಿಯುಕ್ತಿ ಕುರಿತು ಸಕ್ಷಮ ಪ್ರಾಧಿಕಾರಿಯು ನಿರ್ಧರಿಸಬಹುದಾಗಿದೆ.=ಅಮಾನತು ತೆರವಾದ ಬಳಿಕ ಆ ನೌಕರನು ಯಾವ ಹುದ್ದೆ/ ಸ್ಥಾನದಲ್ಲಿದ್ದಾಗ ಅಮಾನತಾಗಿದ್ದನೋ ಮತ್ತದೆ ಹುದ್ದೆ/ ಸ್ಥಾನದಲ್ಲಿ ನೇಮಿಸುವಂತಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
